
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದಕ್ಕೆ ಕಾರಣ ಬೇಕಿಲ್ಲ, ಅದೇ ರೀತಿ ಇಲ್ಲೊಂದು ಕಡೆ ಮಲೆನಾಡಿನ ಬದುಕಿನ ದೃಶ್ಯ ಕಾವ್ಯದಂತೆ ಕಾಣುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಎಲ್ಲರ ಸೆಳೆಯತ್ತಿದೆ. ಈ ವೀಡಿಯೋವನ್ನು ನೋಡುತ್ತಾ ಹೋದಂತೆ ಮಲೆನಾಡಿನ ಬದುಕಿನ ಚಿತ್ರಣಗಳು ಕಣ್ಣ ಮುಂದೆ ಪಾಸಾದಂತೆ ಭಾಸವಾಗುತ್ತದೆ.. ಜೊತೆಗೆ ಈ ವೀಡಿಯೋ ಹಲವು ದಶಕಗಳ ಹಿಂದಿನ ಬದುಕಿನ ಚಿತ್ರಣ ಹೇಗಿತ್ತು ಎಂಬುದನ್ನು ಈ ವೀಡಿಯೋ ರೋಮ್ಯಾಂಟಿಕ್ ಆಗಿ ತೆರೆದಿಡುತ್ತದೆ.
ಶ್ರೀಕಾಂತ್ ಶೆಟ್ಟಿ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಮಲೆಗಳಲ್ಲಿ ಮದುಮಗಳು ಭಾಗ- 2, ಇದು ಮಳೆ ನೀರಷ್ಟೇ ಪವಿತ್ರವಾದ ಪ್ರೇಮಕಥೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಗಂಡ ಹೆಂಡತಿ ಜೊತೆಯಾಗಿ ಸೇರಿ ಹೂ ಗಿಡ ನೆಡುವುದರೊಂದಿಗೆ ವೀಡಿಯೋ ಆರಂಭವಾಗುತ್ತದೆ. ಪತ್ನಿ ಗಿಡ ನೆಟ್ಟರೆ ಪತ್ನಿ ನೀರು ಹೊಯ್ತನೆ. ಗಂಡ ಸ್ಕೂಟರ್ ಸರಿ ಮಾಡ್ತಿದ್ರೆ ಹೆಂಡ್ತಿ ಸ್ಕ್ರೂ ಡ್ರೈವರ್ ಹಿಡಿದು ಬರ್ತಾಳೆ ಅದನ್ನು ಗಂಡನಿಗೆ ಕೊಡದೇ ಕೊಟ್ಟಂತೆ ಮಾಡಿ ತುಂಟಾಟವಾಡ್ತಾಳೆ ಹುಸಿ ಕೋಪ ತೋರುತ್ತಲೇ ಪತಿ ಪತ್ನಿ ಕೈನಿಂದ ಸ್ಕ್ರೂ ಡ್ರೈವರ್ ಕಿತ್ತುಕೊಂಡು ತನ್ನ ಸ್ಕೂಟರ್‌ನ್ನು ಸರಿ ಪಡಿಸುತ್ತಾನೆ. ಜೊತೆಗೆ ಇಬ್ಬರು ಸುಂದರ ತಾಣವೊಂದಕ್ಕೆ ಟ್ರಿಪ್ ಹೊಕ್ತಾರೆ. ಅಲ್ಲೂ ತುಂಟಾಟ ತೋರುವ ಪತ್ನಿ, ಪ್ರೀತಿಯ ಮಡದಿಯ ಕೈಗೆ ಮೆಹಂದಿ ಹಾಕುವ ಗಂಡ, ಇಬ್ಬರು ಜೊತೆಗೆ ಕುಳಿತು ಪೂರ್ಣಚಂದ್ರ ತೇಜಸ್ವಿಯವರ ಮನೆಗಳಲ್ಲಿ ಮದುಮಗಳು ಕಾದಂಬರಿ ಓದ್ತಾರೆ. ಹೆಂಚಿನ ಮನೆಯ ಕೆಳಗೆ ಪತ್ನಿ ಬೆತ್ತದ ಚೇರ್ ಮೇಲೆ ಕುಳಿತು ಕಾದಂಬರಿ ಓದಿ ಹೇಳ್ತಿದ್ರೆ ಪತಿ ಆಕೆಯ ಕಾಲು ಬೆರಳುಗಳನ್ನು ಓತ್ತುತ್ತಿರುತ್ತಾನೆ. ಹೀಗೆ ಹೇಳುತ್ತಾ ಹೋದರೆ ಇಲ್ಲೇ ಒಂದು ಕಾವ್ಯವಾಗಿ ಬಿಡುತ್ತದೆ.
ಈ ಕೆಲ ನಿಮಿಷಗಳ ವೀಡಿಯೋದಲ್ಲಿ ಮಲೆನಾಡ ರೋಮ್ಯಾಂಟಿಕ್ ನವಜೋಡಿಯ ಬದುಕಿನ ದೃಶ್ಯಕಾವ್ಯವನ್ನು ಈ ವೀಡಿಯೋ ತೆರೆದಿಟ್ಟಿದ್ದು, ಅನೇಕರಿಗೆ ಈ ವೀಡಿಯೋ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನೆನಪು ಮಾಡಿದೆ. ಈ ಮಲೆಗಳಲ್ಲಿ ಮದುಮಗಳು ಕಾವ್ಯವೂ ಅಷ್ಟೇ ಮಲೆನಾಡಿನ ಜನರ ಹಳ್ಳಿಯ ಬದುಕಿನ ಚಿತ್ರಣವನ್ನು ಸೊಗಸಾಗಿ ಸಿನಿಮಾದಂತೆ ಓದುಗರ ಕಣ್ಣಮುಂದೆ ತೆರೆದಿಡುತ್ತಿತ್ತು. @yashwanth_shettyy @devikaa_manjunath ಅವರು ಈ ರೀಲ್ಸ್‌ನಲ್ಲಿ ನವದಂಪತಿಯಂತೆ ನಟಿಸಿದ್ದು, ವೀಡಿಯೋ ನೋಡಿದ ಬಹುತೇಕರಿಗೆ ಈ ವೀಡಿಯೋ ಗತವನ್ನು ನೆನಪು ಮಾಡಿದೆ. ಮಲೆಮಗಳಲ್ಲಿ ಮದುಮಗಳು ಕಾದಂಬರಿಯೂ ಅಷ್ಟೇ, ಇದನ್ನು ಓದುತ್ತಿದ್ದಂತೆ ನಾವು ಬೇರೊಂದು ಕಲ್ಪನಾ ಲೋಕದಲ್ಲಿ ತೇಲಿದಂತೆ ಭಾಸವಾಗುತ್ತದೆ.
ಮಹಾಕವಿ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಗೂ ನಮ್ಮ ಈ ಪರಿಕಲ್ಪನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಕೇವಲ ನಾವು ಸರೆಹಿಡಿದ ಹಾಗೂ ಪರಿಕಲ್ಪಿಸಿದ ಎಲ್ಲಾ ದೃಶ್ಯಗಳು ಮಲೆನಾಡಲ್ಲಿ ನಡೆಯುವ ಕಾರಣ ಹಾಗೂ ಹೊಸದಾಗಿ ಮದುವೆಯಾದ ನವ ಜೋಡಿಗಳ ಚೊಚ್ಚಲ ಪ್ರಣಯದ ಕ್ಷಣಗಳು ಈ ಶೀರ್ಷಿಕೆಗೆ ಹೊಂದುತ್ತಿತ್ತು ಎಂಬ ಕಾರಣಕ್ಕೆ ಮಾತ್ರ ನಾವು ಈ ಶೀರ್ಷಿಕೆಯನ್ನು ಬಳಸಿಕೊಂಡಿದ್ದೇವೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಅದೇ ರೀತಿ ಈ ವೀಡಿಯೋವೂ ಅನೇಕರನ್ನು ಕಲ್ಪನಾ ಲೋಕದಲ್ಲಿ ತೇಲಿಸಿದೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಕಂಟೆಂಟ್ ಎಷ್ಟು effective ಆಗಿದೆ ಅಂದ್ರೆ ನೀವಿಬ್ರು ನಿಜವಾದ ಪ್ರೇಮಿಗಳ ಅಂತ ಕೇಳೋವಷ್ಟು, ಹೊಡಿ ಬಡಿ ಅನ್ನೋ ಸಿನಿಮಾಗಳು ಅದರ ಸಂಗೀತ ನಕ್ಕ* ಅಮ್ಮ* ಅನ್ನೋ ರೀಲ್ಸ್ ಗಳ ಮದ್ಯದಲ್ಲಿ ಹಳೆ ಕಾಲದ ಗತ ವೈಭವದ ಒಂದು ಸಿನಿಮಾ ನೋಡಿದ ಹಾಗಾಯ್ತು ಇಷ್ಟೇನಾ ಇನ್ನೂ ನೋಡಬೇಕು ಅನ್ನುವ ಹಂಬಲ ಅದ್ಭುತವಾಗಿದೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ವೀಡಿಯೋ ನೋಡಿದ ಅನೇಕರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ನೀವು ಒಮ್ಮೆ ನೋಡಿ ಹೇಗನಿಸಿತು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಲ ಬದಲಾಗಿದೆ ಮನಸ್ಥಿತಿ ಬದಲಾಗಿಲ್ಲ: ದಲಿತ ಮಕ್ಕಳಿಗೆ ದಾರಿ ನಿರಾಕರಿಸಿದ ವೃದ್ಧ ಮಹಿಳೆ
ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ಯಾರೀಕೆ ಸೀರೆಯುಟ್ಟು ಮಿಂಚಿದ 6 ವರ್ಷದ ಪೋರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.