
ವೈವಾಹಿಕ ಜೀವನದಲ್ಲಿ ಒತ್ತಡದ ಬದುಕು, ಮನೆ, ಕುಟುಂಬ ನಿರ್ವಹಣೆ, ಮಕ್ಕಳ ಕೆಲಸ ಮುಂತಾದ ಕಾರಣಗಳಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ದಂಪತಿ ಈ ಕ್ರಿಯೆಯಲ್ಲಿ ತೊಡಗುವುದನ್ನೇ ನಿಲ್ಲಿಸಿಯೇ ಬಿಡುತ್ತಾರೆ. ಆದರೆ ಇದನ್ನು ನಿಲ್ಲಿಸಿದರೆ ಆರೋಗ್ಯದಲ್ಲಿ ಕೊಂಚ ಬದಲಾವಣೆ ಕಂಡುಬರುತ್ತದೆ.
- ರೆಗ್ಯುಲರ್ ಆಗಿ ಸೆಕ್ಸ್ ಮಾಡಿದರೆ ಪತಿ - ಪತ್ನಿ ನಡುವೆ ಭಾವನಾತ್ಮಕ ಸಂಬಂಧ ಹೆಚ್ಚುತ್ತದೆ. ಒಂದು ಬಾರಿ ಲೈಂಗಿಕ ಕ್ರಿಯೆ ನಿಲ್ಲಿಸಿದರೆ ಇಬ್ಬರ ನಡುವಿನ ಸಂಬಂಧವೂ ದೂರವಾಗುತ್ತದೆ.
- ಮಿಲನ ಕ್ರಿಯೆ ನಡೆಯದೆ ಇದ್ದರೆ ಸೆಕ್ಸ್ ಮಾಡುವ ಆಸಕ್ತಿ ಪೂರ್ತಿ ಕುಂದುತ್ತದೆ. ಲಿಬಿಡೊ ಹಾರ್ಮೋನ್ ಬಿಡುಗಡೆಗೆ ತಡೆಯಾಗುತ್ತದೆ. ಇಲ್ಲವೇ ಸೆಕ್ಸ್ ಆಸಕ್ತಿ ವಿಪರೀತ ಜಾಸ್ತಿಯಾಗುವ ಸಾಧ್ಯತೆಯೂ ಇದೆ.
- ಸೆಕ್ಸ್‌ನಿಂದ ಫೀಲ್ ಗುಡ್ ಹಾರ್ಮೋನ್‌ಗಳಾದ ಆಕ್ಸಿಟೋಸಿನ್, ಅಂಡೋರ್ಫಿನ್ ಮತ್ತು ಡೋಪಮಿನ್ ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ. ಇದರಿಂದ ಒತ್ತಡ ನಿವಾರಣೆಯಾಗಿ, ಮನಸ್ಸು ಶಾಂತವಾಗಿರುತ್ತದೆ.
- ನಿಯಮಿತ ಮಿಲನ ಕ್ರಿಯೆಯಿಂದ ರಿಲ್ಯಾಕ್ಸ್ ಆಗಿ, ಸುಖ ನಿದ್ರೆಗೆ ದಾರಿ ಮಾಡಿ ಕೊಡುತ್ತದೆ. ನಿಂತರೆ ನಿದ್ರೆಯೂ ನಿಲ್ಲೋ ಚಾನ್ಸ್ ಇರುತ್ತೆ.
- ಹಾರ್ಮೋನ್ ಬ್ಯಾಲೆನ್ಸ್‌ಗೆ ಸೆಕ್ಸ್ ಬೇಕು. ಒಂದು ವೇಳೆ ಸೆಕ್ಸ್ ನಿಲ್ಲಿಸಿದರೆ ಹಾರ್ಮೋನ್ ಬ್ಯಾಲೆನ್ಸ್ ತಪ್ಪುತ್ತದೆ. ಇದರಿಂದ ಮಾಸಿಕ ಋತುಸ್ರಾವದ ಸಂದರ್ಭದಲ್ಲಿಯೂ ಹೊಟ್ಟೆನೋವು ಹೆಚ್ಚುತ್ತದೆ.
- ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಕೆಮ್ಮು, ಶೀತ ಮೊದಲಾದ ಸೀಸನಲ್ ಸಮಸ್ಯೆಗಳು ಕಾಡುತ್ತವೆ.
- ರೆಗ್ಯುಲರ್ ಆಗಿ ಮಿಲನಕ್ರಿಯೆಯಲ್ಲಿ ತೊಡಗಿದರೆ ಜನನಾಂಗ ಒದ್ದೆ ಆಗಿರುತ್ತದೆ. ಇದರಿಂದ ಸಮಸ್ಯೆಗಳು ಕಾಡುವುದಿಲ್ಲ. ಆದರೆ ಇದು ನಿಂತರೆ ಜನನಾಂಗ ಡ್ರೈ ಆಗುವುದರ ಜೊತೆಗೆ ವಜೈನಲ್ ವಾಲ್ ತುಂಬಾ ವೀಕ್ ಆಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.