ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಮೂರು ಸಾಮಗ್ರಿ ಬಳಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧಾನ ಹೇಳಿದ್ದಾರೆ, ಕೇಳಿ...
ಸುಂದರ ತ್ವಚೆ ತಮ್ಮದಾಗಿಸಿಕೊಳ್ಳಬೇಕು ಎಂದು ಬಯಸದವರು ಇಲ್ಲವೇ ಇಲ್ಲ ಎನ್ನಬಹುದೇನೋ. ಸೌಂದರ್ಯಕ್ಕೆ ಹಾತೊರೆಯುವವರು ಮಹಿಳೆಯರು ಮಾತ್ರ ಅನ್ನೋದೆಲ್ಲಾ ಸುಳ್ಳೇ ಸುಳ್ಳು. ಇತ್ತೀಚಿನ ದಿನಗಳಲ್ಲಿ ಪುರುಷರಿಗೂ ಸೌಂದರ್ಯದ ಮೇಲೆ ವ್ಯಾಮೋಹ ಜಾಸ್ತಿನೇ ಆಗಿದೆ. ಇದಕ್ಕಾಗಿಯೇ ಪುರುಷರ ಬ್ಯೂಟಿ ಸಲೂನ್ಗಳು ಏರುತ್ತಲೇ ಇರುತ್ತದೆ. ಇನ್ನು ನಟ- ನಟಿಯರ ಬಗ್ಗೆ ಹೇಳುವುದಾದರೆ ಅವರಲ್ಲಿ ಸಹಜ ಸೌಂದರ್ಯದವರು ಅತಿ ಕಡಿಮೆ ಎಂದೇ ಹೇಳಬೇಕು. ಅವರದ್ದೇನಿದ್ದರೂ ಮೇಕಪ್ ಸೌಂದರ್ಯ. ಮುಖದ ಎಲ್ಲಾ ಭಾಗ ಸೇರಿ ದೇಹದ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ವರ್ಧಿಸಿಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಇದರ ಹೊರತಾಗಿಯೂ ಕೆಲವು ನಟಿಯರು ಸಹಜವಾಗಿಯೇ ಸೌಂದರ್ಯ ಹೊಂದಿದ್ದಾರೆ.
ಅಂಥ ಸಹಜ ಸುಂದರಿಯರಲ್ಲಿ ಒಬ್ಬರು ಬಾಲಿವುಡ್ ನಟಿ ತಮನ್ನಾ ಭಾಟಿಯಾ. ಮಿಲ್ಕಿ ಬ್ಯೂಟಿ ಎಂದೇ ಇವರು ಫೇಮಸ್. ಇವರಿಗೆ ವಯಸ್ಸು 34 ಆದರೂ ಇನ್ನೂ 20ರ ಯುವತಿಯರನ್ನೂ ನಾಚಿಸುವ ಸೌಂದರ್ಯ ಇವರದ್ದು. ಇದೀಗ ನಟಿ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅತ್ಯಂತ ಸುಲಭದ ವಿಧಾನದಲ್ಲಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸೌಂದರ್ಯದ ಕುರಿತು ಅವರು ಹೇಳಿದ್ದಾರೆ.
ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ಔಟ್: ನಟಿ ಅದಿತಿ ಅಮ್ಮನ ಟಿಪ್ಸ್
ತಾವು ಯಾವಾದಲೂ ತ್ವಚೆಯನ್ನು ಮೃದುವಾಗಿಡಲು ಮತ್ತು ಮೈಬಣ್ಣವನ್ನು ಹೊಳೆಯುವಂತೆ ಮಾಡಲು ರಾಸಾಯನಿಕ ಬಣ್ಣಗಳ ಬದಲು ನೈಸರ್ಗಿಕ ಉತ್ಪನ್ನಗಳನ್ನೇ ಇಷ್ಟಪಡುತ್ತೇನೆ ಎನ್ನುವ ತಮನ್ನಾ ಮನೆಯಲ್ಲೇ ತಯಾರಿಸುವ ಫೇಸ್ ಮಾಸ್ಕ್ ಬಗ್ಗೆ ಹೇಳಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ, ಅದರಲ್ಲಿ ಹೋಮ್‌ಮೇಡ್ ಫೇಸ್ ಸ್ಕ್ರಬ್ ಸೀಕ್ರೆಟ್ ಬಗ್ಗೆ ಮಾತನಾಡಿದ್ದಾರೆ.
ಅವರೇ ಹೇಳಿರುವಂತೆ ಮೂರೇ ಮೂರು ಸಾಮಗ್ರಿ. ಅದು ಒಂದು ಶ್ರೀಗಂಧದ ಪುಡಿ, ಕಾಪಿ ಪುಡಿ ಮತ್ತು ಜೇನುತುಪ್ಪ. ಒಂದು ಚಮಚ ಶ್ರೀಗಂಧದ ಪುಡಿ ಮತ್ತು ಸ್ವಲ್ಪ ಕಾಫಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ, ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಒಂದು ವೇಳೆ ಒಣ ಚರ್ಮವನ್ನು ಹೊಂದಿದ್ದರೆ, ಜೇನುತುಪ್ಪ ಹೆಚ್ಚು ಸೇರಿಸಿ ಎಂದಿದ್ದಾರೆ. ಚರ್ಮದ ಅಗತ್ಯಗಳನ್ನು ಪೂರೈಸಲು ಈ ಸ್ಕ್ರಬ್ ಜೊತೆ ಬೇರೆ ಪದಾರ್ಥಗಳನ್ನು ಬೇಕಾದರೂ ಸೇರಿಸಿಕೊಳ್ಳಬಹುದು. ಈ ಫೇಸ್ ಸ್ಕ್ರಬ್ ಹಚ್ಚಿಕೊಂಡು 10 ನಿಮಿಷಗಳ ಬಳಿಕ ಮಸಾಜ್ ಮಾಡುತ್ತಾ ಮುಖವನ್ನು ತೊಳೆದುಕೊಳ್ಳಿ ಎಂದು ನಟಿ ಹೇಳಿದ್ದಾರೆ.
ಕಣ್ಣು ಮುಚ್ಚಿಕೊಂಡು ಮೇಕಪ್ ಮಾಡಿಕೊಂಡ ಸೀತಾರಾಮ ಸೀತಾ: ವೈಷ್ಣವಿ ಗೌಡ ಹೊಸ ಲುಕ್ ಹೇಗಿದೆ?