ಆಧ್ಯಾತ್ಮಿಕ ಸಾಧನೆಯನ್ನು ಮಾಡಿದಾಗಲೆಲ್ಲಾ ಫಲಿತಾಂಶನ ನಿರೀಕ್ಷಿಸ್ತೀರಿ.. ಆದ್ರೆ, ಅದು ಈ ಜೀವನದಲ್ಲಿ ಬರಲ್ಲ, ಅದನ್ನು ಈಗ್ಲೇ ನಿರೀಕ್ಷಿಸಬೇಡಿ.. ಅದು ಮರದ ಮೇಲ್ಪದರವನ್ನು ಮುಟ್ಟಲ್ಲ, ಒಳಗಿನ ತಿರುಳನ್ನು ನುಂಗಿ ಹಾಕಿರುತ್ತೆ.. ಆಧ್ಯಾತ್ಮಿಕ ಸಾಧನೆ ಅಂದ್ರೆ ಅದು.. ನೀವು ಮೇಲ್ನೋಟಕ್ಕೆ..
ಆಧ್ಯಾತ್ಮಿಕ ಗುರು ಹಾಗೂ ಯೋಗಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಸನಾತನ ಧರ್ಮದ 'ಕರ್ಮ ಸಿದ್ಧಾಂತ'ದ ಬಗ್ಗೆ ಹೇಳಿದ್ದಾರೆ. ಅದೀಗ ಭಾರೀ ವೈರಲ್ ಆಗ್ತಿದೆ. ಕರ್ಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಪ್ರಾರಬ್ಧ ಕರ್ಮ. ಇನ್ನೊಂದು ಸಂಚಿತ ಕರ್ಮ. ಸಂಚಿ ಅಂದ್ರೆ ಕೈ ಚೀಲ.. ಪ್ರಾರಬ್ಧ ಒಂದು ಜೀವಮಾನಕ್ಕೆ. ಈ ಪ್ರಾರಬ್ಧ ಕರ್ಮ ನಿಮ್ಮ ಜೀವಿತಾವಧಿಯನ್ನು ನಿರ್ಧರಿಸುತ್ತೆ.. ಇವತ್ತು ನಿಮ್ಮ ಪ್ರಾರಬ್ಧ ಕರ್ಮವನ್ನು ಕರಿಗಿಸಿಬಿಟ್ರೆ ನಾವು ನೀವು ಸಾಯಬಹುದು. ಆರೋಗ್ಯಕರವಾಗಿಯೇ ನೀವು ಇರಬಹುದು, ಆದ್ರೆ ಸಾಯ್ತೀರಿ.. ಯಾಕೆ ಅಂದ್ರೆ ಸಾಫ್ಟ್‌ವೇರ್ ಹೋಗ್ಬಿಟ್ಟಿದೆ..
ದೇಹದಲ್ಲಿ ಅದಿಲ್ಲ, ಆ ಜೀವನಕ್ಕೆ ಬೇಕಾದ ಸಾಫ್ಟ್‌ವೇರ್.. ಸ್ವಲ್ಪಕಾಲ ಸುಂದರ ಸ್ಥಿತಿ.. ಆಮೇಲೆ ನಿಶ್ಚಲರಾಗ್ತೀರಿ.., ನಂತ್ರ ಹೋಗ್ತೀರಿ.. ಹೀಗಾಗಿ ನಾವು ಪ್ರಾರಬ್ಧ ಕರ್ಮವನ್ನು ಮುಟ್ಟಲ್ಲ. ಮುಟ್ಟೋದು ಸಂಚಿಯನ್ನ.. ಕರ್ಮದ ಒಂದು ಉಗ್ರಾಣ ಇದೆ. ಈ ಜೀವನದಲ್ಲಿ ಅದು ವ್ಯಕ್ತವಾಗೋದೇ ಇಲ್ಲ, ಬರೋದೇ ಇಲ್ಲ.. ಅದು ಈ ಜೀವನದ ಬಗ್ಗೆ ಅಲ್ಲ.. ಆದ್ರೆ, ಸತ್ವ ತುಂಬಿರೋದು ಅದ್ರಿಂದಾನೇ..
ತ್ರಿವೇಣಿಯಲ್ಲಿ ಎಷ್ಟು ದಿನ ಸ್ನಾನ ಮಾಡಿದ್ರೆ ಪಾಪ ಪರಿಹಾರ, ಸದ್ಗುರು ಹೇಳೋದೇನು?
ಹಾಗಾಗಿ ನಾವು ಸಂಚಿತ ಕರ್ಮನ ಕರಗಿಸಿದ್ರೆ ತುಂಬಾ ದೊಡ್ಡ ಉಗ್ರಾಣ.. ಸರಳ ಉಗ್ರಾಣ ಅಲ್ಲ, ಸಂಕೀರ್ಣ ಉಗ್ರಾಣ.. ಇದು ಕರಗೋಕೆ ಶುರುವಾದ್ರೆ ನಿಮ್ಮ ಜೀವನದಲ್ಲಿ ಏನೂ ಬದಲಾಗಿಲ್ಲ ಅನ್ಸುತ್ತೆ.. ಆದ್ರೆ ಒಂದು ರೀತಿಯ ಪಾರದರ್ಶಕತೆ ಇರುತ್ತೆ.. ನಿಮ್ಮ ಅಸ್ತಿತ್ವದ ಅಪಾರದರ್ಶಕ ಅಂಶಗಳು ಕಡಿಮೆಯಾಗುತ್ತೆ.. ಆದ್ರೆ, ಗೊತ್ತಾಗೋ ತರ ಯಾವುದೇ ಪರಿವರ್ತನೆ ಇಲ್ಲ, ನೀವಿನ್ನೂ ಹಾಗೇ ಇದ್ದೀರಾ, ಅದೇ ವ್ಯಕ್ತಿ.. ನಿಮಗೇ ಆಶ್ಚರ್ಯ ಆಗುತ್ತೆ, ನಿಜವಾಗಿಯೂ ಇದು ಏನು? ಆಧ್ಯಾತ್ಮಿಕ ಪ್ರಕ್ರಿಯೆನಾ ಅಂತ!
ಆಧ್ಯಾತ್ಮಿಕ ಸಾಧನೆಯನ್ನು ಮಾಡಿದಾಗಲೆಲ್ಲಾ ಫಲಿತಾಂಶನ ನಿರ್ಧರಿಸ್ತೀರಿ.. ಆದ್ರೆ, ಅದು ಈ ಜೀವನದಲ್ಲಿ ಬರಲ್ಲ, ಅದನ್ನು ಈಗ್ಲೇ ನಿರೀಕ್ಷಿಸಬೇಡಿ.. ಅದು ಮರದ ಮೇಲ್ಪದರವನ್ನು ಮುಟ್ಟಲ್ಲ, ಒಳಗಿನ ತಿರುಳನ್ನು ನುಂಗಿ ಹಾಕಿರುತ್ತೆ.. ಆಧ್ಯಾತ್ಮಿಕ ಸಾಧನೆ ಅಂದ್ರೆ ಅದು..
ಮಹಾಕುಂಭ ಮೇಳದ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು; ಅವಘಡಕ್ಕೆ ಇದೇ ಕಾರಣ..?!
ನೀವು ಮೇಲ್ನೋಟಕ್ಕೆ ಹಾಗೇ ಇರೋ ಅದೇ ವ್ಯಕ್ತಿ ಆಗಿರ್ತೀರಿ, ಆದ್ರೆ ಒಳಗಿರುವ ಅಂಶಗಳು, ಅಂದ್ರೆ ಸಂಚಿತ ಕರ್ಮಗಳು ಕರಗುತ್ತಾ ಇರುತ್ತವೆ' ಎಂದು ಆಧ್ಯಾತ್ಮ ಗುರು, ಯೋಗಿ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಪ್ರವಚನವೊಂದರಲ್ಲಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.