
ಮಧು ಗೌಡ ಎನ್ನುವವರು ಯುಟ್ಯೂಬ್‌ನಲ್ಲಿ ಸುಮ್ಮನೆ ಒಂದು ವ್ಲಾಗ್ ವಿಡಿಯೋ ಅಪ್‌ಲೋಡ್ ಮಾಡಿದರೆ ಸಾಕು, ಒಂದು ಗಂಟೆಯೊಳಗಡೆ ಮಿನಿಮಮ್ 50000 ವೀಕ್ಷಣೆ ಆಗಿರುತ್ತದೆ. ಈಗ ಇವರಿಗೆ ಅಣ್ಣನಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಕರ್ನಾಟಕದಲ್ಲಿ ಅನಂತ್ ಅಂಬಾನಿ ರೀತಿ ಮಧು ಗೌಡ-ನಿಖಿಲ್ ಅವರು ಒಂದು ವಾರಗಳ ಕಾಲ ಮದುವೆ ಆಗಿದ್ದರು. ಮದುವೆಯಾದ ಬಳಿಕ ಮಧುಗೆ ಅಣ್ಣ ಮದನ್ ಗೌಡ ಅವರು ಉಡುಗೊರೆ ನೀಡಿದ್ದಾರೆ. ಮನೆಯಲ್ಲಿ ಹುಟ್ಟಿದ ಹೆಣ್ಣು ಮದುವೆಯಾದರೆ ಸಾಕು ಎಂದು ಆಲೋಚಿಸುವವರಿದ್ದಾರೆ. ತಂಗಿ ಮದುವೆಯನ್ನು ಗ್ರ್ಯಾಂಡ್ ಆಗಿ ಮಾಡಿದ ಬಳಿಕ ಮನೆಯನ್ನು ಉಡುಗೊರೆಯಾಗಿ ನೀಡಿರೋದು ಅಪರೂಪ ಎನ್ನಬಹುದು.
ಮಗಳಿಗೆ ಮನೆ ಉಡುಗೊರೆ ಸಿಕ್ಕಿದೆ!
ಚೆನ್ನಪಟ್ಟಣದಲ್ಲಿರುವ ಮನೆಯನ್ನು ತಂಗಿಗೆ ಮಧುಗೆ ಬರೆದುಕೊಟ್ಟಿದ್ದಾರೆ. ಮದನ್ ಗೌಡ ಅವರು ಚೆನ್ನಪಟ್ಟಣದಲ್ಲಿರುವ ಮನೆಗೆ ಒಂದಷ್ಟು ರಿಪೇರಿ ಮಾಡಿಸಿ, ಬಣ್ಣ ಬಳಿಸಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಈ ಮನೆಗೆ ಪೇಂಟ್ ಮಾಡಿಸಿದ್ದರು. ಮದನ್ ತಂದೆ ಕಟ್ಟಿಸಿದ ಮನೆಯಂತೆ. ಮಧು ಹುಟ್ಟಿದಾಗ ಕಟ್ಟಿದ ಮನೆ ಇದಾಗಿದೆಯಂತೆ. 2000ರಲ್ಲಿ ಕಟ್ಟಿಸಿದ ಮನೆ ಇದು. ತಂದೆಯವರೇ ಮಗಳಿಗೆ ಉಡುಗೊರೆ ಕೊಡಿ ಅಂತ ಹೇಳಿದ್ದರಂತೆ. ಮದನ್ ತಂದೆ ಈಗ ಇಲ್ಲ. ಈಗ ತಂದೆಯ ಆಸೆಯಂತೆ ಮಧು ಗೌಡಗೆ ಮನೆಯನ್ನು ತವರು ಮನೆ ಉಡುಗೊರೆಯಾಗಿ ನೀಡಿದ್ದಾರೆ.
ನಾದಿನಿ ನಿಶಾಳ ಕೊರಳಿಗೆ ಚಿನ್ನದ ನೆಕ್‌ಲೆಸ್ ಹಾಕಿದ ಯೂಟ್ಯೂಬರ್ ಮಧು ಗೌಡ; ಫೋಟೋ ವೈರಲ್
ಮನೆ ಬೇಡ ಎಂದ ಮಧು ಗೌಡ!
“ನನಗೆ ಮನೆ ಬೇಡ, ನೀವು ಚೆನ್ನಾಗಿರಿ” ಎಂದು ಮಧು ಈ ಮನೆಯನ್ನು ತಿರಸ್ಕಾರ ಮಾಡಿದ್ದಾರೆ. ಆದರೂ ಕೂಡ ಮದನ್ ಅವರು ಮಧುಗೆ ಒತ್ತಾಯ ಮಾಡಿ, “ತಂದೆ ಕಟ್ಟಿದ ಮನೆ ಅದು. ನಿನಗೆ ನೆನಪಾಗಿ ಇರಲಿ” ಎಂದು ಹೇಳಿದ್ದಾರಂತೆ.
ಫಲಿಸಿತು ಆರು ತಿಂಗಳ ಹೋರಾಟ; Mahindra Thar Roxx ಖರೀದಿಸಿದ ಯುಟ್ಯೂಬರ್ ಮಧು ಗೌಡ, ನಿಖಿಲ್
ಹದಿನಾಲ್ಕು ಮನೆಗಳ ಒಡೆಯ ಮದನ್!
ಮಧು ಗೌಡಗೆ ಈಗ ಇಪ್ಪತ್ನಾಲ್ಕು ವರ್ಷ. ಮಧು ಗೌಡ ಹಾಗೂ ನಿಶಾ ರವೀಂದ್ರ ಎನ್ನುವವರು ಸ್ನೇಹಿತರಾಗಿದ್ದರು. ನಿಶಾ ರವೀಂದ್ರ ಅಣ್ಣ ನಿಖಿಲ್, ಮಧು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಮಧು ಗೌಡ ಅವರು ಬಹಳ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು. ಮಧು ಗೌಡ ಮದುವೆಯಲ್ಲಿ ಪೂರ್ತಿ ಬಂಗಾರದ ಆಭರಣಗಳನ್ನೇ ಧರಿಸಿ ಸೌಂಡ್ ಮಾಡಿದ್ದರು. ಮಧು ಗೌಡ ಅವರ ತವರು ಮನೆಯಲ್ಲಿ ಹದಿನಾಲ್ಕು ಮನೆಗಳನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ನೀಡಲಾಗಿದೆಯಂತೆ.
ಈ ಮನೆಯಲ್ಲಿ ವಾಟರ್ ಟ್ಯಾಂಕ್, ಸೋಲಾರ್ ಸೇರಿ ಸಾಕಷ್ಟು ವ್ಯವಸ್ಥೆಗಳು ಇವೆ. ಈ ಮನೆಯಲ್ಲಿ ಗೇಟ್ ಸೇರಿ ಕೆಲ ರಿಪೇರಿ ಕೆಲಸಗಳು ಇದ್ದವು. ಅವೆಲ್ಲವುಗಳನ್ನು ಮದನ್ ಸರಿ ಮಾಡಿಸಿದ್ದಾರಂತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.