ಇವು ನೋಡಲೇಬೇಕಾದ ಭಾರತದ ವಿಚಿತ್ರ ತಾಣಗಳಿವು...

By Web Desk  |  First Published Dec 2, 2018, 10:58 AM IST

ಪುಣ್ಯ ಕ್ಷೇತ್ರಗಳು, ಬೀಚ್, ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡಗಳಲ್ಲದೇ, ಭಾರತದಲ್ಲಿ ಕೆಲವು ವಿಚಿತ್ರ ಎನಿಸುವ ತಾಣಗಳೂ ಇವೆ. ಇವುಗಳನ್ನು ಜೀವನದಲ್ಲೊಮ್ಮೆ ನೋಡಲೇಬೇಕು. ಅಂಥ ವಿಚಿತ್ರ ತಾಣಗಳು ಯಾವುವು?


ಹಿಲ್ ಸ್ಟೇಷನ್, ಬೀಚ್ ನೋಡಿ ನೋಡಿ ಬೋರ್ ಆಗಿದ್ಯಾ? ಹಾಗಿದ್ರೆ ಭಾರತದ ಈ ಅದ್ಭುತ ಜಾಗಳನ್ನು ನೋಡಿ. ಇವು ದೊಡ್ಡ ಟೂರಿಸ್ಟ್ ತಾಣಗಳು ಅಲ್ಲ. ಆದರೆ ಎಲ್ಲಾ ತಾಣಗಳಿಗಿಂತ ಅದ್ಭುತವಾದ ಹಾಗೂ ಸುಂದರ ತಾಣಗಳಾಗಿದ್ದು, ನಿಮಗೆ ಅದ್ಭುತ ಅನುಭವವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ.

ಲೋಟಕ್ ಸರೋವರ ಮಣಿಪುರ: ಇದು ಮಣಿಪುರದಲ್ಲಿರುವ ಅತ್ಯಂತ ದೊಡ್ಡದಾದ ಸರೋವರ. ತೇಲುವ ಗಾರ್ಡನ್ ಎಂದೂ ಕರೆಯುತ್ತಾರೆ. ಇದು ತೇಲುತ್ತಿರುವ ವಿಶ್ವದ ಏಕೈಕ ಸರೋವರವಾಗಿದೆ.

Latest Videos

undefined

ರಾಮಸೇತುವಿನ ತೇಲುವ ಕಲ್ಲುಗಳು: ರಾಮಸೇತುವನ್ನು ಆಡೆಮ್ಸ್ ಬ್ರಿಡ್ಜ್ ಎನ್ನುತ್ತಾರೆ. ಇದನ್ನು ಶ್ರೀ ರಾಮನ ವಾನರ ಸೇನೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿತ್ತು. ಇಲ್ಲಿ ಬಳಕೆ ಮಾಡಿದ ಕಲ್ಲುಗಳು ನೀರಿನಲ್ಲಿ ಮುಳುಗುವುದಿಲ್ಲ. ಇದನ್ನು ಇಂದಿಗೂ ರಾಮೇಶ್ವರದ ರಾಮತೀರ್ಥದಲ್ಲಿ ಕಾಣಬಹುದು.

ಶಿವಪುರದ ಗಾಳಿಯಲ್ಲಿ ತೇಲುವ ಕಲ್ಲು, ಪುಣೆ : ಪುಣೆಯಿಂದ 25 ಕಿಮೀ ದೊರದಲ್ಲಿ ಶಿವಪುರದಲ್ಲಿ ಕಮರ್ ಅಲಿ ದರ್ವೇಶ್ ಬಾಬಾರ ಒಂದು ದರ್ಗಾ ಇದೆ. ಇಲ್ಲಿ 90 ಕಿಲೋ ಭಾರದ ಕಲ್ಲನ್ನು 11 ಜನ ತಮ್ಮ ಒಂದು ಬೆರಳಿನಲ್ಲಿ ಎತ್ತಿ ಗಾಳಿಯಲ್ಲಿ ಸುಲಭವಾಗಿ ತೇಲಿಸುತ್ತಾರೆ. ಆದರೆ 11 ಕ್ಕಿಂತ ಹೆಚ್ಚು ಜನವಾದರೆ ಅಥವಾ ಕಡಿಮೆ ಜನ ಇದ್ದರೆ ಇದು ಸಾಧ್ಯವಾಗುವುದೇ ಇಲ್ಲ!

ತೇಲುವ ಪೋಸ್ಟ್ ಆಫಿಸ್: ಕಾಶ್ಮೀರದ ದಾಲ್ ಸರೋವರದಲ್ಲಿ ಇದು ಇದೆ, ಈ ಫ್ಲೋಟಿಂಗ್ ಪೋಸ್ಟ್ ಆಫೀಸ್. ಇದು ನೀರಿನಲ್ಲಿ ತೇಲುವ ಕಾರಣ ಈ ಹೆಸರು ಬಂದಿದೆ. 2011ಕ್ಕೂ ಮುನ್ನ ಇದನ್ನು ನೆಹರು ಪಾರ್ಕ್ ಪೋಸ್ಟ್ ಆಫೀಸ್ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಇಲ್ಲಿನ ಪೋಸ್ಟ್ ಮಾಸ್ಟರ್ ಇದಕ್ಕೆ ಫ್ಲೋಟಿಂಗ್ ಪೋಸ್ಟ್ ಆಫೀಸ್ ಎಂದು ನಾಮಕರಣ ಮಾಡಿದರು.

click me!