ಮೈ, ಕೈ ಸುಟ್ಟುಕೊಂಡ ತಕ್ಷಣ ಟೂತ್ ಪೇಸ್ಟ್ ಹಚ್ಚೋದು ಸರೀನಾ? ತಪ್ಪಾ?

Published : Jan 27, 2025, 03:47 PM ISTUpdated : Jan 27, 2025, 04:02 PM IST
ಮೈ, ಕೈ ಸುಟ್ಟುಕೊಂಡ ತಕ್ಷಣ ಟೂತ್ ಪೇಸ್ಟ್ ಹಚ್ಚೋದು ಸರೀನಾ? ತಪ್ಪಾ?

ಸಾರಾಂಶ

ಸುಟ್ಟಗಾಯಗಳಿಗೆ ಟೂತ್‌ಪೇಸ್ಟ್‌ ಹಚ್ಚುವುದು ಸೋಂಕು, ನಿಧಾನ ಗುಣವಾಗುವಿಕೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ತಣ್ಣೀರು ಸುರಿದು, ಸ್ವಚ್ಛ ಬಟ್ಟೆಯಿಂದ ಮುಚ್ಚಿ, ವೈದ್ಯರ ಸಲಹೆಯಂತೆ ನಂಜುನಿರೋಧಕ ಕ್ರೀಮ್ ಬಳಸಿ. ಟೂತ್‌ಪೇಸ್ಟ್, ಎಣ್ಣೆ, ಐಸ್ ಬಳಸಬೇಡಿ. ವೈದ್ಯರ ಸಲಹೆ ಪಡೆಯುವುದು ಉತ್ತಮ.

ಹೆಚ್ಚಿನ ಜನರು ಅಡುಗೆ ಮಾಡುವಾಗ ಅಥವಾ ಮನೆಯಲ್ಲಿನ ಬಿಸಿ ವಸ್ತುಗಳ ಸಂಪರ್ಕಕ್ಕೆ ಬಂದಾಗ ಸುಟ್ಟಗಾಯಗಳಿಗೆ (burning) ಒಳಗಾಗುತ್ತಾರೆ. ಇಂತಹ ಸುಟ್ಟ ಗಾಯಗಳು ಆಗೋದು ಸಾಮಾನ್ಯ ಕೂಡ ಹೌದು. ಅಂತಹ ಪರಿಸ್ಥಿತಿಯಲ್ಲಿ, ಜನರು ತಕ್ಷಣದ ಪರಿಹಾರಕ್ಕಾಗಿ ನಾವೇನು ಮಾಡ್ತೀವಿ. ಟೂತ್ಪೇಸ್ಟ್ ಹಚ್ಚಿಕೊಳ್ಳುತ್ತೇವೆ ಅಲ್ವಾ? ಯಾಕಂದರೆ ಯಾರೋ ನಮಗೆ ಹೇಳಿರ್ತಾರೆ, ಟೂತ್ ಪೇಸ್ಟ್ ಹಚ್ಚೋದ್ರಿಂದ ಸುಟ್ಟ ಗಾಯ ಬೇಗನೆ ನಿವಾರಣೆಯಾಗುತ್ತೆ ಅಂತ. ಆದರೆ ನಿಜವಾಗಿಯೂ ಸುಟ್ಟ ಗಾಯ ಕೇವಲ ಟೂಥ್ ಪೇಸ್ಟ್ ನಿಂದ ನಿವಾರಣೆಯಾಗುತ್ತಾ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಗೊತ್ತಾ? ಟೂತ್ ಪೇಸ್ಟ್ ಹಚ್ಚೋದ್ರಿಂದ ಸಮಸ್ಯೆಗಳು ಬೇಗನೆ ಗುಣಮುಖ ಆಗೊದಿಲ್ಲವಂತೆ. ಹಾಗಿದ್ರೆ ಸುಟ್ಟ ಗಾಯಗಳಿಗೆ ಟೂತ್ ಪೇಸ್ಟ್ ಹಚ್ಚೋದರಿಂದ ಏನಾಗುತ್ತೆ? 

ಸುಟ್ಟಗಾಯಕ್ಕೆ ಟೂತ್ ಪೇಸ್ಟ್ ಹಚ್ಚೋದ್ರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತೆ ನೋಡೋಣ.. 
ಸೋಂಕಿನ ಅಪಾಯ:
ಟೂತ್ ಪೇಸ್ಟ್ ಚರ್ಮವನ್ನು ಹಾನಿಗೊಳಿಸುವ ರಾಸಾಯನಿಕಗಳನ್ನು ಹೊಂದಿರುತ್ತೆ. ಇದು ಸುಟ್ಟಗಾಯಗಳ ಸ್ಥಳದಲ್ಲಿ ಸೋಂಕನ್ನು ಉಂಟುಮಾಡಬಹುದು.

ಗಾಯ ತಡವಾಗಿ ಗುಣವಾಗುತ್ತೆ : ಟೂತ್ ಪೇಸ್ಟ್ ಹಚ್ಚುವುದರಿಂದ ಚರ್ಮದ ಮೇಲೆ ಒಂದು ಪದರ ಉಂಟಾಗುತ್ತದೆ, ಇದು ಗಾಯವು ಬೇಗನೆ ಗುಣವಾಗುವುದನ್ನು ತಡೆಯುತ್ತದೆ.

ಕಿರಿಕಿರಿ ಹೆಚ್ಚಾಗಬಹುದು: ಟೂತ್ ಪೇಸ್ಟ್ (tooth paste) ನಲ್ಲಿರುವ ರಾಸಾಯನಿಕಗಳು ಸುಡುವ ಪ್ರದೇಶದಲ್ಲಿ ಹೆಚ್ಚು ಕಿರಿಕಿರಿಯನ್ನು ಉಂಟುಮಾಡಬಹುದು.

ಸುಟ್ಟಗಾಯಗಳ ಮೇಲೆ ಟೂತ್ ಪೇಸ್ಟ್ ಹಚ್ಚುವುದನ್ನು ತಪ್ಪಿಸಿ. ಬದಲಾಗಿ, ಸರಿಯಾದ ಮತ್ತು ತಕ್ಷಣ ಚಿಕಿತ್ಸೆಯನ್ನು ಮಾಡುವುದು ಮುಖ್ಯ.

 

ನಿಮಗೆ ಸುಟ್ಟ ಗಾಯಗಳಿದ್ದರೆ ಏನು ಮಾಡಬೇಕು?

  • ತಣ್ಣೀರನ್ನು ಸುರಿಯಿರಿ: ಸುಟ್ಟ ಪ್ರದೇಶದ ಮೇಲೆ ತಕ್ಷಣ ತಣ್ಣೀರನ್ನು  (cold water)ಸುರಿಯಿರಿ. ಇದು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
  • ಬಟ್ಟೆಯಿಂದ ಮುಚ್ಚಿ: ಸೋಂಕನ್ನು ತಡೆಗಟ್ಟಲು ಗಾಯವನ್ನು ಸ್ವಚ್ಛ ಮತ್ತು ಮೃದುವಾದ ಬಟ್ಟೆಯಿಂದ ಮುಚ್ಚಿ.
  • ನಂಜುನಿರೋಧಕ ಕ್ರೀಮ್ ಹಚ್ಚಿ: ವೈದ್ಯರು ಸೂಚಿಸಿದಂತೆ ನಂಜುನಿರೋಧಕ ಕ್ರೀಮ್ (antiseptic cream) ಬಳಸಿ.

 

ಸುಟ್ಟ ಗಾಯದ ಮೇಲೆ ಇದನ್ನ ಮಾಡಲೇಬೇಡಿ?

  • ಟೂತ್ಪೇಸ್ಟ್, ಎಣ್ಣೆ, ತುಪ್ಪ ಅಥವಾ ಯಾವುದೇ ಮನೆಮದ್ದನ್ನು ನೇರವಾಗಿ ಉರಿಯುತ್ತಿರುವ ಜಾಗಕ್ಕೆ ಹಚ್ಚಬೇಡಿ.
  • ಐಸ್ ಬಳಸಬೇಡಿ (dont use ice cube) ಏಕೆಂದರೆ ಅದು ಚರ್ಮಕ್ಕೆ ಹೆಚ್ಚಿನ ಹಾನಿಯನ್ನುಂಟು (skin damage) ಮಾಡುತ್ತದೆ.
  • ಸುಟ್ಟಗಾಯಗಳ ಮೇಲೆ ಟೂತ್ ಪೇಸ್ಟ್ ಹಚ್ಚುವುದು ತಪ್ಪು. ಇದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ಗಾಯ ಗುಣವಾಗೋದು ಕೂಡ ತಡವಾಗುತ್ತೆ.
  • ಸುಟ್ಟ ಗಾಯಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು, ಹಾಗೂ ವೈದ್ಯರ ಸಲಹೆಯೊಂದಿಗೆ ಮಾತ್ರ ಚಿಕಿತ್ಸೆ ನೀಡಬೇಕು.

  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?