ನಿಮ್ಮ ಮೆದುಳಿಗೆ ಹೊಸ ಹೊಸ ಅನುಭವ ನೀಡುವುದರಿಂದ ಅದನ್ನು ಆರೋಗ್ಯವಾಗಿಯೂ, ಹೆಚ್ಚು ಕೆಲಸ ಮಾಡುವಂತೆಯೂ ನೋಡಿಕೊಳ್ಳಬಹುದು. ಮೆದುಳು ಹೆಚ್ಚು ಕೆಲಸ ಮಾಡಿದರೆ ಖಂಡಿತಾ ನೀವು ಬುದ್ಧಿವಂತರೆಂದೆನಿಸಿಕೊಳ್ಳುತ್ತೀರಿ. ನೆನಪಿನ ಶಕ್ತಿ ಹೆಚ್ಚಲು, ಮೆದುಳು ಶಾರ್ಪ್ ಆಗಲು ಈ ಸುಲಭದ ಮೆಂಟಲ್ ವರ್ಕೌಟ್ ಅಭ್ಯಾಸ ಮಾಡಿ.
ನ್ಯೂರೋಬಿಕ್ ಎಕ್ಸರ್ಸೈಸ್‌ಗಳು ಮೆದುಳಿಗೆ ಕ್ರಾಸ್ ಟ್ರೇನಿಂಗ್ ಇದ್ದಂತೆ. ನೋಟ, ವಾಸನೆ, ಸ್ಪರ್ಶ, ರುಚಿ, ಕೇಳುವುದು- ಹೀಗೆ ಇಂದ್ರಿಯಗಳ ಮೂಲಕ ಮೆದುಳಿಗೆ ಹೊಸ ಹೊಸ ಅನುಭವ ನೀಡುವುದರಿಂದ ಮೆದುಳಿನ ಬಳಸದ ಭಾಗಗಳೆಲ್ಲ ಚುರುಕಾಗುತ್ತವೆ. ಈ ಎಕ್ಸರ್ಸೈಸ್‌ಗಳು ನರಕೋಶಗಳು ಮೆದುಳಿನ ಪೋಷಕಾಂಶಗಳನ್ನು ಚೆನ್ನಾಗಿ ಉತ್ಪಾದಿಸಲು ಕಾರಣವಾಗುತ್ತವೆ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಜೊತೆಗೆ, ಸುತ್ತಲಿನ ಕೋಶಗಳೆಲ್ಲ ಹೆಚ್ಚು ಸ್ಟ್ರಾಂಗ್ ಆಗಿ, ಚೆನ್ನಾಗಿ ಕೆಲಸ ಮಾಡುತ್ತವೆ. ಪ್ರತಿ ಬೆಳಗ್ಗೆ ಮೆದುಳಿಗೆ ವರ್ಕೌಟ್ ಮಾಡಿ, ಬದಲಾವಣೆಯನ್ನು ಕೆಲ ದಿನಗಳಲ್ಲಿ ನೀವೇ ಕಾಣಿ.
1. ಎಡಗೈಯಿಂದ ಬ್ರಶ್ ಮಾಡಿ
ನಿಮ್ಮದು ಬಲಗೈ ಡಾಮಿನೆಂಟ್ ಹ್ಯಾಂಡ್ ಆಗಿದ್ದರೆ ಎಡಗೈಯಿಂದ ಬ್ರಶ್ ಮಾಡಿ. ಪೇಸ್ಟನ್ನು ಕೂಡಾ ಎಡಗೈಯಲ್ಲೇ ತೆರೆದು ಬ್ರಶ್‌ಗೆ ಹಾಕಿ. ಇದು ಮೆದುಳಿನ ಬಲ ಭಾಗವನ್ನು ಹೆಚ್ಚು ಬಳಸುತ್ತದೆ. ಇದರಿಂದ ಕೈಯ ಸ್ಪರ್ಶ ಮಾಹಿತಿಯನ್ನು ನಿಯಂತ್ರಿಸಿ, ನಿರ್ಧರಿಸುವ ಮೆದುಳಿನ ಕಾರ್ಟೆಕ್ಸ್‌ನ ಭಾಗಗಳು ಹೆಚ್ಚು ವಿಸ್ತರಿಸುತ್ತವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
undefined
2. ಕಣ್ಣು ಮುಚ್ಚಿ ಸ್ನಾನ ಮಾಡಿ
ಕೇವಲ ಸ್ಪರ್ಶಜ್ಞಾನದ ಆಧಾರದ ಮೇಲೆ ಸ್ನಾನ ಮಾಡಿ. ಗಾಯಗಳಿದ್ದರೆ ಕಾಮನ್ ಸೆನ್ಸ್ ಕೂಡಾ ಬಳಸಿ! ನಲ್ಲಿ ಬಳಸುವುದು, ಬಿಸಿನೀರು ಅಡ್ಜಸ್ಟ್ ಮಾಡುವುದು, ಸ್ನಾನ, ಶೇವ್, ಬಟ್ಟೆ ಹಾಕಿಕೊಳ್ಳುವುದು ಎಲ್ಲವನ್ನೂ ಕಣ್ಣು ಮುಚ್ಚಿಯೇ ಮಾಡಿ. ಅಂದರೆ ಇಲ್ಲಿ ಕೇವಲ ಸ್ಪರ್ಶವನ್ನೇ ಬಳಸುತ್ತೀರಿ. ಇದರಿಂದ ನೀವು ಕಾಣದ ದೇಹದ ಬೇರೆ ಬೇರೆ ಟೆಕ್ಸ್ಚರನ್ನು ಕೈ ಗುರುತಿಸಿ ಮೆದುಳಿಗೆ ಸಂದೇಶ ಕಳುಹಿಸುತ್ತದೆ.
ಬೆಳಗ್ಗೆ ಸ್ನಾನ ಮಾಡಿದರೆ ಹೆಚ್ಚುತ್ತೆ ಫಲವತ್ತತೆ...!
3. ರೂಟಿನ್‌ಗೆ ಬದಲಾವಣೆ ನೀಡಿ
ಯಾವುದೇ ಕೆಲಸ ದಿನಚರಿಯಾದಾಗ ಮೆದುಳನ್ನು ಹೆಚ್ಚು ಬಳಸದೆಯೇ ನಮ್ಮ ಪಾಡಿಗೆ ಯಾವುದೋ ಯೋಚನೆಯಲ್ಲೂ ಅದನ್ನು ಮಾಡಬಲ್ಲಷ್ಟು ಶಕ್ತರಾಗುತ್ತೇವೆ. ಹೀಗಾಗಿ, ದಿನಚರಿಗೆ ಬದಲಾವಣೆ ನೀಡಿ. ಮೆದುಳಿಗೆ ಕೆಲಸ ನೀಡಿ. ನಾಯಿಯನ್ನು ಕರೆದುಕೊಂಡು ಹೋಗುವ ರೂಟ್ ಬದಲಿಸಿ, ಹೊಸ ತಿಂಡಿ ಟ್ರೈ ಮಾಡಿ, ಸಾಮಾನ್ಯವಾಗಿ ನೋಡದ ಟಿವಿ ಚಾನಲ್‌ಗಳನ್ನು ಹಾಕಿ. ತಿಂಡಿ ತಿನ್ನುವ ಮೊದಲೇ ತಯಾರಾಗುತ್ತಿದ್ದರೆ, ತಿಂಡಿಯಾದ ಮೇಲೆ ತಯಾರಾಗಿ ಇತ್ಯಾದಿ.
4. ವಸ್ತುಗಳನ್ನು ಉಲ್ಟಾ ಮಾಡಿ ನೋಡಿ
ಯಾವುದೇ ವಸ್ತುಗಳನ್ನು ನೋಡುವಾಗ ನಿಮ್ಮ ಎಡಭಾಗದ ವರ್ಬಲ್ ಬ್ರೇನ್ ತಕ್ಷಣ ಅದನ್ನು ಗುರುತಿಸಿ, ಹೆಸರಿಸಿ ಗಮನವನ್ನು ಬೇರೆಡೆ ಹರಿಸುತ್ತದೆ. ಆದರೆ ಅವನ್ನು ಉಲ್ಟಾ ಇಟ್ಟು ನೋಡಿದಾಗ ನಿಮ್ಮ ಬಲಭಾಗದ ಮೆದುಳಿನ ನೆಟ್ವರ್ಕ್ ಕೆಲಸವಾರಂಭಿಸುತ್ತದೆ. ಅದರ ಆಕಾರ, ಬಣ್ಣ, ಸಂಬಂಧ ಎಲ್ಲವನ್ನೂ ಗುರುತಿಸತೊಡಗುತ್ತದೆ. ಇದಕ್ಕಾಗಿ ನಿಮ್ಮ ಕುಟುಂಬದ ಫೋಟೋ, ಗಡಿಯಾರ, ಕ್ಯಾಲೆಂಡರ್ ಎಲ್ಲವನ್ನೂ ಉಲ್ಟಾ ಇಟ್ಟು ನೋಡಿ.
5. ಮೂಗಿನೊಂದಿಗೆ ಹೊಸ ಸಂಬಂಧ
ಸಾಮಾನ್ಯವಾಗಿ ಕಾಫಿಯ ಘಮಲು ಬಂತೆಂದರೆ ಬೆಳಗಾಯಿತು ಎನಿಸುತ್ತದೆ. ನಿಮ್ಮ ವಾಸನಾ ಗ್ರಂಥಿಗಳು ಕಾಫಿ ಹಾಗೂ ಬೆಳಗಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಅದಕ್ಕೆ ಚೇಂಜ್ ನೀಡಿ. ಬೆಡ್ ಹತ್ತಿರ ಯಾವುದಾದರೂ ನಿಮಗಿಷ್ಟದ ಸೆಂಟ್ ಇಟ್ಟುಕೊಳ್ಳಿ. ಅಥವಾ ಸುವಾಸನೆಯ ವಸ್ತುವನ್ನಿಟ್ಟುಕೊಳ್ಳಿ. ಉದಾಹರಣೆಗೆ ನಿಂಬೆಹಣ್ಣು. ಬೆಳಗ್ಗೆದ್ದ ಕೂಡಲೇ ಅದನ್ನು ಮೂಸಿ. ವಾರದ ಕಾಲ ರಿಪೀಟ್ ಮಾಡಿ. ಮತ್ತೊಂದು ವಾರಕ್ಕೆ ವೆನಿಲ್ಲಾವನ್ನೋ, ಪುದೀನಾವನ್ನೋ ಟ್ರೈ ಮಾಡಬಹುದು. ಇದರಿಂದ ಮೂಗಿನ ಬೇರೆ ಬೇರೆ ನರನಾಡಿಗಳು ಎಚ್ಚರವಾಗುತ್ತವೆ.
6. ಕಾರ್ ಕಿಟಕಿ ತೆಗೆಯಿರಿ
ಮೆದುಳಿನ ಮೆಮೋರಿ ಬಾಕ್ಸ್ ಹಿಪ್ಪೋಕ್ಯಾಂಪಸ್- ವಾಸನೆ, ಶಬ್ದ, ನೋಟ ಇತ್ಯಾದಿಗಳನ್ನು ಸೇರಿಸಿ ಮೆಂಟಲ್ ಮ್ಯಾಪ್ ಸೃಷ್ಟಿಸುತ್ತಿರುತ್ತದೆ. ಹೀಗಾಗಿ, ಪ್ರತಿ ದಿನ ಕಾರಿನಲ್ಲಿ ಹೋಗುವಾಗ ಕಿಟಕಿ ತೆಗೆಯಿರಿ. ಹೊರಗಿನ ಶಬ್ದ, ವಾಸನೆ, ನೋಟಗಳತ್ತ ವಿಶೇಷ ಗಮನ ಹರಿಸಿ. ಇದರಿಂದ ಹಿಪ್ಪೋಕ್ಯಾಂಪಸ್‌ಗೆ ಜಾಸ್ತಿ ಕೆಲಸ ಕೊಟ್ಟಂತಾಗುತ್ತದೆ. ಅದು ಹೊಸ ಹೊಸ ಮ್ಯಾಪ್ ಸೃಷ್ಟಿಯಲ್ಲಿ ತೊಡಗುತ್ತದೆ.
7. ದಿನದಲ್ಲಿ ಸಾಧ್ಯವಾದಷ್ಟು ಮನುಷ್ಯರೊಂದಿಗೆ ವ್ಯವಹರಿಸಿ
ಎಲ್ಲವೂ ಆನ್‌ಲೈನ್ ಸಾಪಿಂಗ್ ಮಾಡುವ ಬದಲು ಅಂಗಡಿಗೆ ಹೋಗಿ ಸಾಮಾನು ತರುವುದು, ವೆಂಡಿಂಗ್ ಮೆಷಿನ್ ಬದಲಿಗೆ ವ್ಯಕ್ತಿಯಿಂದ ಕಾಫಿ ಕೊಳ್ಳುವುದು, ಸಾಧ್ಯವಾದಷ್ಟು ಗೆಳೆಯರು, ಸಹೋದ್ಯೋಗಿಗಳ ಜೊತೆ ಮಾತನಾಡುವುದು ಇವೆಲ್ಲವೂ ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತವೆ. ಸಾಮಾಜಿಕವಾಗಿ ಜನರಿಂದ ಹೆಚ್ಚು ದೂರ ಉಳಿದಷ್ಟೂ ಮೆದುಳಿನ ಸಾಮರ್ಥ್ಯ ಕುಗ್ಗುವುದನ್ನು ಸಂಶೋಧನೆಗಳು ಹಲವು ಬಾರಿ ದೃಢಪಡಿಸಿವೆ.
ಕಿಡ್ನಿಯಲ್ಲಿ ಕಲ್ಲುಗಳಿಗೇನು ಕೆಲಸ?
8. ಬೇರೆ ತರ ಓದಿ
ಮನಸ್ಸಿನಲ್ಲಿ ಓದುವುದಕ್ಕೆ ಬಳಸಲ್ಪಡುವ ಮೆದುಳಿನ ಸರ್ಕ್ಯೂಟ್‌ಗಳೇ ಬೇರೆ, ಜೋರಾಗಿ ಓದುವುದು, ಓದುವುದನ್ನು ಕೇಳುವುದಕ್ಕೆ ಬಳಸುವ ಸರ್ಕ್ಯೂಟ್‌ಗಳೇ ಬೇರೆ. ಹೀಗಾಗಿ, ಬೇರೆ ಬೆೇರೆ ರೀತಿಯಲ್ಲಿ ಓದಿ ಮೆದುಳಿಗೆ ವ್ಯಾಯಾಮ ನೀಡಿ. ಪುಸ್ತಕ ಉಲ್ಟಾ ಹಿಡಿದು ಓದುವುದು, ದೂರದಲ್ಲಿಟ್ಟು ಓದುವುದು ಮುಂತಾದ ವೆರೈಟಿ ಟ್ರೈ ಮಾಡಬಹುದು.