ಪಾಠದ ಬದಲು ಸೀರೆಯ ಅಂದ ನೋಡಿದಾಗ; ತುಂಟತನ ಚೆಂದ ಹಿಡಿತದಲ್ಲಿದ್ದಾಗ!

By Web DeskFirst Published Sep 19, 2019, 4:31 PM IST
Highlights

ಕ್ಲಾಸಿನಲ್ಲಿ ಟಾಪಿಕ್‌ ಇಂಟ್ರೆಸ್ಟಿಂಗ್‌ ಇಲ್ಲದೇ ಇದ್ದರೂ ಆ ಚೆಂದದ ಯಂಗ್‌ ಲೇಡಿ ಲೆಕ್ಚರರ್‌ ಮೇಲೆ ಇಂಟ್ರೆಸ್ಟ್‌ ಅಂತೂ ಪಕ್ಕಾ ಇರುತ್ತೆ. ಕಿವಿಗೆ ಬಡಿಯುವ ಆ ಲೇಡಿ ಲೆಕ್ಚರರ್‌ ಧ್ವನಿ, ಅವರ ಬ್ಯೂಟಿ, ವೇ ಆಫ್‌ ಟೀಚಿಂಗ್‌ ಮೆಥಡ್‌, ಕೆನ್ನೆಗೆ ಜಾರಿರುವ ಅವರ ಮುಂಗುರುಳು, ಕಣ್ಣಿಗೆ ಹಚ್ಚಿರುವ ಕಾಜಲ್‌, ಅವರ ತುಟಿಗೆ ಪಪ್ಪಿ ಕೊಟ್ಟಿರುವ ಲಿಪ್‌ಸ್ಟಿಕ್‌ ಮೇಲೆ ನಮ್ಮ ದೃಷ್ಟಿ ನೆಟ್ಟಿರುತ್ತೆ. 

ಪಾಪ, ಅಲ್ಲಿ ಉಪನ್ಯಾಸಕರೋ, ಗಂಟಲು ಹರಿದುಕೊಳ್ಳುತ್ತಿರುತ್ತಾರೆ. ಇಲ್ಲಿ ನಮ್ಮದು ಬೇರೆಯದ್ದೇ ಲೋಕ. ಆ ಟೈಮ್‌ನಲ್ಲಿ ಕವಿ, ಸಾಹಿತಿ, ಕಾದಂಬರಿಕಾರರಾದ ಉದಾಹರಣೆ ನಮ್ಮ ಲಾಸ್ಟ್‌ ಬೆಂಚ್‌ ಗ್ರೂಪ್‌ನಲ್ಲಿದೆ. ಒಂದು ಇಂಟರಾರ‍ಯಕ್ಷನ್‌ ಮುಗಿಯುವುದರೊಳಗೆ ಒಂದು ಕಥೆ ಬರೆದು ಮುಗಿಸಿದ್ದು ಇದೆ.(ಬ್ಲರ್ಬ್‌)

ಇವ್‌್ನ ಯಾರೋ..? ಎಲ್ಲಿಂದ ಬಂದಿದ್ದಾನೋ.. ಯಾಕೋ ಇಷ್ಟೊಂದು ತಲೆ ತಿಂತಿದ್ದಾನೆ..? ಇವೆಲ್ಲಾ ವೈರಾಗ್ಯದ ಭಾವಾಭಿವ್ಯಕ್ತಿಗಳು ಹೊತ್ತು ಏರುವಾಗ ಅಥವಾ ಮಧ್ಯಾಹ್ನದ ಹೊತ್ತಿಗೆ ಯಾರಾದರೂ ಗೆಸ್ಟ್‌ ಲೆಕ್ಚರರ್‌ ಅಂತ ಬೋರಿಂಗ್‌ ಕಾನ್ಸೆಪ್ಟ್‌ ಆಯ್ದುಕೊಂಡು ಕ್ಲಾಸ್‌ಗೆ ಬಂದ್ರೆ ನಾವು ನಮ್ಮೊಳಗೆ ಲಾಸ್ಟ್‌ ಬೆಂಚಲ್ಲಿ ಕುಳಿತುಕೊಂಡು ಪರಸ್ಪರ ಕೇಳಿಕೊಳ್ಳುವ ಪ್ರಶ್ನೆಗಳು.

ಮಗನಿಗೆ ಹುಡುಗಿ ಬೇಕೆಂದರೆ ಬದಲಾಗಿದೆ ಅತ್ತೆ ಮಾವಂದಿರ ಡಿಮ್ಯಾಂಡ್!

ಅಯ್ಯೋ ದೇವ್ರೇ.. ಮಧ್ಯಾಹ್ನ ಹೊಟ್ಟೆಗೆ ಪೂಜೆಯಾಗಿರುತ್ತದಷ್ಟೇ. ಡಿಪಾರ್ಟ್‌ಮೆಂಟ್‌ ಲೆಕ್ಚರರ್‌ ಮುಖ ನೋಡುವಾಗಲೇ ನಿದ್ದೆ ಬರುವ ಟೈಮ್‌, ಅಂಥದರಲ್ಲಿ ಅನ್‌ಇಂಟ್ರೆಸ್ಟಿಂಗ್‌ ಅದ್ಯಾವುದೋ ಹಿಸ್ಟರಿ ಬಗ್ಗೆನೋ, ಲಿಟರೇಚರ್‌ ಬಗ್ಗೆನೋ ಯಾರಾದರೂ ಕ್ಲಾಸ್‌ ತಗೊಳ್ತೇನೆ ಅಂತ ಬಂದ್ರೆ ‘ಇವ್ರು ಯಾಕಾದ್ರೂ ಬಂದ್ರಪ್ಪಾ’ ಅನ್ನಿಸಿಬಿಡುತ್ತೆ. ಮಾತ್ರವಲ್ಲದೇ ಅವರ ಮೇಲೆ ಸಿಟ್ಟು ಬರುವುದಕ್ಕಿಂತ ಹೆಚ್ಚು ಕ್ಲಾಸ್‌ ಮಾಡುವುದಕ್ಕೆ ಅವಕಾಶ ನೀಡಿ ಕ್ಲಾಸ್‌ ರೂಮ್‌ಗೆ ಬಂದು ಇವರು ಇಂತಿಂಥವರು ಎಂದು ಸೋ ಕಾಲ್ಡ್‌ ಉಪನ್ಯಾಸಕರ ಬಗ್ಗೆ ಇಲ್ಲದೇ ಇರುವುದನ್ನೆಲ್ಲ ಹೇಳಿ ಹಾಡಿ, ಒಂದಿಷ್ಟುಹೊಗಳಿ ಹೊನ್ನ ಶೂಲಕ್ಕೇರಿಸಿ ನಮ್ಮ ತಲೆ ತಿನ್ನೋದಕ್ಕೆ ದಯೆ ತೋರುವ ಡಿಪಾರ್ಟ್‌ಮೆಂಟ್‌ನ ಕೋ-ಆರ್ಡಿನೇಟರ್‌ ಮೇಲೆ ಸಿಟ್ಟು ಬರುವುದು ಅಷ್ಟಿಷ್ಟಲ್ಲ.

ನಿದ್ದೆ ಮಾಡಬಾರದು, ನಿದ್ದೆ ಬರ್ತಿದೆ, ಆದರೂ ನಿದ್ದೆ ಮಾಡಬಾರದು..! ಅಂತ ಸ್ಥಿತಿ ನಮಗೆ. ಪಿಜಿ ಲೆವೆಲ್‌ ಸ್ಟೂಡೆಂಟ್ಸ್‌ ನಾವು. ಡೆಸ್ಕ್‌ಗೆ ತಲೆ ಒರಗಿಸಿ ಮಲಗಿದ್ರೆ.., ಪಾಪ ಬಂದವರಿಗೆ ಅಗೌರವ ಸೂಚಿಸಿದಂತಾಗುತ್ತೆ ಎನ್ನುವ ಅರಿವು ನಮಗಿದೆ. ಜೊತೆಗೆ, ಲಾಸ್ಟ್‌ ಬೆಂಚಲ್ಲಿ ಕುಳಿತದ್ದಕ್ಕೆ ಕಣ್ತೆರೆದೇ ನಿದ್ದೆ ಮಾಡುವ ತಂತ್ರವೂ ದೇವರ ದಯೆಯಿಂದ ಸಿದ್ಧಿಸಿದೆ. ಪಾಪ, ಆ ಉಪನ್ಯಾಸಕರೋ, ಗಂಟಲು ಹರಿದುಕೊಳ್ಳುತ್ತಿರುತ್ತಾರೆ. ಇಲ್ಲಿ ನಮ್ಮದು ಬೇರೆಯದ್ದೇ ಲೋಕ. ಆ ಟೈಮ್‌ನಲ್ಲಿ ಕವಿ, ಸಾಹಿತಿ, ಕಾದಂಬರಿಕಾರರಾದ ಉದಾಹರಣೆ ನಮ್ಮ ಲಾಸ್ಟ್‌ ಬೆಂಚ್‌ ಗ್ರೂಪ್‌ನಲ್ಲಿದೆ. ಒಂದು ಇಂಟರಾರ‍ಯಕ್ಷನ್‌ ಮುಗಿಯುವುದರೊಳಗೆ ಒಂದು ಕಥೆ ಬರೆದು ಮುಗಿಸಿದ್ದು ಇದೆ.

ಗಂಡ ಹೆಂಡತಿ ಹತ್ತಿರಾಗಿಸೋ ಮ್ಯಾಜಿಕ್‌!

ಕೆಲವೊಮ್ಮೆ ಆ ಪ್ರಯತ್ನಕ್ಕೆ ಪಕ್ಕದವ ರಗಳೆ ಕೊಟ್ಟದ್ದೂ ಇದೆ. ಹಾಗಂತ ಎಲ್ಲಾ ಗೆಸ್ಟ್‌ ಲೆಕ್ಚರ್‌ ಅಲ್ಲಿ ಈ ರೀತಿ ಮಾಡುವುದಿಲ್ಲ, ಹೇಳುವಷ್ಟು ಮಟ್ಟಿಗೆ ಒಳ್ಳೆಯವರೂ ಅಲ್ಲ. ಲೆಕ್ಚರ್‌ ಕೊಡುವವರ ನಾಲೆಡ್ಜ್‌, ಅವರು ಆಯ್ದುಕೊಂಡ ವಿಷಯ, ಅಷ್ಟಲ್ಲದೇ ಗೆಸ್ಟ್‌ ಲೆಕ್ಚರ್‌ ಕೊಡುವವರು ಒಂದು ವೇಳೆ ಚೆಂದದ ಯಂಗ್‌ ಲೇಡಿ ಯಾರಾದರೂ ಆಗಿದ್ದರೇ ಕಣ್ಣಿಗೂ ತಂಪು, ಮನಸ್ಸಿಗೂ ಹಬ್ಬ. ಕೊನೆಗೆ ಸ್ವಲ್ಪ ವಿಷಯವೂ ತಿಳಿದಂತಾಗುತ್ತದೆ. ಎಲ್ಲವೂ ಒಟ್ಟಿಗೆ ಸಿಗುತ್ತದೆ, ಒಂದು ರೀತಿ ಫ್ಯಾಮಿಲಿ ಪ್ಯಾಕೇಟ್‌ ಪಟಾಕಿ ಇದ್ದ ಹಾಗೆ.

ಟಾಪಿಕ್‌ ಇಂಟ್ರೆಸ್ಟಿಂಗ್‌ ಇಲ್ಲದೇ ಇದ್ದರೂ ಆ ಚೆಂದದ ಯಂಗ್‌ ಲೇಡಿ ಲೆಕ್ಚರರ್‌ ಮೇಲೆ ಇಂಟ್ರೆಸ್ಟ್‌ ಅಂತೂ ಪಕ್ಕಾ ಇರುತ್ತೆ. ಕಿವಿಗೆ ಬಡಿಯುವ ಆ ಲೇಡಿ ಲೆಕ್ಚರರ್‌ ಧ್ವನಿ, ಅವರ ಬ್ಯೂಟಿ, ವೇ ಆಫ್‌ ಟೀಚಿಂಗ್‌ ಮೆಥಡ್‌, ಕೆನ್ನೆಗೆ ಜಾರಿರುವ ಅವರ ಮುಂಗುರುಳು, ಕಣ್ಣಿಗೆ ಹಚ್ಚಿರುವ ಕಾಜಲ್‌, ಅವರ ತುಟಿಗೆ ಪಪ್ಪಿ ಕೊಟ್ಟಿರುವ ಲಿಪ್‌ಸ್ಟಿಕ್‌ ಮೇಲೆ ನಮ್ಮ ದೃಷ್ಟಿನೆಟ್ಟಿರುತ್ತೆ.

ಹೃದಯಕೂ ಮನಸಿಗೂ ಸಂಬಂಧ ಉಂಟೇ?

ಒಮ್ಮೊಮ್ಮೆ ಅವರ ತುಟಿಗೆ ಅಂಟಿರುವ ಲಿಪ್‌ಸ್ಟಿಕ್‌ ಆದರೂ ನಾನಾಗಬಾರದಿತ್ತೇ ದೇವರೆ..? ಎಂದೆಲ್ಲಾ ಅನ್ನಿಸುವುದುಂಟು. ಮಾನಸಿಕ ಸಮಸ್ಯೆಯಲ್ಲ ಸ್ವಾಮಿ, ನಮ್ಮ ಎಲ್ಲಾ ಸೈಕಾಲಜಿಕಲ್‌ ಸಿಸ್ಟಮ್‌ ನಾರ್ಮಲ್‌ ಆಗಿದೆ. ವಿ ಆರ್‌ ಎಂಜಾಯಿಂಗ್‌ ಬ್ಯೂಟಿ. ನಮಗೋ, ಯೌವನ.. ಕ್ಲಾಸ್‌ಗೆ ಬರುವವರೆಲ್ಲಾ ಚೆಂದದ ಬಣ್ಣದ ಜರಿ ಸೀರೆ ಉಟ್ಟುಕೊಂಡವರೇ ಆಗಿರಲಿ ಎಂದು ಅನ್ನಿಸುವುದು ದೇವರು ಬೇಡವೆಂದರೂ ಕೊಟ್ಟವರ. ತಪ್ಪು ನಮ್ಮದಲ್ಲ, ದೇವರದ್ದು..!

-  ಶ್ರೀರಾಜ್‌ ಎಸ್‌. ಆಚಾರ್ಯ, ವಕ್ವಾಡಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ.

click me!