ಪುಟ್ಟ ಬಾಲಕನೋರ್ವ ತನ್ನ ಅಪ್ಪ ಅಮ್ಮ ಕೂತು ಚಲಿಸುತ್ತಿರುವ ಸೈಕಲೊಂದನ್ನು ಹಿಂದಿನಿಂದ ದುಡಿಕೊಂಡು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಮಕ್ಕಳ ಏಳ್ಗೆಗಾಗಿ ಪೋಷಕರು ತಮ್ಮ ಇಡೀ ಬದುಕನ್ನೇ ಸವೆಸುತ್ತಾರೆ. ಮಕ್ಕಳ ಕನಸನ್ನು ಆಸೆಯನ್ನು ಈಡೇರಿಸುವ ಸಲುವಾಗಿ ರಕ್ತ ಬೆವರು ಜೊತೆಯಾಗಿಸಿ ದುಡಿಯುತ್ತಾರೆ. ಆದರೆ ಹೀಗೆ ಶ್ರಮವಹಿಸಿ ಬದುಕನ್ನೇ ಮಕ್ಕಳ ಏಳ್ಗೆಗಾಗಿ ತ್ಯಾಗ ಮಾಡುವ ಪೋಷಕರಿಗೆ ತಮ್ಮ ಇಳಿವಯಸ್ಸಿನಲ್ಲಿ ಅದೇ ರೀತಿಯ ಪ್ರೀತಿ ವಿಶ್ವಾಸ, ಆರೈಕೆ ಕಾಳಜಿ ಸಿಗುವುದು ತೀರಾ ಅಪರೂಪ. ಇತ್ತೀಚೆಗಂತೂ ಕೆಲವೇ ಕೆಲವು ಮಕ್ಕಳು ಪೋಷಕರನ್ನು ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಹೀಗಿರುವಾಗ ಪುಟ್ಟ ಬಾಲಕನೋರ್ವ ತನ್ನ ಅಪ್ಪ ಅಮ್ಮ ಕೂತು ಚಲಿಸುತ್ತಿರುವ ಸೈಕಲೊಂದನ್ನು ಹಿಂದಿನಿಂದ ದುಡಿಕೊಂಡು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ದಂಪತಿ ಸೈಕಲ್‌ನಲ್ಲಿ ಕುಳಿತು ಸಂಚರಿಸುತ್ತಿದ್ದಾರೆ. ಅಪ್ಪ ಸೈಕಲ್ ತುಳಿಯುತ್ತಿದ್ದರೆ, ಅಮ್ಮ ಸೈಕಲ್ ಹಿಂಬದಿ ಕುಳಿತಿದ್ದಾರೆ. ದಾರಿ ಮಧ್ಯೆ ಫ್ಲೈಓವರ್ ಬಂದಿದ್ದು, ಇಳಿಜಾರಿನಂತಿರುವ ಫ್ಲೈಓವರ್‌ನಲ್ಲಿ ಅಮ್ಮನನ್ನು ಕೂರಿಸಿಕೊಂಡು ಅಪ್ಪನಿಗೆ ಸೈಕಲ್ ತುಳಿದು ಮೇಲೇರಲು ಕಷ್ಟವಾಗಿದ್ದು ಪುಟ್ಟ ಬಾಲಕ ಅಪ್ಪ ಅಮ್ಮ ಕುಳಿತಿರುವ ಸೈಕಲ್ ಅನ್ನು ಹಿಂಬದಿಯಿಂದ ತಳ್ಳಿ ಅಪ್ಪನಿಗೆ ಸಹಾಯ ಮಾಡುತ್ತಾನೆ. ಈ ಕುಟುಂಬದ ಹಿಂಬದಿ ಪ್ರಯಾಣಿಸುವ ವಾಹನ ಸವಾರರು ಬಹುಶಃ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೋ ಶೇರ್ ಮಾಡಿರುವ ಅವನೀಶ್ ಶರ್ಮಾ (Awanish Sharma) , ಜೀವನುದ್ದಕ್ಕೂ ಈ ರೀತಿ ಪೋಷಕರಿಗೆ ಬೆಂಬಲವಾಗಿರು ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದ ಅನೇಕರು ಪೋಷಕರ ಮೇಲಿನ ಬಾಲಕನ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸೈಕಲ್‌ನಲ್ಲಿ ಓಡಾಡುತ್ತಿದ್ದರು ದಂಪತಿ ಬಹಳ ಖುಷಿಯಾಗಿದ್ದು, ಈ ಖುಷಿ ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ಮನೆಯಲ್ಲೂ ಕೂಡ ಮಕ್ಕಳು ಮುಂದಿನ ಪೋಷಕರ ಪಾಲಿಗೆ ಆಧಾರಸ್ತಂಭವಾಗಿರುತ್ತಾರೆ. ಅದರಲ್ಲೂ ಇತ್ತೀಚಿನ ತಲೆಮಾರಿನ ಮಕ್ಕಳು ತುಂಬಾ ಸ್ಮಾರ್ಟ್ ಆಗಿದ್ದು, ಕೆಲವು ಮಕ್ಕಳ ಮಾತು ಕೇಳಿದರೆ ನಿಮಗೆ ಅಚ್ಚರಿ ಆಗದೇ ಇರದು. ದೊಡ್ಡವರಂತೆ ಮಾತನಾಡುವ ಮಕ್ಕಳು ದೊಡ್ಡವರಂತೆ ಇಂದು ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ. ಕೆಲವು ಮಹಾನಗರಗಳಲ್ಲಿ (Metro cities)ಮಕ್ಕಳು ಶಿಕ್ಷಣದ ಜೊತೆ ಜೊತೆಗೆ ದುಡಿಮೆ ಮಾಡುತ್ತಾ ಕುಟುಂಬವನ್ನು ಸಲಹುವ ಕಾರ್ಯವನ್ನು ಮಾಡುತ್ತಾರೆ. ಅದೇ ರೀತಿ ಈ ಬಾಲಕ ಪೋಷಕರ ಸೇವೆ ಮಾಡುತ್ತಿದ್ದಾನೆ.
ಪುರಂದರದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಹಾಡಿಗೆ ಮನಸೋತ ಜರ್ಮನ್ ಬಾಲೆ: ವಿಡಿಯೋ ವೈರಲ್
ತಮ್ಮ ಯಶಸ್ಸಿಗಾಗಿ ಎಲ್ಲವನ್ನು ಮಾಡುವ ಪೋಷಕರನ್ನು (Parents) ಅವರ ಇಳಿವಯಸ್ಸಿನಲ್ಲಿ ಕಾಳಜಿಯಿಂದ ನೋಡಬೇಕಾದುದ್ದು ಮಕ್ಕಳ ಕರ್ತವ್ಯವಾಗಿದೆ. ಆದರೆ ಇಂದು ಶಿಕ್ಷಣ ಕಲಿತ ಉದ್ಯೋಗದ ದಾರಿ ಹಿಡಿದ ಮಕ್ಕಳು ಪಟ್ಟಣಗಳಲ್ಲಿ ನೆಲೆಸಿದ್ದರೆ ಇತ್ತ ಹಳ್ಳಿಗಳಲ್ಲಿ ಪೋಷಕರು ಮಾತ್ರ ನೆಲೆಯೂರಿದ್ದಾರೆ. ಹೀಗಿರುವಾಗ ಎಳೆಯ ಪ್ರಾಯದಲ್ಲೇ ಪೋಷಕರ ಬಗ್ಗೆ ಕಾಳಜಿ ಪ್ರೀತಿ ತೋರಿಸುತ್ತಿರುವ ಈ ಬಾಲಕನ (Boy) ಪಡೆದ ಈ ದಂಪತಿ ನಿಜಕ್ಕೂ ಧನ್ಯ. ಇಂತಹ ಮಕ್ಕಳಿಂದಲೇ ಮನೆಯಲ್ಲಿ ಬಡತನವಿದ್ದರೂ ನೆಮ್ಮದಿ ನೆಲೆಸಿರುತ್ತದೆ.
ऐसे ही जीवन भर माता पिता का सहारा बनना.❤️ pic.twitter.com/aIVZkpA3so
— Awanish Sharan (@AwanishSharan)ಟೈಟಾನಿಕ್ ಹಡಗು ಮುಳುಗಿದ ದಿನ ಪ್ರಯಾಣಿಕರು ತಿಂದಿದ್ದೇನು? 111 ವರ್ಷ ಹಳೆಯ ಮೆನು ವೈರಲ್