ಬೆಳಗಿನ ತಿಂಡಿಯನ್ನು ಆಕರ್ಷಕಗೊಳಿಸುವ ಎಲೆಕೋಸಿನ ಪರೋಟ!

By Web DeskFirst Published Sep 18, 2019, 3:35 PM IST
Highlights

ಎಲೆಕೋಸು ಆಹಾರಕ್ಕೆ ಕ್ರಿಸ್ಪಿತನ ನೀಡುವ ಜೊತೆಗೆ, ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇನ್ನು ಎಲೆಕೋಸಿನ ಪರೋಟ ಬೆಳಗಿನ ತಿಂಡಿಗೆ, ಮಧ್ಯಾಹ್ನದ ಲಂಚ್ ಬಾಕ್ಸಿಗೆ ಹಾಗೂ ಚಳಿಗಾಲದ ಡಿನ್ನರ್‌ಗೆ ಕೂಡಾ ಹೇಳಿ ಮಾಡಿಸಿದಂತಿರುತ್ತದೆ. 

ದಕ್ಷಿಣ ಭಾರತೀಯರಿಗೆ ಪರೋಟ ಸ್ಪೆಶಲ್ ತಿಂಡಿಯೇ. ಈ ಸ್ಪೆಶಲ್ ತಿಂಡಿಯನ್ನು ಮತ್ತಷ್ಟು ಸ್ಪೆಶಲ್ ಮಾಡಿ ಮನಸೋ ಇಚ್ಛೆ ಸವಿಯಲು ಟ್ರೈ ಮಾಡಿ ಕ್ಯಾಬೇಜ್ ಪರೋಟ. ಇದು ಬೆಳಗಿನ ತಿಂಡಿಗಷ್ಟೇ ಅಲ್ಲ ಲಂಚ್ ಬಾಕ್ಸ್‌ಗೆ ಕೂಡಾ ಚೆನ್ನಾಗಿ ಸೂಟ್ ಆಗುತ್ತದೆ.

ತರಕಾರಿ ಹಾಗೂ ಗೋಧಿ ಸೇರಿ ಹೊಟ್ಟೆ ಚೆನ್ನಾಗಿ ತುಂಬುತ್ತದೆ ಜೊತೆಗೆ ಆರೋಗ್ಯಕಾರಿ ಕೂಡಾ. ಇದನ್ನು ಮಾಡುವುದರ ಮತ್ತೊಂದು ಲಾಭವೆಂದರೆ ಇದಕ್ಕಾಗಿ ಸ್ಪೆಶಲ್ ಸಬ್ಜಿ ಅಥವಾ ಚಟ್ನಿ ಅಗತ್ಯವಿಲ್ಲ. ಮೊಸರು ಹಾಗೂ ಉಪ್ಪಿನಕಾಯಿಯ ರಸದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಮಳ್ಳಿ ಮಳ್ಳಿ ಮಿಂಚುಳ್ಳಿ ಈ ಈರುಳ್ಳಿ!

ಪರೋಟ ಮಾಡುವುದು ಕಲಿತರೆ ಒಂದೇ ವಿಧಾನದಲ್ಲಿ ಆಲೂ ಪರೋಟ, ಗೋಬಿ ಪರೋಟ, ಎಲೆಕೋಸಿನ ಪರೋಟ ಪನ್ನೀರ್ ಪರೋಟ ಸೇರಿದಂತೆ ಹಲವು ವೆರೈಟಿ ರುಚಿಯನ್ನು ಆಗಾಗ ಸವಿಯಬಹುದು. ಆದರೆ, ಆಲೂ ಹಾಗೂ ಮೂಲಿ ಪರೋಟಾದಂತೆ ಎಲೆಕೋಸಿನ ಪರೋಟಕ್ಕೆ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳುವ ಅಗತ್ಯವಿಲ್ಲ. ಇದು ಕೂಡಾ ಕೆಲಸವನ್ನು ಸುಲಭಗೊಳಿಸುತ್ತದೆ. ಇದಕ್ಕಾಗಿ ಬಿಳಿ, ಕೆಂಪು, ಹಸಿರು ಹಾಗೂ ನೇರಳೆ ಬಣ್ಣದ ಎಲೆಕೋಸು ಕೂಡಾ ಬಳಸಬಹುದು. ಇದರಿಂದ ಪರೋಟಾ ಬಹಳಷ್ಟು ಕಲರ್‌ಫುಲ್ ಆಗಿರುತ್ತದೆ. 

ಈಗ ಸಧ್ಯಕ್ಕೆ ಎಲೆಕೋಸಿನ ಪರೋಟ ಮಾಡುವುದು ಹೇಗೆ ನೋಡೋಣ. 

ತಯಾರಿ ಸಮಯ: 10 ನಿಮಿಷ
ಮಾಡುವ ಸಮಯ: 30 ನಿಮಿಷ

ದಿಢೀರ್ ಮಾಡ್ಬಹುದು ಮೆಂತ್ಯೆ ಹಿಟ್ಟಿನ ಗೊಜ್ಜು, ನೀವೇ ಮಾಡಿ ರುಚಿ ನೋಡಿ

ಬೇಕಾಗುವ ಸಾಮಾಗ್ರಿಗಳು:

ಸ್ಟಫಿಂಗ್‌ಗೆ: 2 ಚಮಚ ಎಣ್ಣೆ, ½ ಚಮಚ ಜಜ್ಜಿದ ಕೊತ್ತಂಬರಿ ಬೀಜ, ½ ಚಮಚ ಅಜ್ವಾನ್, 3 ಕಪ್ ಸಣ್ಣದಾಗಿ ಹೆಚ್ಚಿಕೊಂಡ ಎಲೆಕೋಸು, ½ ಚಮಚ ಶುಂಠಿ ಪೇಸ್ಟ್,  ½ ಚಮಚ ಕೆಂಪು ಮೆಣಸಿನ ಪುಡಿ, ½ ಚಮಚ ಅರಿಶಿನ, ½ ಚಮಚ ಜೀರಿಗೆ ಪುಡಿ, ½ ಚಮಚ ಗರಂ ಮಸಾಲ, ½ ಚಮಚ ಆಮ್‌ಚೂರ್, ½ ಚಮಚ ಉಪ್ಪು, 2 ಚಮಚ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು.

ಹಿಟ್ಟಿಗೆ:

2½ ಬಟ್ಟಲು ಗೋಧಿ ಹಿಟ್ಟು, ಅರ್ಧ ಚಮಚ ಉಪ್ಪು, 2 ಚಮಚ ಎಣ್ಣೆ, ನಾದಲು ನೀರು. 

ಮಾಡುವ ವಿಧಾನ:

ಬಾಯಲ್ಲಿ ನೀರು ತರಿಸೋ ಆಲೂ ಚಾಟ್ಸ್ ರೆಸಿಪಿ

ಸ್ಟಫಿಂಗ್‌ಗಾಗಿ  ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕೊತ್ತಂಬರಿ ಪುಡಿ, ಅಜ್ವಾನ್ ಸೇರಿಸಿ. ಅವುಗಳು ಪರಿಮಳ ಬೀರಲು ಆರಂಭಿಸಿದ ಬಳಿಕ ಎಲೆಕೋಸು ಹಾಕಿ 2 ನಿಮಿಷ ಚೆನ್ನಾಗಿ ಹುರಿಯಿರಿ. ಇದಕ್ಕೆ ಶುಂಠಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲೆ, ಆಮ್‌ಚೂರ್ ಹಾಗೂ ಉಪ್ಪು ಸೇರಿಸಿ. ಎಲೆಕೋಸು ಚೆನ್ನಾಗಿ ಬೇಯುವವರೆಗೆ ಸೌಟಾಡಿಸಿ. ಈಗ ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ಅಲ್ಲಿಗೆ ಸ್ಟಫಿಂಗ್ ರೆಡಿ. 
ಹಿಟ್ಟನ್ನು ಸಿದ್ಧಪಡಿಸಲು ದೊಡ್ಡ ಬಾಣಲೆಯಲ್ಲಿ ಗೋಧಿಹಿಟ್ಟು, ಉಪ್ಪು ಹಾಗೂ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಇದಕ್ಕೆ 1 ಕಪ್ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಬರುವವರೆಗೆ ನಾದಿ. ಇದಕ್ಕೆ ಸ್ವಲ್ಪ ಎಣ್ಣೆ ಸವರಿ 20 ನಿಮಿಷಗಳ ಕಾಲ ಬದಿಗಿಡಿ. 

ಈಗ ಹಿಟ್ಟನ್ನು ಉಂಡೆಗಳನ್ನಾಗಿಸಿಕೊಳ್ಳಿ. ಒಂದೊಂದನ್ನಾಗಿ ತೆಗೆದುಕೊಂಡು ಗೋಧಿಹಿಟ್ಟಿನಲ್ಲಿ ಉರುಳಾಡಿಸಿ. ಇದನ್ನು ಲಟ್ಟಣಿಗೆಯಿಂದ ಲಟ್ಟಿಸಿಕೊಂಡು ಅದಕ್ಕೆ ಒಂದು ಉಂಡೆ ಗಾತ್ರದ ಎಲೆಕೋಸಿನ ಸ್ಟಫಿಂಗ್ ಮಧ್ಯೆ ಹಾಕಿ. ಈಗ ಲಟ್ಟಿಸಿಕೊಂಡ ಹಿಟ್ಟನ್ನು ಎಲ್ಲ ದಿಕ್ಕಿನಿಂದಲೂ ಈ ಸ್ಠಫಿಂಗ್ ಸುತ್ತ ಕವರ್ ಮಾಡುತ್ತಾ ಎಲ್ಲೂ ಓಪನ್ ಇಲ್ಲದ ಹಾಗೆ ತುದಿಯನ್ನು ಸೇರಿಸಿ ಉಂಡೆಯಾಕಾರಕ್ಕೆ ತನ್ನಿ. ಇದನ್ನು ಗೋಧಿ ಹಿಟ್ಟಿನಲ್ಲಿ ಉರುಳಾಡಿಸಿಕೊಂಡು ನಿಧಾನವಾಗಿ ಸ್ವಲ್ಪ ದಪ್ಪವೇ ಇರುವಂತೆ ಲಟ್ಟಿಸಿಕೊಳ್ಳಿ. 

ಹೃದ್ರೋಗಕ್ಕೆ ಮೊಳಕೆ ಕಾಳೆಂಬ ಮದ್ದು..

ಕಾವಲಿ ಕಾಯಲಿಟ್ಟು, ಸ್ವಲ್ಪ ತುಪ್ಪ ಹಾಕಿ ಪರೋಟವನ್ನು ಮೇಲೆ ಹಾಕಿ. ನಿಮಿಷದ ಬಳಿಕ ಪರೋಟವನ್ನು ಮಗುಚಿ. ಎರಡೂ ಬದಿ ಸುಡದಂತೆ ಚೆನ್ನಾಗಿ ಬೆಂದಿದೆ  ಎಂಬುದು ಖಚಿತಪಡಿಸಿಕೊಂಡು ಹೊರತೆಗೆಯಿರಿಯ ಅಲ್ಲಿಗೆ ರುಚಿರುಚಿಯಾದ ಪರೋಟ ಸಿದ್ಧ. ಬಿಸಿಬಿಸಿಯಾದ ಪರೋಟವನ್ನು ಮೊಸರು ಹಾಗೂ ಉಪ್ಪಿನಕಾಯಿ ರಸದೊಂದಿಗೆ ಸವಿಯಲು ನೀಡಿ.

ಟಿಪ್ಸ್: 

- ಸ್ಟಫಿಂಗ್‌ಗೆ ಈರುಳ್ಳಿ ಸೇರಿಸಿದರೆ ರುಚಿ ಹೆಚ್ಚುತ್ತದೆ.

- ಹಿಟ್ಟಿನೊಳಗೆ ಸ್ಠಫಿಂಗ್ ಹಾಕುವ ಬದಲು, ಸ್ಟಫಿಂಗನ್ನು ಸೇರಿಸಿಯೇ ಹಿಟ್ಟನ್ನು ನಾದಿಕೊಳ್ಳಬಹುದು. 

- ಮೀಡಿಯಂ ಉರಿಯಲ್ಲೇ ಬೇಯಿಸಿ. 

click me!