ಮರೆತೇನೆಂದರೆ ಹೇಗೆ ಮರೆಯಲಿ ಆ ಫಸ್ಟ್ ಕ್ರಷ್...

By Web DeskFirst Published Apr 5, 2019, 3:50 PM IST
Highlights

ಪ್ರತಿಯೊಬ್ಬರ ಜೀವನದಲ್ಲಿಯೂ ಕಚಗುಳಿ ಇಟ್ಟಂಥ ಅನುಭವ ನೀಡುವ ಫಸ್ಟ್ ಕ್ರಷ್ ಸಂಭವಿಸಿರುತ್ತದೆ. ಪ್ರೀತಿಗಿಂತಲೂ ಹೆಚ್ಚು ಮಧುರಾನುಭವ ನೀಡುವ ಈ ಕ್ರಷ್ ಬಗ್ಗೆ ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು.

ಫಸ್ಟ್ ಕ್ರಶ್... ಆ ಪದ ಕೇಳುವಾಗಲೇ ಎದೆಯಲ್ಲಿ ಯಾಕೋ ಕಚಗುಳಿ ಇಟ್ಟಂಥ ಅನುಭವ. ಅದು ಪ್ರೀತಿಗಿಂತಲೂ ಹೆಚ್ಚಿನ ಸಂತೋಷ ನೀಡೋ ಮಧುರಾನುಭವ. ಜತೆಯಾಗಿ ಕುಳಿತು ಮಾತನಾಡೋದು ಇರಲ್ಲ, ಜಗಳಾನೂ ಇರಲ್ಲ, ದೂರ ಆಗ್ತಾರೆ, ಬ್ರೇಕ್ ಅಪ್ ಆಗುತ್ತೆ ಅನ್ನೋ ಭಯವೂ ಇಲ್ಲ. ಮೇಲಾಗಿ ಕರೆದಾಗ ಬರೋಲ್ಲ ಎನ್ನುವ ಸಿಟ್ಟಂತೂ ಇರೋದೇ ಇಲ್ಲ. ಪ್ರೀತಿ ಎಂದರೆ ಏನೂ ಎಂದು ಅರ್ಥವೇ ಆಗದಿದ್ದಾಗ ಹೊಟ್ಟು ಭಾವವಿದು.

ಶಾಲೆಗೆ ಹೋಗೋ ಸಮಯಕ್ಕೆ ಆಗೋ ಕ್ರಷ್ ಇದು. ಮನಸು ವಿಕಸಿಸುವ ಸಮಯ. ಪ್ರಬುದ್ಧತೆ ಎಂದರೇನು ಎಂಬುವುದು ಗೊತ್ತೇ ಇಲ್ಲದ ಹೊತ್ತು. ಜಗತ್ತು ಕಲರ್‌ಫುಲ್ ಆಗಿಯೇ ಕಾಣಿಸುತ್ತದೆ. ಆ ಸಮಯದಲ್ಲಿ ಮನಸ್ಸಿನಲ್ಲಿ ಹೊಸದೇನೂ ಆಕರ್ಷಣೆ, ಕಾಮನೆ ಶುರುವಾಗುತ್ತದೆ. ಕ್ಲಾಸಿನಲ್ಲಿರುವ ಆ ಬ್ರಿಲಿಯಂಟ್ ಹುಡುಗನೋ ಅಥವಾ ಸೈಲೆಂಟ್ ಹುಡುಗಿನೋ ಮನಸ್ಸಿಗೆ ತುಂಬಾ ಹತ್ತಿರವಾಗಿಬಿಡುತ್ತಾರೆ. ಅವರನ್ನು ನೋಡೋದೇ ಒಂಥರಾ ಖುಷಿ. ಹಾಗಂಥ ಇದು ಪ್ರೀತಿನಾ? ನೋ ವೇ ಛಾನ್ಸೇ ಇಲ್ಲ. ಇದು ಕ್ರಷ್ ಅಷ್ಟೇ. 

ಈ ಫಸ್ಟ್ ಕ್ರಷ್ ಹೇಗಾಗುತ್ತೆ ಎನ್ನೋದೂ ಗೊತ್ತಾಗೋಲ್ಲ. ನೋಡು ನೋಡುತ್ತಲೇ , ಆ ವ್ಯಕ್ತಿ ಇಷ್ಟವಾಗಿ ಬಿಡುತ್ತಾರೆ. ಅವರ ಒಂದು ಸ್ಮೈಲಿಗೆ, ಕಣ್ಣೋಟಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ ಅವರ ಜೊತೆ ಮಾತನಾಡಬೇಕು, ಜೊತೆಯಾಗಿ ಇರಬೇಕು ಅನ್ನೋ ಯೋಚನೆಯೆಲ್ಲಾ ಬರೋಲ್ಲ. ಏಕೆಂದರೆ ಆ ಸಮಯದಲ್ಲಿ ಅಷ್ಟೆಲ್ಲಾ ಯೋಚನಾ ಲಹರಿ ಮೂಡೋಲ್ಲ. ಅವರು ಎಷ್ಟೊತ್ತು ಎದುರಿರುತ್ತಾರೋ, ಅಷ್ಟೊತು ಮಾತ್ರ ಕಾಡುತ್ತಾರೆ. ಅವರ ಮುಂದೆ ತಾನು ಸ್ಮಾರ್ಟ್ ಆಗಿ, ಬ್ರಿಲಿಯಂಟ್ ಆಗಿ ಕಾಣಬೇಕು ಎಂದೆನಿಸುತ್ತದೆ. 

ಅದಕ್ಕಾಗಿ ಕಸರತ್ತೂ ಮಾಡುತ್ತಾರೆ. ಆ ಕ್ರಶ್ ಅನ್ನು ಸಮೀಪಿಸಲು ಪೆನ್ ಕೊಡುವ ನೆಪ ಹೇಳಿ, ಪುಸ್ತಕ ಕೇಳುವ ನೆಪ ಮಾಡಿ, ಬರ್ತ್ ಡೇ ದಿನ ಒಂದು ಚಾಕಲೇಟ್ ಎಕ್ಸ್ ಟ್ರಾ ನೀಡುವ ಮೂಲಕ ಖುಷಿ ಪಡುತ್ತಾರೆ. ಜೀವನದಲ್ಲಿ ಅದೆಷ್ಟು ಪ್ರೀತಿ ಬರಲಿ, ಆದರೆ ಫಸ್ಟ್ ಕ್ರಶ್ ಮರೆಯುವುದು ಅಸಾಧ್ಯ. ಪ್ರೀತಿಯ ಮೊದಲ ಹೆಜ್ಜೆಯನ್ನು ಕಲಿಸುವ ಆ ಕ್ರಶ್ ನೆನಪು ಹೃದಯದ ಮೂಲೆಯಲ್ಲಿ ಸದಾ ಶಾಶ್ವತವಾಗಿರುತ್ತದೆ. 

click me!