ಕೆಲವು ದೇಶಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಅಥವಾ ಕೆಲವು ಮನೆಗಳಲ್ಲಿ ಕಡು ಬಡತನ ತಾಂಡವ ಆಡುತ್ತಾ ಇರುತ್ತೆ. ಅದನ್ನು ನೋಡಿ ಹಲವರ ಕುರುಳು ಚುರುಕು ಎಂದು ಬಿಡುತ್ತೆ.. ಮೊದಲಾದರೆ, ನೋಡಿದ ಮೇಲೆ ಬಂದ ಕಣ್ಣಿರನ್ನು..
ಸೋಷಿಯಲ್ ಮೀಡಿಯಾದಲ್ಲಿ ಓಡಾಡದೇ ಇರುವ ಮ್ಯಾಟರ್ ಇಲ್ಲವೇ ಇಲ್ಲ ಎನ್ನಬಹುದು. ರಾಜ ಪ್ರಭುತ್ವ ಹೋಗಿ ಪ್ರಜಾ ಪ್ರಭುತ್ವ ಬಂದಂತೆ ಈಗ ಬೇರೆಲ್ಲಾ ಹೋಗಿ ಸೋಷಿಯಲ್ ಮೀಡಿಯಾ ಜಮಾನ ಶುರುವಾಗಿದೆ ಎನ್ನಬಹುದು. ಸದ್ಯ ನಡೆಯುತ್ತಿರುವುದೇ ಸೋಷಿಯಲ್ ಮೀಡಿಯಾ ಎಂಬ ಜಮಾನ. ನೀವು ನೋಡಿರದೇ ಇದ್ದ ಅದೆಷ್ಟೋ ಸಂಗತಿಗಳನ್ನು ನಾವು ಅದರಿಂದ ತಿಳಿಯಬಹುದು. ಎಂದೂ ನೋಡದಿದ್ದ ಜಾಗಗಳನ್ನು, ಜನರನ್ನು ನೋಡಬಹುದು. ಅಷ್ಟೇ ಏಕೆ, ನಾವು ಮಾಡಲಾಗದೇ ಇರುವುದನ್ನೂ ಈ ಸೋಷಿಯಲ್ ಮೀಡಿಯಾ ನಮಗೆ ಮಾಡಿಬಿಡಬಹುದು!
ಒಳ್ಳೆಯದು ಅಥವಾ ಕೆಟ್ಟದ್ದು ಅಂತೇನಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ಸಾಧ್ಯ. ಸೋಷಿಯಲ್ ಮೀಡಿಯಾಗಳಲ್ಲಿ 'ಅಸಾಧ್ಯ' ಎಂಬ ಪದಕ್ಕೆ ಜಾಗವೇ ಇಲ್ಲ ಎನ್ನಬಹುದು. ಅಲ್ಲೆಲ್ಲೋ ಆಫ್ರಿಕಾದಲ್ಲೋ ಅಥವಾ ಸುಡಾನ್‌ನಲ್ಲೋ ಭೂಕಂಪವಾದರೆ ಸೋಷಿಯಲ್ ಮೀಡಿಯಾ ಮೂಲಕ ಇಲ್ಲೆಲ್ಲಾ ಸಂಚಲನ ಆಗುತ್ತೆ.. ಅನುಕಂಪದ ಅಲೆ ಜಗತ್ತಿಗೆಲ್ಲಾ ಹರಡಿ, ಅಗತ್ಯವಿದ್ದ ಕಡೆ ಸಹಾಯಹಸ್ತ ಕ್ಷಣಾರ್ಧದಲ್ಲಿ ತಲುಪಿಬಿಡುತ್ತೆ. ಕಷ್ಟ-ಸುಖಗಳನ್ನು ಅದು ಸಮಾನವಾಗಿ ಎಲ್ಲಾ ಕಡೆ ತಲುಪಿಸಿಬಿಡುತ್ತೆ.
ಪದೇ ಪದೇ ತಲೆಸುತ್ತು ಬರ್ತಾ ಇದ್ರೆ ನಿರ್ಲಕ್ಷ ಮಾಡ್ಬೇಡಿ, ಖ್ಯಾತ ವೈದ್ಯರು ಏನ್ ಹೇಳಿದಾರೆ ನೋಡಿ!
ಆದರೆ, ಕೆಲವೊಂದು ಸಂಗತಿಗಳು ಮಾತ್ರ ತುಂಬಾ ನೋವು ಕೊಡುತ್ತೆ. ಕೆಲವು ದೇಶಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಅಥವಾ ಕೆಲವು ಮನೆಗಳಲ್ಲಿ ಕಡು ಬಡತನ ತಾಂಡವ ಆಡುತ್ತಾ ಇರುತ್ತೆ. ಅದನ್ನು ನೋಡಿ ಹಲವರ ಕುರುಳು ಚುರುಕು ಎಂದು ಬಿಡುತ್ತೆ.. ಮೊದಲಾದರೆ, ನೋಡಿದ ಮೇಲೆ ಬಂದ ಕಣ್ಣಿರನ್ನು ಒರೆಸಿಕೊಂಡು ಅದನ್ನು ಮನಸ್ಸಿಲ್ಲಿಯೇ ಭದ್ರವಾಗಿ ನೆಲೆನಿಲ್ಲಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ, ಅದು ಇಡೀ ಪ್ರಪಂಚವನ್ನು ಸುತ್ತುತ್ತಾ ಇರುತ್ತದೆ.
ಇಲ್ಲೊಂದು ಅಂತಹುದೇ ಕರುಳು ಚುರುಕು ಎನ್ನುವ ಬರಹದ ವಿಡಿಯೋ ಕ್ಲಿಪ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. 'ಮಗುವೊಂದು ಕಾಗದ ತಿಂದಾಗ ಅಮ್ಮ ಬೈದಳಂತೆ.. ಆಗ ಮಗು 'ಅಮ್ಮಾ ಅದರಲ್ಲಿ ರೊಟ್ಟಿ ಚಿತ್ರ ಇತ್ತು.. ಅದಕ್ಕೇ ಅದನ್ನು ತಿಂದೆ ಅಂತ ಹೇಳಿತಂತೆ..' ಎಂಬ ಬರಹವಿರೋ ಪೋಸ್ಟ್ ಓಡಾಡುತ್ತಿದೆ. ನೋಡುವುದಕ್ಕೆ ಅಷ್ಟು ಚಿಕ್ಕ ಪೋಸ್ಟ್ ಆಗಿದ್ದರೂ ಅದಕ್ಕೆ ಬಂದಿರುವ ಕಾಮೆಂಟ್ ಸಂಖ್ಯೆ ನೋಡಿದರೆ ತಲೆ ತಿರುಗುತ್ತದೆ.
ಹಲ್ಲುನೋವಿಗೆ ಮನೆ 7 ಮನೆಮದ್ದುಗಳು; ತಕ್ಷಣ ಸಿಗಲಿದೆ ಪರಿಹಾರ!
ಹೌದು ಬಡತನ ತುಂಬಾ ಕ್ರೂರಿ ಅಲ್ವಾ? ಅದು ಯಾರದೇ ಪಾಲಿಗೆ ಇರಲಿ, ಬರಲಿ, ಬಡತನದಷ್ಟು ಕ್ರೂರತೆ ಇನ್ನೊಂದಿಲ್ಲ. ಅದರಲ್ಲೂ ಹಸಿವಿನಿಂದ ಬಳಲುತ್ತಿರುವ ಮಗುವನ್ನು ನೋಡಿದಾದ ಆ ತಾಯಿಯ ಕರುಳು ಹಿಂಡುವ ಕಥೆ ಯಾರಿಗೂ ಬೇಡ. ತಾಯಿ ತಾನು ಬೇಕಾದರೆ ಹಸಿದುಕೊಂಡು ಇರಬಲ್ಲಳು, ಆದರೆ ಮಕ್ಕಳು ಹಸಿವಿನಿಂದ ಕಂಗಾಲಾದರೆ, ನರಳುತ್ತಿದ್ದರೆ ಯಾವ ತಾಯಿಯೂ ಸಹಿಕೊಳ್ಳುವುದಿಲ್ಲ.
ಈ ಹರಿದಾಡುತ್ತಿರುವ ಪೋಸ್ಟ್ ನೋಡಿದರೆ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಇದೆ ಎನ್ನಬಹುದು. ಬಡತನ, ಕಷ್ಟಕ್ಕೆ ಮರುಗುವ ಹೃದಯದವರು ಇನ್ನೂಇದ್ದಾರೆ ಎಂಬುದು ಕನ್ಫರ್ಮ್ ಆಗಿಬಿಡುತ್ತೆ.. ಅದಿಲ್ಲದಿದ್ದರೆ ಈ ಪೋಸ್ಟ್‌ಗೆ ಇಷ್ಟೊಂದು ಕಾಮೆಂಟ್ಸ್ ಹೇಗೆ ಬರಲು ಸಾಧ್ಯ? ನೀವೂ ಒಮ್ಮೆ ನೋಡಿ, ಕಣ್ಣೀರು ಹಾಕಿಬಿಡಿ..!