
ಮೊದಲ ಪ್ರೀತಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮೊದಲ ಬಾರಿ ನನ್ನವರಲ್ಲದವರ ಮೇಲೆ ಬೆಟ್ಟದಷ್ಟು ಪ್ರೀತಿ ಹುಟ್ಟುವುದು ಒಂದು ಎವರ್‌ಗ್ರೀನ್ ಅನುಭವ. ಜೀವನ ಪೂರ್ತಿ ಇವರ ಜೊತೆಯೇ ಬಾಳಿ, ಬದುಕುವ ಕನಸನ್ನು ಕಂಡಿರುತ್ತೇವೆ. ಸಾಯೋತನಕ ಜೊತೆಯಾಗಿರುವ ಪ್ರಾಮಿಸ್ ಮಾಡಿರುತ್ತೇವೆ. ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತೇವೆ. ಯಾಕೆಂದರೆ ಅದು ಫಸ್ಟ್ ಲವ್...
ಇದೆ ಪ್ರೀತಿ ಏನೋ ಕಾರಣದಿಂದ ದೂರವಾದರೆ ಜಗತ್ತೇ ಮುಳುಗಿ ಹೋದಂತೆ ಭಾಸವಾಗುತ್ತದೆ. ಜೀವನದಲ್ಲಿ ಇನ್ನೇನು ಉಳಿದಿಲ್ಲ ಎಂಬ ಭಾವ ಬೇರೂರುತ್ತದೆ. ಕೆಲವರು ಜೇವನವನ್ನೇ ಕೊನೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಇನ್ಯಾವತ್ತೂ ಪ್ರೀತಿ ಮಾಡಲೇಬಾರದು ಎಂದು ನಿರ್ಧರಿಸಿ ದೇವದಾಸರಾಗಿ ಬಿಡುತ್ತಾರೆ. ಈ ಎಲ್ಲಾ ನೋವಿನಿಂದ ಹೊರಬರಲು ಮೂರು ತಿಂಗಳು. ಆರು ತಿಂಗಳು, ಇನ್ನು ಕೆಲವರಿಗೆ ವರ್ಷವೇ ಬೇಕಾಗುತ್ತದೆ. ಹಳೆ ನೆನಪುಗಳು ಮಾಸುತ್ತದೆ. ಹೋದಂತೆ ಮತ್ತೆ ಪ್ರೀತಿ ಹುಟ್ಟಬಹುದು.
ಹೌದು. ನಮ್ಮ ಮನಸ್ಸನ್ನು ಅದೆಷ್ಟು ಹಿಡಿತದಲ್ಲಿಟ್ಟುಕೊಂಡರೂ, ಹಳೆ ಗಾಯದ ಕಲೆ ಉಳಿದು ಬಿಡುತ್ತೆ. ಎರಡನೇ ಸಲ ಪ್ರೀತಿ ಉಂಟಾಗುವ ಸಾಧ್ಯತೆಯೂ ಇದೆ. ಈ ಎರಡನೇ ಪ್ರೀತಿ ಇದೆ ಆಲ್ವಾ ಅದು ನಮ್ಮ ಜೀವನವನ್ನೇ ಬದಲಾಯಿಸುತ್ತದೆ.
ನೈಜ ಪ್ರೀತಿ ಇದು...
ಪ್ರೀತಿ, ಪ್ರೇಮ, ಮುತ್ತು ಮತ್ತು ದೋಖಾ...?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.