ಬಿಗ್ಬಾಸ್ ಬ್ಯೂಟಿಗೆ ಕ್ಲೀನ್‌ ಬೌಲ್ಡ್ ಆದ್ರಾ ಸಿರಾಜ್‌: ಮಹಿರಾ ಶರ್ಮಾ ಜೊತೆ ಸಿರಾಜ್ ಡೇಟಿಂಗ್ ನಿಜಾನಾ?

ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಇಬ್ಬರಿಗೂ ಆಪ್ತರಾಗಿರುವ ಮೂಲವೊಂದು ಈ  ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿದೆ ಎಂದು ವರದಿಯಾಗಿದೆ, ಆದರೆ ಅವರು ತಮ್ಮ ಸಂಬಂಧವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ.

Indian Cricketer Mohammed Siraj and Bigg Boss Contestant Mahira Sharma Spark Dating Rumors

ಕ್ರಿಕೆಟ್ ಮೈದಾನದಲ್ಲಿ ತಮ್ಮ ಅದ್ಭುತ ಪ್ರದರ್ಶನಗಳಿಗೆ ಹೆಸರುವಾಸಿಯಾದ 29 ವರ್ಷದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಇತ್ತೀಚೆಗೆ ತಮ್ಮ ಕ್ರಿಕೆಟ್‌ಗಿಂತ  ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಭಾರತೀಯ ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಅವರ ಹೆಸರು ಹಿಂದಿಯ ಖ್ಯಾತ ಗಾಯಕಿ ಅಶಾ ಭೋಂಸ್ಲೆ ಅವರ ಮೊಮ್ಮಗಳಾದ ಜನೈ ಭೋಂಸ್ಲೆ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಜೈನಿ ಭೋಂಸ್ಲೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಜೊತೆಗಿರುವ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಈ ಊಹಾಪೋಹಾಗಳು ಹಬ್ಬಿದ್ದವು. ಆದರೆ ಹೀಗೆ ಗಾಸಿಪ್ ಸೃಷ್ಟಿಯಾಗುತ್ತಿದ್ದಂತೆ ಇಬ್ಬರು ಸ್ಪಷ್ಟನೆ ಕೊಟ್ಟು ನಾವಿಬ್ಬರೂ ಅಣ್ಣ ತಂಗಿ ಅಂತ ಹೇಳಿಕೊಂಡಿದ್ದರು. ಇದಾದ ನಂತರ ಈಗ ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಹೆಸರು ಹಿಂದಿ ಬಿಗ್ಬಾಸ್‌ ಸ್ಪರ್ಧಿಯಾಗಿದ್ದ ನಟಿ ಮಹೀರಾ ಶರ್ಮಾ ಜೊತೆ ತಳುಕು ಹಾಕಿಕೊಂಡಿದೆ. ಇವರಿಬ್ಬರು ಡೇಟಿಂಗ್ ಮಾಡ್ತಿದ್ದು, ತಮ್ಮ ಸಂಬಂಧವನ್ನು ಬಹಳ ಗುಟ್ಟಾಗಿಟ್ಟಿದ್ದಾರೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ. 

ಸಿರಾಜ್ ಮತ್ತು ಮಹಿರಾ ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸಿದ ನಂತರ, ಈ ಜೋಡಿಯ ನಡುವೆ ಸಂಬಂಧ ಇದೆ ಎಂದು ಸಾಕಷ್ಟು ಊಹಾಪೋಹಾಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿದೆ.  2024 ರ ನವೆಂಬರ್‌ನಲ್ಲಿ ಅಭಿಮಾನಿಗಳು ಇವರಿಬ್ಬರ ನಡುವೆ ಪ್ರೇಮ ಚಿಗುರಿದೆ ಎಂದು ಊಹಿಸಲು ಆರಂಭಿಸಿದ್ದರು. ಇದಕ್ಕೂ ಮೊದಲು ಸಿರಾಜ್ ಅವರು ಮಹಿರಾ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಒಂದನ್ನು ಇಷ್ಟಪಟ್ಟರು ಮತ್ತು ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಫಾಲೋ ಮಾಡಲು ಶುರು ಮಾಡಿದ್ದರು. ಈ ಸಣ್ಣ ಸಣ್ಣ ಸೂಚನೆಗಳು ಅವರ ನಡುವೆ ಏನೋ ಬಾಂಧವ್ಯ ಇದೆ ಎಂಬುದನ್ನು ಅವರು ಅಭಿಮಾನಿಗಳು ಗುರುತಿಸಲು ಸಹಾಯಕವಾಗಿದ್ದಲ್ಲದೇ ಇದೇ ಅವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ಗಾಸಿಪ್‌ಗೆ ಕಾರಣವಾಯ್ತು. ಆದರೆ ಇದೇ ನಿಜ ಎಂಬುದನ್ನು ಈ ಜೋಡಿ ಖಚಿತಪಡಿಸಿದೆ ಎಂಬುದನ್ನು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

Latest Videos

ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಇಬ್ಬರಿಗೂ ಆಪ್ತರಾಗಿರುವ ಮೂಲವೊಂದು ಈ  ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿದೆ ಎಂದು ವರದಿಯಾಗಿದೆ, ಆದರೆ ಅವರು ತಮ್ಮ ಸಂಬಂಧವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಪರಸ್ಪರರ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿಕೊಂಡಿದೆ.  ಸಿರಾಜ್ ಮತ್ತು ಮಹಿರಾ ಅದನ್ನು ರಹಸ್ಯವಾಗಿಡಲು ಬಯಸಿದ್ದರೇ ಎಂದು ಮಾಧ್ಯಮಗಳು ಬಹಿರಂಗಪಡಿಸಿದ್ದು, ಈ ಬಗ್ಗೆ ಮಹೀರಾ ಅವರನ್ನು ಕೇಳಿದಾಗ ಅವರು ಈ ಬಗ್ಗೆ ಏನು ಹೇಳದೇ ಮೌನವಾದರು ಹೀಗಾಗಿ ಇದು ಪಕ್ಕಾ ಆಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

ಆಶಾ ಭೋಂಸ್ಲೆ ಅವರ ಮೊಮ್ಮಗಳು ಜೈನಿ ಬೋಂಸ್ಲೆ ಜೊತೆ ಮೊಹಮ್ಮದ್ ಸಿರಾಜ್ ಹೆಸರು ಕೇಳಿ ಬಂದ ಬೆನ್ನಲೇ ಇಂತಹದೊಂದು ವಿಚಾರ ವರದಿಯಾಗಿದೆ. ಜನೈ ಅವರ 23ನೇ ಹುಟ್ಟುಹಬ್ಬದ ವೇಳೆ ಇಬ್ಬರು ಜೊತೆಯಾಗಿ ನಗುತ್ತಿರುವ ಫೋಟೋವೊಂದು ವೈರಲ್ ಆಗುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಹೆಸರನ್ನು ಈಕೆಯೊಂದಿಗೂ ತಳುಕು ಹಾಕಲಾಗಿತ್ತು. ಆದರೆ ಈ ಗಾಸಿಪ್ ಹಬ್ಬಿದ ಕೆಲ ಗಂಟೆಗಳಲ್ಲೇ ಇಬ್ಬರು ಸ್ಪಷ್ಟನೆ ನೀಡಿ ಈ ಗಾಸಿಪ್‌ಗೆ ತೆರೆ ಎಳೆದಿದ್ದರು.

vuukle one pixel image
click me!
vuukle one pixel image vuukle one pixel image