ಆರ್‌ಸಿಬಿ ಟೀಮ್‌ ಒಡತಿ ಜೊತೆ 40 ವರ್ಷದ ಜನ್ಮದಿನದ ಆಚರಿಸಿದ ಸಾನಿಯಾ ಮಿರ್ಜಾ

Published : Nov 16, 2026, 09:21 PM IST
Sania Mirza Celebrates 40th Birthday

ಸಾರಾಂಶ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 40ನೇ ಹುಟ್ಟುಹಬ್ಬವನ್ನು ಗೆಳತಿಯರಾದ ಪರಿಣಿತಿ ಚೋಪ್ರಾ ಮತ್ತು ಅನನ್ಯಾ ಬಿರ್ಲಾ ಜೊತೆ ಆಚರಿಸಿಕೊಂಡರು. ಈ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಿಶೇಷ ಶುಭಾಶಯ ಕೋರಿದ್ದಾರೆ.

ಬೆಂಗಳೂರು (ನ.16): ಭಾರತೀಯ ಮಹಿಳಾ ಟೆನಿಸ್ ಪೋಸ್ಟರ್‌ ಗರ್ಲ್‌ ಹಾಗೂ ಡಬಲ್ಸ್ ವಿಭಾಗದ ಮಾಜಿ ವಿಶ್ವ ನಂ.1 ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಭಾನುವಾರ 40ನೇ ವಸಂತಕ್ಕೆ ಕಾಲಿಟ್ಟರು. ತಮ್ಮ ಈ ವಿಶೇಷ 40ನೇ ಹುಟ್ಟುಹಬ್ಬವನ್ನು ಸಾನಿಯಾ ತಮ್ಮ ಅತ್ಯಾಪ್ತ ಗೆಳತಿಯರಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಉದ್ಯಮಿ, ಆರ್‌ಸಿಬಿ (RCB) ಮಾಲೀಕರಾದ ಅನನ್ಯಾ ಬಿರ್ಲಾ ಅವರೊಂದಿಗೆ ಸೇರಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಪರಿಣಿತಿ ಚೋಪ್ರಾ ಮತ್ತು ಅನನ್ಯಾ ಬಿರ್ಲಾ, ಸಂಭ್ರಮದ ಕ್ಷಣಗಳ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಆಪ್ತ ಗೆಳತಿಗೆ ಅತ್ಯಂತ ಪ್ರೀತಿ ಹಾಗೂ ತಮಾಷೆಯ ಶುಭಾಶಯಗಳನ್ನು ಕೋರಿದ್ದಾರೆ.

ಇನ್‌ಸ್ಟಾಗ್ರಾಮ್ ಇರುವುದೇ ನಮ್ಮ ಕೆಟ್ಟ ಫೋಟೋಗಳನ್ನು ಹಾಕುವುದಕ್ಕೆ: ಪರಿಣಿತಿ ಚೋಪ್ರಾ

ಸಾನಿಯಾ ಅವರೊಂದಿಗಿನ ಬರ್ತ್‌ಡೇ ಪಾರ್ಟಿಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ನಟಿ ಪರಿಣಿತಿ ಚೋಪ್ರಾ ಹೃದಯಸ್ಪರ್ಶಿ ಸಾಲುಗಳನ್ನು ಬರೆದುಕೊಂಡಿದ್ದಾರೆ. "ನಾನು ನಿನ್ನನ್ನು ಏಕೆ, ಏಕೆ, ಏಕೆ ಇಷ್ಟೊಂದು ಪ್ರೀತಿಸುತ್ತೇನೆ? ಏಕೆಂದರೆ ನೀನು ನೈಜವಾಗಿದ್ದೀಯ (Real). ಏಕೆಂದರೆ ನೀನು ಸಾಮಾನ್ಯಳಂತೆ (Normal) ಇರುತ್ತೀಯ. ಒಬ್ಬ ಮನುಷ್ಯನಲ್ಲಿ ನನಗೆ ಅತ್ಯಂತ ಇಷ್ಟವಾಗುವ ಎರಡು ಗುಣಗಳಿವು. ಹ್ಯಾಪಿ ಹ್ಯಾಪಿ ಬರ್ತ್‌ಡೇ ನನ್ನ ಅಗ್ಗು (Aggu). ಐ ಲವ್ ಯೂ. ನಾನು ಹೇಳಬೇಕಾದ ಎಲ್ಲವನ್ನೂ ಈಗಾಗಲೇ ಮುಖತಃ ಹೇಳಿದ್ದೇನೆ; ಇನ್‌ಸ್ಟಾಗ್ರಾಮ್ ಇರುವುದೇ ನಮ್ಮ ಕೆಟ್ಟ ಫೋಟೋಗಳನ್ನು ಒಟ್ಟಿಗೆ ಪೋಸ್ಟ್ ಮಾಡುವುದಕ್ಕೆ ಸಾನಿಯಾ ಮಿರ್ಜಾ' ಎಂದು ನಟಿ ಪರಿಣಿತಿ ಚೋಪ್ರಾ ಬರೆದುಕೊಂಡಿದ್ದಾರೆ.

ಜೀವನಪೂರ್ತಿ ನನ್ನ ಜೊತೆ ಸಿಕ್ಕಿಹಾಕಿಕೊಂಡಿರುವುದನ್ನು ಎಂಜಾಯ್ ಮಾಡು: ಅನನ್ಯಾ ಬಿರ್ಲಾ

ಇತ್ತ, ಆರ್‌ಸಿಬಿ (RCB) ಮಾಲೀಕರಾದ ಅನನ್ಯಾ ಬಿರ್ಲಾ ಕೂಡ ಸಾನಿಯಾ ಮಿರ್ಜಾ ಅವರನ್ನು ತಮ್ಮ ಅಕ್ಕ ಮತ್ತು ಬೆಸ್ಟ್ ಫ್ರೆಂಡ್ ಎಂದು ಕರೆದು ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.'ಹುಟ್ಟುಹಬ್ಬದ ಶುಭಾಶಯಗಳು ನನ್ನ ಅಪಿ (Apiiiiii) @mirzasaniar. ಅತ್ಯದ್ಭುತ ವ್ಯಕ್ತಿಯ ರೂಪದಲ್ಲಿ ನನ್ನ ಬೆಸ್ಟ್ ಫ್ರೆಂಡ್ ಮತ್ತು ದೊಡ್ಡಕ್ಕ ಇಬ್ಬರನ್ನೂ ಪಡೆದಿರುವ ನಾನು ಎಷ್ಟು ಅದೃಷ್ಟವಂತೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಜೀವನಪೂರ್ತಿ ನನ್ನ ಜೊತೆ ಸಿಕ್ಕಿಹಾಕಿಕೊಂಡಿರುವುದನ್ನು ಎಂಜಾಯ್ ಮಾಡು. ನಾನು ಯಾವಾಗಲೂ ನಿನ್ನ ಬೆನ್ನಿಗಿರುತ್ತೇನೆ ಎಂದು ಆರ್‌ಸಿಬಿ ಟೀಮ್‌ ಮಾಲಕಿಯಾಗಿರುವ ಉದ್ಯಮಿ ಅನನ್ಯಾ ಬಿರ್ಲಾ ಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಅವರ ಸುವರ್ಣ ವೃತ್ತಿಜೀವನ ಮತ್ತು ಹೊಸ ಜವಾಬ್ದಾರಿ

ಭಾರತದಲ್ಲಿ ಮಹಿಳಾ ಟೆನಿಸ್‌ನ ಸ್ಟಾರ್‌ ಆಗಿ ಮೆರೆದ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಸಾನಿಯಾ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಆರು ಗ್ರ್ಯಾಂಡ್ ಸ್ಲಾಮ್ (Grand Slam) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಮೂರು ಮಹಿಳಾ ಡಬಲ್ಸ್ ಮತ್ತು ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳು ಸೇರಿವೆ. 2023ರಲ್ಲಿ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದ ಸಾನಿಯಾ ಮಿರ್ಜಾ, ಇತ್ತೀಚೆಗಷ್ಟೇ ಅಖಿಲ ಭಾರತ ಟೆನಿಸ್ ಸಂಸ್ಥೆಯ (All India Tennis Association - AITA) ಸಾಮಾನ್ಯ ಸಭೆಗೆ (General Body) ಆಯ್ಕೆಯಾಗುವ ಮೂಲಕ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒದ್ದೆ ಕೂದಲು ಬಾಚುವುದರಿಂದ ಕೂದಲು ಉದುರುತ್ತದೆಯೇ? ಗುಂಗುರು, ನೇರ ಕೂದಲು ಇದ್ದವರು ಗಮನಿಸಿ!
ಮೊಮೊಸ್ ಹುಟ್ಟಿದ್ದು ಎಲ್ಲಿ? ನೇಪಾಳದಿಂದ ಟಿಬೆಟ್ ಮೂಲಕ ಭಾರತಕ್ಕೆ ಬಂದ ಈ ತಿಂಡಿಯ ರೋಚಕ ಇತಿಹಾಸ ಇಲ್ಲಿದೆ