ಹೆಂಡ್ತಿ ಬರೆದುಕೊಟ್ಟ ದಿನಸಿ ಚೀಟಿ; ಇದನ್ನು ಓದಿ ನಗ್ತೀರೋ, ಶಾಕ್‌ ಆಗ್ತೀರೋ ನಿಮಗೆ ಬಿಟ್ಟಿದ್ದು...!

ದಿನಸಿ ಚೀಟಿ ಕಥೆ ಇಲ್ಲಿದೆ, ಹೌದು ಒಂದು ಗಂಭೀರವಾದ ವಿಷಯ ಇಲ್ಲಿ ಸಿಕ್ಕಾಪಟ್ಟೆ ಹಾಸ್ಯಾಸ್ಪದವಾಗಿದೆ. 


ಮನೆಗೆ ಏನೇನು ದಿನಸಿ ತರಬೇಕೋ ಅದನ್ನು ಲಿಸ್ಟ್‌ ಮಾಡಿಕೊಡುವ ಪದ್ಧತಿ ಇದೆ. ಮೊದಲೆಲ್ಲ ಕಾಗದದಲ್ಲಿ ಬರೆದು ಕಳಿಸೋರು, ಈಗ ಏನಿದ್ರೂ ವಾಟ್ಸಪ್‌ ಮೆಸೇಜ್‌, ಫೋನ್‌ ಕಾಲ್.‌ ಆದರೆ ಇಲ್ಲೊಂದು ದಿನಸಿ ಚೀಟಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ದಿನಸಿ ಚೀಟಿ ಬರೆಯುವಾಗ ಅಕ್ಷರ ತಪ್ಪಾಗಿ ಎಡವಟ್ಟಾದ ಪ್ರಸಂಗಗಳು ಸಾಕಷ್ಟಿವೆ. ಹಾಗೆಯೇ ಇಲ್ಲೊಂದು ಸಾಮಗ್ರಿಯ ಮಾನದಂಡವನ್ನು ತಪ್ಪಾಗಿ ಬರೆದಿದ್ದು ಇದೀಗ ಹಾಸ್ಯಾಸ್ಪದವಾಗಿದೆ. ಏನೇನು ವಸ್ತುಗಳು ಬೇಕು? ಎಷ್ಟು ಬೇಕು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ ಯಾವ ಬ್ರ್ಯಾಂಡ್‌ ಬೇಕು ಎನ್ನೋದರ ಜೊತೆಗೆ ಫ್ರೀ ಆಗಿ ಸಿಗತ್ತೆ, ಹಸಿಮೆಣಸಿನ ಕಾಯಿ ತನ್ನಿ ಎನ್ನೋದನ್ನೂ ಕೂಡ ಡಿಟೇಲ್‌ ಆಗಿ ಬರೆಯಲಾಗಿದೆ. ಒಟ್ಟಿನಲ್ಲಿ ಮಲೆನಾಡಿನ ಕಡೆ ಬರೆಯಲಾದ ಚೀಟಿ ಎನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

Latest Videos

ರಮ್ಯಾ ಧರಿಸಿರುವ ಕಪ್ಪು ಸೀರೆ ಬೆಲೆಗೆ 3 ತಿಂಗಳು ಬಡವರ ದಿನಸಿ ಬರ್ತಿತ್ತಂತೆ; ಫೋಟೋ ವೈರಲ್

ದ್ರಾಕ್ಷಿ ಗೋಡಂಬಿ- 100 ಗ್ರಾಂ
ಉದ್ದಿನಬೇಳೆ-ಒಂದು ಕೆಜಿ (ಮರತೋಗಿತ್ತು)
ಅಕ್ಕಿ (ಊಟಕ್ಕೆ )-25kg ( ಕೆಂಪಕ್ಕಿ ಬೇಡ )
ಅಮೃತಾಂಜನ- ಅರ್ಧ ಕೆಜಿ
ಟೂತ್‌ ಪೇಸ್ಟ್‌ ( ಆಯುರ್ವೇದಿಕ್‌ ) ನೂರು ಗ್ರಾಂ ಟ್ಯೂಬ್‌
ಮೈ ಸೋಪ್‌ ನಾಲ್ಕರದ್ದು ಪ್ಯಾಕ್‌
ಬಟ್ಟೆ ಸೋಪ್‌ ರಿನ್‌ - ಹತ್ತು ಬಾರ್‌
ಪಾತ್ರೆ ತೊಳೆಯೋ ಸೋಪ್-‌‌‌ ರಿನ್‌, ಹತ್ತು ಬಾರ್
ತರಕಾರಿ- ಬೆಂಡೇಕಾಯಿ, ಟೋಮ್ಯಾಟೋ, ಬೀನ್ಸ್‌, ಡೊಳ್ಳು ಮೆಣಸು, ಕ್ಯಾರೆಟ್‌, ಮೂಲಂಗಿ ಎಲ್ಲ ಅರ್ಧ ಚೀಟಿ ಸಾಕು
ಈರುಳ್ಳಿ ಚೆನ್ನಾಗಿದ್ರೆ ಅರ್ಧ ಕೆಜಿ ಸಾಕು
ಹಸಿಮೆಣಸು- ದುಡ್ಡು ಕೊಟ್ಟು ತರೋದು ಬೇಡ, ಲಾಸ್ಟಿಗೆ ಹತ್ತು ರೂಪಾಯಿಗೆ ಕೊಡು ಅಂದ್ರೆ ಕೊಡ್ತ
ಎಂತಾದ್ರೂ ಹಣ್ಣು ತಗಬನ್ನಿ

ಈ ಗ್ರಾಮದ ಪ್ರತಿ ಮನೆಯಲ್ಲೂ ಇದೆ ವಿಮಾನ… ದಿನಸಿ ಸಾಮಾನು ತರೋದಕ್ಕೂ ಬೇಕು ವಿಮಾನ

ಈ ದಿನಸಿ ಚೀಟಿಯಲ್ಲಿ ಅಮೃತಾಂಜನ ಅರ್ಧ ಕೆಜಿ ತನ್ನಿ ಅಂತ ಬರೆಯಲಾಗಿದೆ. ಉಳಿದ ಎಲ್ಲ ಸಾಮಗ್ರಿಗಳು ಎಷ್ಟು ಎಂದು ಬರೆಯುವಾಗ, ಅಮೃತಾಂಜನ ಕೂಡ ಅರ್ಧ ಕೆಜಿ ತನ್ನಿ ಅಂತ ತಪ್ಪಾಗಿ ಬರೆಯಲಾಗಿದೆ. ಅಮೃತಾಂಜನವನ್ನು ಕೆಜಿಗಟ್ಟಲೇ ಯಾರು ಕೊಡ್ತಾರೆ? ಅಲ್ವಾ? 

ಏನೇ ಇರಲಿ, ಈ ದಿನಸಿ ಚೀಟಿ ನೋಡಿದಾಗ ಬರೆದಮೇಲೆ ಇನ್ನೊಮ್ಮೆ ಚೆಕ್‌ ಮಾಡಬೇಕು ಎನ್ನೋದು ಅರ್ಥ ಆಗುವುದು. ಅಷ್ಟೇ ಅಲ್ಲದೆ ಮಧ್ಯಮ ವರ್ಗದ ಕಷ್ಟವೂ ಇಲ್ಲಿ ಸ್ಪಷ್ಟವಾಗಿ ಕಾಣುವುದು. ಇನ್ನು ದಿನಸಿ ಖರೀದಿ ಮಾಡುವಾಗ ಎಷ್ಟು ಜಾಗೃತೆಯಿಂದ ಇರಬೇಕು ಎನ್ನೋದು ಕೂಡ ಇಲ್ಲಿ ಎದ್ದು ಕಾಣುವುದು. 
 

click me!