ನೀವು ಕಡೆಗಣಿಸಿರಬಹುದಾದ ಈ ಲಕ್ಷಣಗಳು ಕ್ಯಾನ್ಸರಿನ ಸೂಚನೆಯೂ ಆಗಿರಬಹುದು!

By Web DeskFirst Published Sep 18, 2019, 3:24 PM IST
Highlights

ಕ್ಯಾನ್ಸರ್‌ ಎಂಬುದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲ. ಅದು ಯಾವಾಗ ಬೇಕಾದರೂ ದೇಹದ ಯಾವ ಭಾಗದಲ್ಲಿ ಬೇಕಾದರೂ ಆಗಬಹುದು. ಆರಂಭದಲ್ಲಿ ಸಣ್ಣ ಪುಟ್ಟ ಹೌದೋ ಅಲ್ಲವೋ ಎಂಬಂಥ ಸೂಚನೆಗಳನ್ನು ನೀಡುವಾಗ ನೀವು ಇದು ಕ್ಯಾನ್ಸರ್ ಇರಬಹುದೆಂದು ಕೂಡಾ ಊಹಿಸಲಾರಿರಿ. ಆದರೆ, ಅದು ದೊಡ್ಡ ಸೂಚನೆ ಕೊಡುವಷ್ಟರಲ್ಲಿ ಕಡೆಯ ಹಂತಕ್ಕೆ ತಲುಪಿಯಾಗಿರುತ್ತದೆ. ಹಾಗಾಗಿ, ಈ ಲಕ್ಷಣಗಳನ್ನು ಕಡೆಗಣಿಸಬೇಡಿ...

ಕ್ಯಾನ್ಸರ್ ಎಂಬುದು ಹೆಸರಿನಲ್ಲೇ ಭಯ ಹುಟ್ಟಿಸುವ ಕಾಯಿಲೆ. ಅದು ದೇಹದ ಯಾವುದೇ ಭಾಗದಲ್ಲಿ ಬೇಕಾದರೂ ಆಗಬಹುದು. ಅಷ್ಟೇ ಅಲ್ಲ, ಯಾವ ಲಕ್ಷಣವನ್ನು ಬೇಕಾದರೂ ತೋರಿಸಬಹುದು ಎನ್ನುತ್ತದೆ ಅಮೆರಿಕನ್ ಕ್ಯಾನ್ಸರ್ ಸೊಸೈಟಿ. ಜ್ವರ, ನೋವು  ಮುಂತಾದ ಲಕ್ಷಣಗಳಾದರೆ ತೋರಿಸಿಕೊಳ್ಳುತ್ತೇವೆ. 

ಆದರೆ ಸುಸ್ತಿನಷ್ಟು ಸಣ್ಣ ಪುಟ್ಟ ಲಕ್ಷಣಗಳು ಕೂಡಾ ಕ್ಯಾನ್ಸರ್ ಸೂಚಕ ಎಂದು ಯಾರು ತಾನೇ ಯೋಚಿಸುತ್ತಾರೆ? ಅದೇ ಕಾರಣಕ್ಕೆ ಕ್ಯಾನ್ಸರ್ ಸೈಲೆಂಟ್ ಕಿಲ್ಲರ್ ಎನಿಸಿಕೊಂಡಿರುವುದು. ಬಹುತೇಕರಿಗೆ ಕ್ಯಾನ್ಸರ್ ಪತ್ತೆಯಾಗುವ ಹೊತ್ತಿಗಾಗಲೇ ಅವರು ಮೂರನೇ, ನಾಲ್ಕನೇ ಹಂತ ತಲುಪಿಯಾಗಿರುತ್ತದೆ. ಆ ನಂತರದ ಚಿಕಿತ್ಸೆ ಸುಲಭದ್ದಲ್ಲ. ಹಾಗಾಗಿ, ದೇಹ ಹೇಳುವ ಗುಟ್ಟಿನ ಸಣ್ಣ ಸಣ್ಣ ವಿಷಯಗಳಿಗೂ ಕಿವಿಗೊಡಿ. ಅವನ್ನು ನೆಗ್ಲೆಕ್ಟ್ ಮಾಡದೆ ತೋರಿಸಿಕೊಳ್ಳಿ.

ಪತ್ನಿಯನ್ನು ಕಾಡಿದ ಕ್ಯಾನ್ಸರ್: ಫೋಟೋ ಶೂಟ್ ನೋಡಿದವರೆಲ್ಲಾ ಅತ್ತೇ ಬಿಟ್ರು!

ಏಕೆಂದರೆ, ಆರಂಭದಲ್ಲೇ ಕಾಯಿಲೆ ಪತ್ತೆಯಾದರೆ ಚಿಕಿತ್ಸೆಯೂ ಚೆನ್ನಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಅನಾರೋಗ್ಯಗಳು ಅವಾಗೇ ಬರುತ್ತವೆ, ತಾವಾಗಿಯೇ ಹೋಗುತ್ತವೆ. ಎರಡು ವಾರವಾದರೂ ಅವು ಹೋಗಲಿಲ್ಲವೆಂದಾಗ ನೀವು ಎಚ್ಚರವಾಗಬೇಕು. ವೈದ್ಯರ ಬಳಿ ಹೋಗಲೇಬೇಕು. ಕ್ಯಾನ್ಸರ್ ದೇಹದಲ್ಲಿ ಎಲ್ಲಾಗಿದೆ, ಗಾತ್ರ ಎಷ್ಟಿದೆ, ಯಾವ ವಿಧದ್ದು ಎಂಬುದರ ಆಧಾರದ ಮೇಲೆ ಅವುಗಳ ಲಕ್ಷಣಗಳೂ ಬದಲಾಗಬಹುದು.

ಸಾಮಾನ್ಯವಾಗಿ ನಾವು ಕಡೆಗಣಿಸುವಂಥ, ಹೆಚ್ಚು ದಿನ ಇದ್ದರೆ ಕಡೆಗಣಿಸಬಾರದ ಕ್ಯಾನ್ಸರ್ ಸೂಚಕ ಲಕ್ಷಣಗಳಿವು...

1. ಸುಸ್ತು

ಸಾಮಾನ್ಯವಾಗಿ ಸುಸ್ತಾದಾಗ ನಾವು ನೆಗ್ಲೆಕ್ಟ್ ಮಾಡುವುದೇ ಜಾಸ್ತಿ. ಏನೋ ಕೆಲಸ ಜಾಸ್ತಿಯಾಗಿರಬೇಕು, ವಯಸ್ಸಾಯ್ತಲ್ಲ ಎಂದೆಲ್ಲ ಸಬೂಬು ಕೊಟ್ಟುಕೊಂಡು ಅದರತ್ತ ಗಮನ ಹರಿಸುವುದೇ ಇಲ್ಲ. ಆದರೆ, ರೆಸ್ಟ್ ತೆಗೆದುಕೊಂಡ ಬಳಿಕವೂ ಸುಸ್ತು ಹೋಗುತ್ತಿಲ್ಲವೆಂದರೆ ನೀವು ಸ್ವಲ್ಪ ಎಚ್ಚರಾಗಬೇಕು. ಎಷ್ಟೇ ಸುಸ್ತೆನಿಸಿದರೂ ನಿದ್ರೆ ಬರದಿರುವುದು, ಎಷ್ಟು ನಿದ್ರಿಸಿದರೂ ರೆಸ್ಟ್ ಮಾಡಿದಂತೆನಿಸದಿರುವುದು, ಎನರ್ಜಿ ಇಲ್ಲದಂತೆನಿಸುವುದು ಇದರ ಲಕ್ಷಣಗಳು. 

ಪುರುಷರಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸೋದು ಹೇಗೆ?

2. ಚರ್ಮದಲ್ಲಿ ಗುಳ್ಳೆಗಳು, ಊತ

ಚರ್ಮದ ಕ್ಯಾನ್ಸರ್‌ ಯಾವಾಗಲೂ ಭಯಾನಕವಾಗಿ ಅಸಹ್ಯವಾಗಿ ಕಾಣಬೇಕೆಂದಿಲ್ಲ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಗುಳ್ಳೆಗಳೆದ್ದಿದ್ದರೂ ನೆಗ್ಲೆಕ್ಟ್ ಮಾಡುವಂತಿಲ್ಲ. ಅತಿ ಕೆಟ್ಟ ಚರ್ಮದ ಕ್ಯಾನ್ಸರ್ ಎನಿಸಿಕೊಂಡಿರುವ ಮೆಲನೋಮಾ ಕೂಡಾ ಕೈಕಾಲು ಉಗುರ ಅಡಿಗೆ ಸೇರಿದಂತೆ  ದೇಹದ ಯಾವ ಭಾಗದಲ್ಲಿ ಬೇಕಾದರೂ ಗೋಚರಿಸಬಹುದು. ಎಷ್ಟು ದಿನವಾದರೂ ಗುಣವಾಗದ ಗಾಯ ಕೂಡಾ ಸ್ಕಿನ್ ಕ್ಯಾನ್ಸರ್‌ನ ಲಕ್ಷಣವಿರಬಹುದು. ಮೊಡವೆಯಂತೆ ಕಾಣುವ ಸಣ್ಣ ಗುಳ್ಳೆ, ರಕ್ತ ಬರುತ್ತದೆ. ನಂತರ ಗುಣವಾದಂತೆ ಕಾಣಬಹುದು, ಮತ್ತೊಮ್ಮೆ ರಕ್ತ ಬರಬಹುದು... ಇದು ಕೂಡಾ ನೆಗ್ಲೆಕ್ಟ್ ಮಾಡುವ ಲಕ್ಷಣವಲ್ಲ.

3. ಬೇಗ ಹೊಟ್ಟೆ ತುಂಬಿದಂತೆನಿಸುವುದು

ಗರ್ಭಾಶಯ ಕ್ಯಾನ್ಸರನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚುವುದು ಕಷ್ಟ. ಆದರೆ, ಆರಂಭದಲ್ಲಿ ಕಾಣಿಸಿಕೊಳ್ಳಬಹುದಾದ ಒಂದು ಲಕ್ಷಣವೆಂದರೆ ಚೂರು ತಿನ್ನುತ್ತಿದ್ದಂತೆಯೇ ಹೊಟ್ಟೆ ತುಂಬಿದಂತೆನಿಸುವುದು. 

4. ಹಸಿವಿಲ್ಲದಿರುವುದು

ಹಸಿವಿಲ್ಲದಿರುವುದು ಕರುಳಿನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕೆಲವೊಮ್ಮೆ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣ ಕೂಡಾ ಹೌದು. ಇದರೊಂದಿಗೆ ಹೊಟ್ಟೆನೋವು ಕೂಡಾ ಬರಬಹುದು. ಅದರಿಂದ ತಿನ್ನಲು ಕಷ್ಟವೆನಿಸಬಹುದು. 

ಕ್ಯಾನ್ಸರ್ ಮಣಿಸಿ ಬ್ಯೂಟಿ ಕಿರೀಟ ತೊಟ್ಟ ಸುಂದರಿ!

5. ಅಕಾರಣವಾಗಿ ಸಿಕ್ಕಾಪಟ್ಟೆ ತೂಕ ಇಳಿಕೆ

ತೂಕ ಇಳಿಕೆಗೆ ಯಾವುದೇ ವಿಶೇಷ ಪ್ರಯತ್ನ ಹಾಕದೆಯೇ ಕಡಿಮೆ ಅವಧಿಯಲ್ಲಿ ಹತ್ತಾರು ಕೆಜಿ ಇಳಿದರೆ ವೈದ್ಯರನ್ನು ಕಾಣಲೇಬೇಕು. ಪ್ಯಾಂಕ್ರಿಯಾಟಿಕ್, ಹೊಟ್ಟೆಯ ಕ್ಯಾನ್ಸರ್, ಗಂಟಲು ಹಾಗೂ ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಕೂಡಾ ಈ ಲಕ್ಷಣ ಕಂಡುಬರುತ್ತದೆ. ಹಲವಾರು ಬ್ಲಡ್ ಕ್ಯಾನ್ಸರ್‌ಗಳು ಕೂಡಾ ಈ ಸೂಚನೆ ನೀಡುತ್ತವೆ. 

6. ಎದೆಯಲ್ಲಿ ಗುಳ್ಳೆಗಳು

ಎದೆಯಲ್ಲಿ ಗಂಟು ಕಾಣಿಸಿಕೊಳ್ಳುವುದು ಬ್ರೆಸ್ಟ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣ. ಆದರೆ, ಅದಷ್ಟೇ ಅಲ್ಲ, ಎದೆಯ ಮೇಲಿನ ತ್ವಚೆಯಲ್ಲಿ ಯಾವುದೇ ಬದಲಾವಣೆಗಳು ಕಾಣಿಸಿಕೊಂಡರೂ ಎಚ್ಚೆತ್ತುಕೊಳ್ಳಬೇಕು. ಅವುಗಳೆಂದರೆ, ಗುಳ್ಳೆಗಳು, ಕೆಂಪಾಗುವುದು, ತುರಿಕೆ, ನೋವು, ಚಕ್ಕೆ ಏಳುವುದು, ದಪ್ಪಗಾದ ನಿಪ್ಪಲ್ಸ್ ಇತ್ಯಾದಿ. 

7. ಹೊಟ್ಟೆ ಉಬ್ಬರಿಕೆ

Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!

ಗರ್ಭಾಶಯ ಕ್ಯಾನ್ಸರ್ ಇರುವವರಲ್ಲಿ ಸಾಮಾನ್ಯವಾಗಿ ಹೊಟ್ಟೆ ಉಬ್ಬರಿಸುವಿಕೆ ಕಂಡು ಬರುತ್ತದೆ. ಯಾರಾದರೂ ಮಹಿಳೆ ಹೊಟ್ಟೆ ದೊಡ್ಡಗಾದಂತೆ, ತಿನ್ನಲು ಕಷ್ಟವಾಗುತ್ತಿದೆ ಎಂದು, ಬೇಗ ಹೊಟ್ಟೆ ತುಂಬಿದಂತೆನಿಸುತ್ತದೆ. ನೋವಾಗುತ್ತದೆ, ಉಬ್ಬರಿಸುತ್ತದೆ ಎಂದೆಲ್ಲ ದೂರುತ್ತಿದ್ದರೆ, ಈ ಲಕ್ಷಣಗಳು ಕಳೆದ ವರ್ಷದೀಚೆಗೆ ಹೊಸದಾಗಿ ಕಾಣಿಸಿಕೊಳ್ಳುತ್ತಿದ್ದರೆ, ತಿಂಗಳಲ್ಲಿ ಕನಿಷ್ಠ 12 ಬಾರಿ ಈ ದೂರುಗಳಿದ್ದರೆ ಅದನ್ನು ರೆಡ್ ಫ್ಲ್ಯಾಗ್ ಎಂದು ಪರಿಗಣಿಸಿ. 

8. ರಾತ್ರಿ ಬೆವರುವುದು

ಮಲಗಿದ ಬಳಿಕ ಅತಿಯಾಗಿ ಬೆವರುತ್ತಿದ್ದರೆ ಆರೋಗ್ಯದಲ್ಲಿ ಏನೋ ಸರಿಯಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಇದು ರೋಗ ನಿರೋಧಕ ವ್ಯವಸ್ಥೆಯ ಕ್ಯಾನ್ಸರ್ ಆದ ಲಿಂಫೋಮಾವನ್ನು ಸೂಚಿಸುತ್ತಿರಬಹುದು. ಇದರೊಂದಿಗೆ ಜ್ವರ, ಸುಸ್ತು, ತೂಕ ಇಳಿಯುವಿಕೆ ಕೂಡಾ ಕಾಣಿಸಿಕೊಳ್ಳಬಹುದು. 

ಇಲ್ಲಿನ ನೀರು ಕುಡಿದರೆ ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ!

click me!