ಬದುಕೋಕೆ ಎಷ್ಟು ಹೋರಾಡ್ಬೇಕು ನೋಡಿ: 30ಕ್ಕೂ ಹೆಚ್ಚು ಹಿಪ್ಪೋಗಳೊಂದಿಗೆ ಒಂಟಿ ಮೊಸಳೆ ಫೈಟ್‌!

By BK Ashwin  |  First Published Aug 12, 2023, 2:29 PM IST

ಒಂಟಿ ಮೊಸಳೆಯು 30 ಕ್ಕೂ ಹೆಚ್ಚು ಕೋಪಗೊಂಡ ಹಿಪ್ಪೋಗಳೊಂದಿಗೆ ಹೋರಾಡುವುದನ್ನು ತೋರಿಸುತ್ತದೆ ಮತ್ತು ಅಂತಿಮವಾಗಿ ಮೊಸಳೆ ಹೇಗೆ ತಪ್ಪಿಸಿಕೊಳ್ಳುತ್ತದೆ ಎಂದು ಈ ವಿಡಿಯೋ ಕ್ಲಿಪ್ ತೋರಿಸುತ್ತದೆ.


ನವದೆಹಲಿ (ಆಗಸ್ಟ್  12, 2023): ಬದುಕೋಕೆ ಜೀವನಪರ್ಯಂತ ಹೋರಾಡ್ತಾನೇ ಇರ್ಬೇಕು. ಮನುಷ್ಯ ಮಾತ್ರ ಅಲ್ಲ, ಪ್ರಾಣಿ - ಪಕ್ಷಿಗಳೂ ಕೂಡ ಬದುಕು ಹಾಗೂ ಸಾವಿನ ಯುದ್ಧದಲ್ಲಿ ಹೋರಾಡಬೇಕು. ಇನ್ನು, ಕಾಡು ಪ್ರಾಣಿಗಳ ನಡುವಿನ ಮುಖಾಮುಖಿಗಳನ್ನು ವೀಕ್ಷಿಸೋದು ಕೆಲವು ಆಕರ್ಷಕ, ಕ್ಯೂಟ್‌ ಆಗಿದ್ರೆ, ಇನ್ನು ಕೆಲವು ಭಯಾನಕವಾಗಿರುತ್ತದೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಭಯಾನಕವಾಗಿರುವ ಒಂದು ಉದಾಹರಣೆಯಾಗಿದೆ.

ಒಂಟಿ ಮೊಸಳೆಯು 30 ಕ್ಕೂ ಹೆಚ್ಚು ಕೋಪಗೊಂಡ ಹಿಪ್ಪೋಗಳೊಂದಿಗೆ ಹೋರಾಡುವುದನ್ನು ತೋರಿಸುತ್ತದೆ ಮತ್ತು ಅಂತಿಮವಾಗಿ ಮೊಸಳೆ ಹೇಗೆ ತಪ್ಪಿಸಿಕೊಳ್ಳುತ್ತದೆ ಎಂದು ಈ ವಿಡಿಯೋ ಕ್ಲಿಪ್ ತೋರಿಸುತ್ತದೆ. "30+ ಹಿಪ್ಪೋಗಳು ಒಂದು ಮೊಸಳೆಯ ಮೇಲೆ ದಾಳಿ ಮಾಡುತ್ತವೆ" ಎಂಬ ಶೀರ್ಷಿಕೆಯೊಂದಿಗೆ ಕೆಲವು ವರ್ಷಗಳ ಹಿಂದೆ Latest Sightings ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‌ ಮಾಡಲಾಗಿತ್ತು. ಈ ದೃಶ್ಯವನ್ನು ಸೆರೆ ಹಿಡಿದಿರುವ ಹರೀಶ್ ಕುಮಾರ್ ತಮ್ಮ ಮಾತುಗಳಲ್ಲಿ ಘಟನೆಯನ್ನು ವಿವರಿಸಿರುವ ಶೀರ್ಷಿಕೆಯನ್ನೂ ಚಾನೆಲ್ ಹಂಚಿಕೊಂಡಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

Tap to resize

Latest Videos

ಇದನ್ನು ಓದಿ: Zomato ಮೂಲಕ 60 ರೂ. ಮೌಲ್ಯದ ಫುಡ್‌ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್‌ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್‌ ವೈರಲ್‌

"ನಾವೆಲ್ಲರೂ ಎಲ್ಲೆಡೆ ಸುತ್ತಾಡುತ್ತಿದ್ದೆವು, ಇದ್ದಕ್ಕಿದ್ದಂತೆ ನನ್ನ ಹೆಂಡತಿ ಕೊಳದಲ್ಲಿ ಏನೋ ನಡೆಯುತ್ತಿದೆ ಎಂದು ನನಗೆ ಹೇಳಲು ಕರೆದಳು. ನಾನು ಅಲ್ಲಿಗೆ ಹೋಗಲು ಓಡಿದೆ ಮತ್ತು ತಕ್ಷಣವೇ ವಿಡಿಯೋ  ಚಿತ್ರೀಕರಣವನ್ನು ಪ್ರಾರಂಭಿಸಿದೆ - ಟ್ರೈಪಾಡ್ ಅನ್ನು ಹೊಂದಿಸಲು ಸಮಯವೂ ಇರಲಿಲ್ಲ. ಚಿತ್ರೀಕರಣಕ್ಕೆ ಸರಿಯಾದ ಸ್ಥಳದಲ್ಲಿ ನನ್ನ ಕ್ಯಾಮೆರಾದೊಂದಿಗೆ ನಿಲ್ಲಲು ಸಾಧ್ಯವಾದ ಕಾರಣ ಅದೃಷ್ಟವು ಸಂಪೂರ್ಣವಾಗಿ ನನ್ನ ಕಡೆಗಿತ್ತು" ಎಂದು ಹರೀಶ್‌ ಕುಮಾರ್‌ Latest Sightingsಗೆ ಹೇಳಿದರು. 

ಇದು "ನಂಬಲಾಗದ ದೃಶ್ಯ" ಎಂದು ಅವರು ಹೇಳಿದ್ದು ಮತ್ತು ಮೊಸಳೆ ಅಂತಿಮವಾಗಿ "ಹಿಪ್ಪೋಗಳಿಂದ ಎಸೆಯಲ್ಪಟ್ಟ ಮತ್ತು ಕಚ್ಚಿಸಿಕೊಂಡ" ನಂತರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. "ಮೊಸಳೆ ಮೇಲೆ ಹಿಪ್ಪೋ ದಾಳಿ" ಎಂದು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋದೊಂದಿಗೆ ಪೋಸ್ಟ್ ಮಾಡಲಾದ ಇತ್ತೀಚಿನ ಶೀರ್ಷಿಕೆ ಹೇಳುತ್ತದೆ. ಹಿಪ್ಪೋಗಳ ಗುಂಪಿನ ನಡುವೆ ಮೊಸಳೆ ಸಿಲುಕಿಕೊಂಡಿರುವುದನ್ನು ಕ್ಲಿಪ್ ತೋರಿಸುತ್ತದೆ, ಅದನ್ನು ಹಿಡಿಯಲು ಹಿಪ್ಪೋಗಳು ಪ್ರಯತ್ನಿಸುತ್ತಿದೆ.
ಹಿಪ್ಪೋಗಳ ನಡುವೆ ಸಿಲುಕಿರುವ ಮೊಸಳೆಯ ಈ ವಿಡಿಯೋವನ್ನು ಇಲ್ಲಿ ನೋಡಿ:

ಇದನ್ನೂ ಓದಿ: ಕಾರ್ಪೊರೇಟ್‌ ಲೈಫ್‌ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್‌ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ!

ಈ ವಿಡಿಯೋ 2.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ., ಇದು ಸುಮಾರು 7,300 ಲೈಕ್ಸ್‌ ಗಳಿಸಿದೆ ಹಾಗೂ ವಿಡಿಯೋಗೆ ಪ್ರತಿಕ್ರಿಯಿಸುವಾಗ ಜನರು ವಿಭಿನ್ನ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಮೊಸಳೆಯ ಈ ವೈರಲ್ ವಿಡಿಯೋ ಕುರಿತು ಜನರು ಏನು ಹೇಳುತ್ತಾರೆಂದು ಇಲ್ಲಿದೆ ನೋಡಿ..

"ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳ" ಎಂದು Instagram ಬಳಕೆದಾರರು ಬರೆದಿದ್ದಾರೆ. "ನಿಮಗಿಂತ ದೊಡ್ಡವರು ಮತ್ತು ಕೆಟ್ಟವರು ಯಾವಾಗಲೂ ಇರುತ್ತಾರೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಮೊಸಳೆಯು ಹಿಪ್ಪೋಗಳ ಗುಂಪಿನೊಂದಿಗೆ ಹೋರಾಡುವ ಈ ವಿಡಿಯೋ ಬಗ್ಗೆ ನೀವು ಏನ್‌ ಹೇಳ್ತೀರಾ..? ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ ಮಾಡಿ..

ಇದನ್ನೂ ಓದಿ: ಸ್ಯಾಂಡ್‌ವಿಚ್‌ ಅರ್ಧ ಕಟ್‌ ಮಾಡಿ ಎಂದಿದ್ದಕ್ಕೆ 182 ರೂ. ಚಾರ್ಜ್‌ ಮಾಡಿದ ಕೆಫೆ: ಇಂಟರ್‌ನೆಟ್‌ನಲ್ಲಿ ವೈರಲ್‌

click me!