ವಿಮಾನದಲ್ಲಿ 1500 ರೂ. ಮೌಲ್ಯದ ಕಡಲೆಕಾಯಿ ಖರೀದಿಸಿದ ಮಹಿಳೆ!

By Suvarna News  |  First Published Aug 12, 2023, 1:07 PM IST

ಜನರ ವರ್ತನೆ ಭಿನ್ನವಾಗಿರುತ್ತದೆ. ವಿಮಾನದಲ್ಲಿ ಚಿತ್ರವಿಚಿತ್ರವಾಗಿ ನಡೆದುಕೊಳ್ತಾರೆ. ಈಗ ಮಹಿಳೆಯೊಬ್ಬಳು ಮಾಡಿದ ಕೆಲಸ ಸುದ್ದಿಯಲ್ಲಿದೆ. ವಿಮಾನದಲ್ಲಿದ್ದ ಎಲ್ಲ ಶೇಂಗಾ ಪ್ಯಾಕೆಟ್ ಖರೀದಿ ಮಾಡಿದ ಮಹಿಳೆ ಹಿಂದಿದ್ದ ಉದ್ದೇಶ ಅಚ್ಚರಿ ಮೂಡಿಸುತ್ತದೆ. 
 


ಜನರು ತಮ್ಮ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಗಮನ ನೀಡುವ ಕಾರಣ ಸಾರ್ವಜನಿಕ ಸ್ಥಳದಲ್ಲಿ ಕೆಲವೊಮ್ಮೆ ಅಚ್ಚರಿಯಾಗುವ ಕೆಲಸ ಮಾಡ್ತಾರೆ. ಜರ್ಮನಿಯಿಂದ ಲಂಡನ್ ಗೆ ಹೋಗ್ತಿದ್ದ ವಿಮಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ವಿಮಾನದಲ್ಲಿದ್ದ ಎಲ್ಲ ಕಡಲೆಕಾಯಿ ಪ್ಯಾಕೆಟ್ ಖರೀದಿ ಮಾಡಿದ್ದಾಳೆ. ಇದಕ್ಕಾಗಿ ಆಕೆ 15000 ರೂಪಾಯಿ ಖರ್ಚು ಮಾಡಿದ್ದಾಳೆ. ಆಕೆ ಇಷ್ಟೊಂದು ಹಣ ನೀಡಿ ಎಲ್ಲ ಕಡಲೆಕಾಯಿ ಪ್ಯಾಕೆಟ್ ಖರೀದಿ ಮಾಡಲೂ ಒಂದು ಕಾರಣವಿದೆ.

ಜರ್ಮನಿ (Germany) ಯಿಂದ ಲಂಡನ್ (London) ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದ 27 ವರ್ಷದ ವಿಲಿಯಮ್ಸ್ ಈ ಕೆಲಸ ಮಾಡಿದ್ದಾಳೆ. ವಿಮಾನದಲ್ಲಿರುವ ಯಾರೂ ಕಡಲೆಕಾಯಿ ಖರೀದಿ ಮಾಡದಿರಲಿ ಎನ್ನುವ ಉದ್ದೇಶದಿಂದ ವಿಲಿಯಮ್ಸ್ ಈ ಕೆಲಸ ಮಾಡಿದ್ದಾಳೆ. ವಿಮಾನ (Plane) ದಲ್ಲಿದ್ದ ಸುಮಾರು 48 ಪ್ಯಾಕೆಟ್ ಕಡಲೆಕಾಯಿಯನ್ನು ಖರೀದಿ ಮಾಡಿದ ವಿಲಿಯಮ್ಸ್ 185 ಡಾಲರ್ ಅಂದ್ರೆ 15 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ಇದನ್ನು ವಿಲಿಯನ್ಸ್ ತಿನ್ನಲು ತೆಗೆದುಕೊಂಡಿದ್ದಾಳೆ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಆಕೆ ವಿಮಾನದಲ್ಲಿರುವ ಯಾರೂ ಇದನ್ನು ಖರೀದಿ ಮಾಡ್ಬಾರದು ಎಂದು ತಾನೇ ಎಲ್ಲ ಪ್ಯಾಕೆಟ್ ಖರೀದಿ ಮಾಡಿದ್ದಾಳೆ.

Latest Videos

undefined

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗೋದಕ್ಕೆ ಇದುವೇ ಕಾರಣ!

ವಿಲಿಯಮ್ಸ್ ಗಿದೆ ಈ ಖಾಯಿಲೆ : ಅನಾಫಿಲ್ಯಾಕ್ಟಿಕ್ ತೊಂದರೆಯಿದೆ. ಇದೊಂದು ರೀತಿಯ ಅಲರ್ಜಿಯಾಗಿದೆ. ಇದ್ರಿಂದ ಸಾವು ಸಂಭವಿಸುವ ಸಾಧ್ಯತೆಯಿದೆ. ಅಕ್ಕಪಕ್ಕದಲ್ಲಿ ಯಾರೇ ಕಡಲೆಕಾಯಿ ಪ್ಯಾಕೆಟ್ ತೆರೆದ್ರೂ ಅದು ವಿಲಿಯಮ್ಸ್ ಆರೋಗ್ಯವನ್ನು ಹದಗೆಡಿಸುತ್ತದೆ.     

ವಿಮಾನ ಸಿಬ್ಬಂದಿ (Flight Crew) ಒಪ್ಪಿಗೆ ನೀಡದ್ದಕ್ಕೆ ಈ ಕ್ರಮ : ವಿಲಿಯಮ್ಸ್ ಪ್ರತಿ ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸುವ ಮೊದಲು ವಿಮಾನ ಸಿಬ್ಬಂದಿಗೆ ಮನವಿ ಮಾಡ್ತಾಳೆ. ತನ್ನ ಸಮಸ್ಯೆ ಏನು ಎಂಬುದನ್ನು ಹೇಳ್ತಾಳೆ. ಸಿಬ್ಬಂದಿ, ವಿಮಾನದಲ್ಲಿರುವ ಪ್ರಯಾಣಿಕರಿಗೆ ಕಡಲೆಕಾಯಿ ತಿನ್ನದಂತೆ ಮೈಕ್ ನಲ್ಲಿ ಮನವಿ ಮಾಡ್ತಾರೆ. ಈ ಬಾರಿಯೂ ವಿಲಿಯಮ್ಸ್, ವಿಮಾನ ಸಿಬ್ಬಂದಿಗೆ ಮನವಿ ಮಾಡಿದ್ದಾಳೆ. ಆದ್ರೆ ಅವರು ಒಪ್ಪಲಿಲ್ಲವಂತೆ. ಇದು ವಿಮಾನ ಕಂಪನಿ ರೂಲ್ಸ್ ಗೆ ವಿರುದ್ದ ಎಂದಿದ್ದಾರಂತೆ. ವಿಲಿಯಮ್ಸ್ ತನ್ನ ಖಾಯಿಲೆ ಬಗ್ಗೆಯೂ ಹೇಳಿದ್ದಾಳೆ. ಆದ್ರೂ ಸಿಬ್ಬಂದಿ ಇದನ್ನು ಒಪ್ಪಿಲ್ಲ. ತನ್ನ ರಕ್ಷಣೆಗೆ ವಿಲಿಯಮ್ಸ್ ತಾನೇ ಸಿದ್ದವಾಗಿದ್ದಾಳೆ. ವಿಮಾನದಲ್ಲಿದ್ದ ಎಲ್ಲ ಕಡಲೆಕಾಯಿ ಪ್ಯಾಕೆಟ್ ಖರೀದಿ ಮಾಡಲು ನಿರ್ಧರಿಸಿದ್ದಾಳೆ. 1500 ರೂಪಾಯಿ ಕೊಟ್ಟು ಕಡಲೆಕಾಯಿ ಖರೀದಿ ಮಾಡಿದ ವಿಲಿಯಮ್ಸ್ ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ ವಿನಃ ಅದನ್ನು ತಿಂದಿಲ್ಲ. 

ಆರೋಗ್ಯಕ್ಕೆ ಯಾವುದು ಒಳ್ಳೇದಲ್ಲವೋ, ಅದ್ರಿಂದಾನೇ ಮಾಡ್ತಾರೆ ಮೊಮೋಸ್, ತಿನ್ನೋ ಮುನ್ನ ಎಚ್ಚರ!

ಅನಾಫಿಲ್ಯಾಕ್ಸಿಸ್ ಖಾಯಿಲೆ ಅಂದ್ರೇನು? : ಇದು ಒಂದು ರೀತಿ ಅಲರ್ಜಿ. ಈ ಸಂದರ್ಭದಲ್ಲಿ ದೇಹದಿಂದ ಬಿಡುಗಡೆಯಾಗುವ ವಸ್ತುವಾದ ಹಿಸ್ಟಮೈನ್, ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗುತ್ತದೆ, ಇದರ ಪರಿಣಾಮವಾಗಿ ರಕ್ತದೊತ್ತಡದಲ್ಲಿ ಅಪಾಯಕಾರಿ ಇಳಿಕೆ ಕಂಡುಬರುತ್ತದೆ. ದ್ರವವು ಶ್ವಾಸಕೋಶಕ್ಕೆ ಸೋರಿಕೆಯಾಗಬಹುದು, ಊತ ಉಂಟಾಗಬಹುದು. ಅನಾಫಿಲ್ಯಾಕ್ಸಿಸ್  ಹೃದಯದ ಸಮಸ್ಯೆಗೂ ಕಾರಣವಾಗಬಹುದು. ಅನಾಫಿಲ್ಯಾಕ್ಸಿಸ್ ಚಿಕಿತ್ಸೆಗೆ ಡಿಫೆನ್ಹೈಡ್ರಾಮೈನ್  ನಂತಹ ಆಂಟಿಹಿಸ್ಟಮೈನ್ ಮಾತ್ರೆ ಸಾಕಾಗುವುದಿಲ್ಲ. ಈ ಔಷಧಿಗಳು ಅಲರ್ಜಿಯ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ತೀವ್ರ ಪ್ರತಿಕ್ರಿಯೆಯಲ್ಲಿ ಅವು ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತವೆ.   

ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಶೇಂಗಾ ಸೇವನೆ ಮಾಡೋದಿಲ್ಲ. ಇದು ಸಾವು ತರುತ್ತೆ ಎಂದು ಜನರು ನಂಬುತ್ತಾರೆ. ಶಾಲೆಗಳಲ್ಲಿ ಕೂಡ ಮಕ್ಕಳ ಬಾಕ್ಸ್ ಗೆ ಕಡಲೆಕಾಯಿ ಕಳುಹಿಸದಂತೆ ಸೂಚನೆ ನೀಡಲಾಗಿರುತ್ತದೆ. ಕಡಲೆಕಾಯಿ ಹೆಚ್ಚಿನ ಅಲರ್ಜಿಯ ಪ್ರತಿಕ್ರಿಯೆಯುಂಟು ಮಾಡುತ್ತದೆ. ಕಡಲೆಕಾಯಿ ಅಲರ್ಜಿಯು ಮಕ್ಕಳಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಆಹಾರ ಅಲರ್ಜಿಯಾಗಿದೆ.  ಇದು 50 ಮಕ್ಕಳಲ್ಲಿ ಒಬ್ಬರಿಗೆ ಕಂಡುಬರುತ್ತದೆ. 200 ವಯಸ್ಕರಲ್ಲಿ ಒಬ್ಬರಿಗೆ ಕಾಣಿಸುತ್ತದೆ. 

click me!