ವಿಮಾನದಲ್ಲಿ ಕುಳಿತುಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ ಬಡತನದಿಂದಾಗಿ, ಅನೇಕ ಜನರಿಗೆ ಈ ಕನಸನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಈ ಜಗತ್ತಿನಲ್ಲಿ ಪ್ರತಿ ಮನೆಯಲ್ಲೂ ವಿಮಾನವಿರುವ ಒಂದು ಹಳ್ಳಿ ಇದೆ ಅನ್ನೋದು ನಿಮಗೆ ಗೊತ್ತಾ? ಹೌದು ಈ ರೀತಿಯಾದ ಒಂದು ಗ್ರಾಮ ಇದೆ.
ನಾವು ಮಾತನಾಡುತ್ತಿರುವ ಈ ಗ್ರಾಮವು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದೆ. ಆ ಗ್ರಾಮದ ವಿಶೇಷತೆ ಏನು ಆನ್ನೋದನ್ನು ನೋಡೋಣ.
ಈ ಹಳ್ಳಿಯ ಹೆಸರು ಕ್ಯಾಮರೂನ್ ಏರ್ ಪಾರ್ಕ್, ಅಲ್ಲಿ ಜನರ ಮನೆಗಳ ಹೊರಗೆ ಕಾರ್ ಪಾರ್ಕಿಂಗ್ ಬದಲು, ವಿಮಾನ ಪಾರ್ಕಿಂಗ್ ಇದೆ.
ದೊಡ್ಡ ವಿಷಯವೆಂದರೆ ಈ ವಿಮಾನಗಳು ತುಂಬಾ ದುಬಾರಿಯಾಗಿದ್ದು, ಅವುಗಳ ಬೆಲೆಯನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ.
ಈ ಹಳ್ಳಿಯ ಹೆಚ್ಚಿನ ಜನರಿಗೆ ವಿಮಾನಗಳನ್ನು ಹೇಗೆ ಹಾರಿಸಬೇಕೆಂದು ತಿಳಿದಿದೆ ಮತ್ತು ಅವರು ತಮ್ಮ ಹಳ್ಳಿಯ ಹೊರಗೆ ಹೋದಾಗಲೆಲ್ಲಾ ವಿಮಾನಗಳನ್ನು ಬಳಸುತ್ತಾರೆ.
ಈ ಹಳ್ಳಿಯಲ್ಲಿ ಅನೇಕ ವಿಮಾನಗಳ ಉಪಸ್ಥಿತಿಯಿಂದಾಗಿ, ಇದನ್ನು ಬಹಳ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಎಲ್ಲವೂ ವಿಮಾನ ನಿಲುಗಡೆಗೆ ತಕ್ಕಂತೆ ವ್ಯವಸ್ಥೆ ಮಾಡಲಾಗಿದೆ.
ಈ ರಸ್ತೆಗಳಲ್ಲಿ ನೀವು ವಿಮಾನಗಳನ್ನು ಸುಲಭವಾಗಿ ಇಳಿಸಬಹುದಾದ ರೀತಿಯಲ್ಲಿ ಇಲ್ಲಿನ ರಸ್ತೆಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಪ್ರತಿ ಮನೆಯಲ್ಲೂ ವಿಮಾನ ಪಾರ್ಕಿಂಗ್ ಇದೆ.
Hill Stations: ದಕ್ಷಿಣ ಭಾರತದ 9 ಅದ್ಭುತ ಗಿರಿಧಾಮಗಳು
ಭಾರತೀಯರು ಈ 5 ದೇಶಗಳಿಗೆ ವೀಸಾ ಇಲ್ಲದೆಯೂ ಭೇಟಿ ಕೊಡಬಹುದು!
ಮೈಸೂರಿಗೆ ಹೋದ್ರೆ ತಪ್ಪದೇ ಈ 7 ಪ್ರವಾಸಿ ಸ್ಥಳಕ್ಕೆ ಭೇಟಿ ನೀಡೋದು ಮರಿಬೇಡಿ!
ವಾರಣಾಸಿ ಪ್ರವಾಸದ ವೇಳೆ ನೀವು ನೋಡಲೇಬೇಕಾದ 5 ಸ್ಥಳಗಳು!