ಹೆಚ್ಚಿನವರು ಮುಂಜಾನೆ ಉಪಹಾರಕ್ಕೆ ಮೊಳಕೆ ಕಾಳುಗಳನ್ನು ಸೇವಿಸುತ್ತಾರೆ. ಡಯಟ್‌ನಲ್ಲಿಯೂ ಇದನ್ನು ನಿಯಮಿತವಾಗಿ ಸೇವಿಸುತ್ತಾರೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕೇನು ಲಾಭ?
- ಇದರಲ್ಲಿ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಇವೆ. ಇದರಿಂದ ದೇಹಕ್ಕೆ ಬೇಕಾದಷ್ಟು ಫೈಬರ್ ದೊರೆಯುತ್ತದೆ. ಜೊತೆಗೆ ಇದರಲ್ಲಿ ಮಿನರಲ್ಸ್ ಮತ್ತು ವಿಟಾಮಿನ್ ಕೂಡ ಇರುತ್ತದೆ.
- ಸತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹಕ್ಕೆ ಹೆಚ್ಚು ಸುಸ್ತಾಗದಂತೆ ನೋಡಿಕೊಳ್ಳುತ್ತದೆ.
- ಮೊಳಕೆ ಕಾಳು ಸೇವನೆಯಿಂದ ಮಾಂಸ ಖಂಡಗಳು ಸದೃಢವಾಗುತ್ತವೆ. ಅಲ್ಲದೆ ಮಾಂಸಖಂಡಗಳ ಬೆಳವಣಿಗೆಗೂ ಸಹಕಾರಿ. ಜೊತೆಗೆ ಬೊಜ್ಜನ್ನೂ ನಿವಾರಿಸುತ್ತದೆ.
- ಇದರಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರೋದರಿಂದ ಮಲಬದ್ಧತೆ ಸಮಸ್ಯೆಯೂ ಕಾಡೋಲ್ಲ.
ಚಪಾತಿ ರುಚಿ ಹೆಚ್ಚಿಸೋ ಹೆಸರು ಕಾಳು ಪಲ್ಯ ಮಾಡೋದು ಹೀಗೆ...
- ಉತ್ತಮ ಪಚನಕ್ರಿಯೆಗೂ ಮದ್ದು.
- ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮೊಳಕೆ ಕಾಳು ಸಹಕಾರಿ. ಇದರಿಂದ ಬ್ಲಡ್ ಪ್ರೆಷರ್ ಕಡಿಮೆಯಾಗುತ್ತದೆ. ಹಾಗೂ ಹೃದಯ ಆರೋಗ್ಯದಿಂದಿರಲು ಸಹಾಯವಾಗುತ್ತದೆ.