ಟೆನಿಸ್ ಬಾಲ್ ತೋರಿಸಿ ಅಭಿಮಾನಿಗಳಿಗೆ ಸವಾಲೆಸೆದ ಶಿಲ್ಪಾ ಶೆಟ್ಟಿ, 'ನೀವು ಗೆಲ್ಲೋದು ಈಜಿ ಇಲ್ಲ' ಎಂದಿದ್ದೇಕೆ ನಟಿ?

Published : Nov 16, 2026, 10:32 PM IST
shilpa shetty ball exercises

ಸಾರಾಂಶ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ 'ಬಾಲ್ ಎಕ್ಸರ್‌ಸೈಜ್ ಚಾಲೆಂಜ್' ನೀಡಿದ್ದಾರೆ. ಈ ವ್ಯಾಯಾಮದಿಂದ ಮೆದುಳು ಮತ್ತು ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಅವರು ವಿವರಿಸಿದ್ದಾರೆ. ಅಭಿಮಾನಿಗಳು ಈ ಸವಾಲನ್ನು ಸ್ವೀಕರಿಸಿ ವಿಡಿಯೋ ಹಂಚಿಕೊಳ್ಳಲು ಪ್ರೇರೇಪಿಸಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವ್ಯಾಯಾಮ, ಯೋಗ ವಿಚಾರದಲ್ಲಿ ಎತ್ತಿದ ಕೈ. ಅದಕ್ಕೆ ಅವರು ತುಂಬಾ ಆರೋಗ್ಯವಂತರು ಮತ್ತು ಫಿಟ್ ಅಂಡ್ ಫೈನ್. ತಾವು ಫಿಟ್ ಆಗಿರೋದು ಅಷ್ಟೇ ಅಲ್ಲದೇ, ಆಗಾಗ ಅಭಿಮಾನಿಗಳಿಗೂ ಫಿಟ್ನೆಸ್ ಮಂತ್ರವನ್ನು ಹೇಳಿಕೊಡುತ್ತಾರೆ. ಇದೀಗ ಮತ್ತೊಮ್ಮೆ ನಟಿ ತಮ್ಮ ಅಭಿಮಾನಿಗಳಿಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ!

ಈ ಬಾರಿ ತಮ್ಮ Monday Motivation ಭಾಗವಾಗಿ ಅಭಿಮಾನಿಗಳಿಗೆ ಒಂದು ಮಜವಾದ 'ಬಾಲ್ ಎಕ್ಸರ್‌ಸೈಜ್ ಚಾಲೆಂಜ್' ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲ್ ಬಳಸಿ ವಿವಿಧ ರೀತಿಯ ವ್ಯಾಯಾಮ ಮಾಡುತ್ತಿದ್ದಾರೆ. ನೋಡಲು ತುಂಬಾ ಈಜಿ ಇದ್ದಂತೆ ಕಾಣ್ತಿದೆ. ಈ ವ್ಯಾಯಾಮವು ದೇಹದ ಜೊತೆಗೆ ನಿಮ್ಮ ಮೆದುಳನ್ನೂ ಚುರುಕಾಗಿಡುತ್ತದೆ ಎಂದಿದ್ದಾರೆ.

ಅಭಿಮಾನಿಗಳಿಗೆ ಶಿಲ್ಪಾ ಶೆಟ್ಟಿ ಚಾಲೆಂಜ್

ವಿಡಿಯೋ ಜೊತೆಗೆ ಕ್ಯಾಪ್ಶನ್ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ, 'ಒಂದು ಬಾಲ್, ಹಲವು ರೀತಿಯ ಚಲನೆಗಳು ಮತ್ತು ಸಂಪೂರ್ಣ ಗಮನ ನೀಡುವ ಅಗತ್ಯವಿದೆ. ಕೇಳಲು ಸುಲಭ ಎನಿಸುತ್ತದೆಯೇ? ನೀವೂ ಇದನ್ನು ಪ್ರಯತ್ನಿಸಿ ಮತ್ತು ಸ್ವತಃ ಅನುಭವಿಸಿ. ನಿಮ್ಮ ವಿಡಿಯೋಗಳಲ್ಲಿ ನನ್ನ ಟ್ಯಾಗ್ ಮಾಡಿ, ನಿಮ್ಮಲ್ಲಿ ಎಷ್ಟು ಜನರು ಈ ಚಾಲೆಂಜ್ ಪೂರ್ಣಗೊಳಿಸುತ್ತೀರಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

ಬಾಲ್ ಎಕ್ಸರ್‌ಸೈಜ್‌ ಪ್ರಯೋಜನಗಳು

ಶಿಲ್ಪಾ ಶೆಟ್ಟಿ ತಮ್ಮ ಪೋಸ್ಟ್‌ನಲ್ಲಿ ಈ ವ್ಯಾಯಾಮದಿಂದ ಮೆದುಳು ಮತ್ತು ದೇಹಕ್ಕೆ ಆಗುವ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಇಲ್ಲಿದೆ.

  • ಮೆದುಳು ಸಕ್ರಿಯ: ಬಾಲ್ ಎಕ್ಸರ್‌ಸೈಜ್ ಮೆದುಳಿನ ವಿವಿಧ ಭಾಗ ಚುರುಕುಗೊಳಿಸುತ್ತದೆ. ಮೆದುಳಿನ ಎಡ ಮತ್ತು ಬಲ ಭಾಗಗಳ ಜೊತೆಗೆ, ನೆನಪಿನ ಶಕ್ತಿ ಚುರುಕಾಗುತ್ತದೆ. ಇಂತಹ ಚಟುವಟಿಕೆಗಳು ಗಮನ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು, ಏಕಾಗ್ರತೆ ಕಾಪಾಡಿಕೊಳ್ಳಲು ಮತ್ತು ಮಾನಸಿಕ ಆಯಾಸ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
  • ದೇಹದ ಸಮತೋಲನ: ವ್ಯಕ್ತಿಯು ಬಾಲ್ ಅನ್ನು ವಿಭಿನ್ನ ರೀತಿಯಲ್ಲಿ ಹಿಡಿದು ವ್ಯಾಯಾಮ ಮಾಡುವಾಗ ದೇಹ ಮತ್ತು ಮೆದುಳು ಎರಡೂ ಒಟ್ಟಾಗಿ ಕೆಲಸ ಮಾಡುತ್ತದೆ. ಇದರಿಂದ ಕೈ ಮತ್ತು ಕಣ್ಣುಗಳ ನಡುವಿನ ಹೊಂದಾಣಿಕೆ ದೇಹವನ್ನು ನಿಯಂತ್ರಿಸುವ ಸಾಮರ್ಥ್ಯ, ಸಮತೋಲನ ಹಾಗೂ ನಮ್ಮ ಚಲನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಸುಧಾರಿಸುತ್ತದೆ.
  • ರಕ್ತ ಸಂಚಾರ ಮತ್ತು ನರಗಳ ಬಲವರ್ಧನೆ: ಈ ರೀತಿಯ ವ್ಯಾಯಾಮದಿಂದ ದೇಹದಲ್ಲಿ ರಕ್ತ ಪರಿಚಲನೆ ಉತ್ತಮ ಆಗಿರುತ್ತದೆ ಹಾಗೂ ಮೆದುಳಿನ ನರಗಳ ನಡುವಿನ ಸಂಪರ್ಕವು ಬಲಗೊಳ್ಳಲು ಸಹಾಯವಾಗುತ್ತದೆ.
  • ಬ್ರೈನ್ ಜಿಮ್: ಕ್ರಾಸ್-ಬಾಡಿ ಮೂವ್‌ಮೆಂಟ್ ಮತ್ತು 'ಬ್ರೈನ್ ಜಿಮ್' ರೀತಿಯ ಈ ವ್ಯಾಯಾಮಗಳು ಕೆಲಸ ಮಾಡುವಾಗ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಬದಲಾಗುವ ಪರಿಸ್ಥಿತಿಗಳಿಗೆ ತಕ್ಕಂತೆ ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.
  • ಒಟ್ಟಾರೆ ಈ ಬಾಲ್ ಎಕ್ಸರ್‌ಸೈಜ್ ಮೆದುಳಿನ ಎರಡೂ ಭಾಗಗಳನ್ನು ಸಕ್ರಿಯವಾಗಿಡಲು, ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಸುಧಾರಿಸಲು, ದೇಹದ ಸಮತೋಲನ ಕಾಯ್ದುಕೊಳ್ಳಲು ಮತ್ತು ಸ್ನಾಯುಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಶಿಲ್ಪಾ ಶೆಟ್ಟಿ ವಿವರಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Anklet Designs: ಮಹಿಳೆಯರು ಮೆಚ್ಚುವ ಗೋಲ್ಡ್ ಪ್ಲೇಟೆಡ್ ಗೆಜ್ಜೆಗಳು.. ಎಷ್ಟು ಚೆನ್ನಾಗಿವೆ ನೋಡಿ!
ಭಾರತದ ಈ ರಾಜ್ಯದಲ್ಲಿ ಹರಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!