ನಿಮ್ಮನೇಲಿ ಇವತ್ತೂ ಉಪ್ಪಿಟ್ಟಾ, ತಿನ್ನೊ ಮುನ್ನ ಈ ಸುದ್ದಿ ಓದಿ ಬಿಡಿ !

Published : Jun 01, 2022, 09:38 AM ISTUpdated : Jun 01, 2022, 12:25 PM IST
ನಿಮ್ಮನೇಲಿ ಇವತ್ತೂ ಉಪ್ಪಿಟ್ಟಾ, ತಿನ್ನೊ ಮುನ್ನ ಈ ಸುದ್ದಿ ಓದಿ ಬಿಡಿ !

ಸಾರಾಂಶ

ದಿನವಿಡೀ ಕೆಲಸ (Work) ಮಾಡಬೇಕೆಂದರೆ ಹೊಟ್ಟೆಗೆ ಸರಿಯಾಗಿ ಆಹಾರ(Food) ಬೇಕು. ಸರಿಯಾಗಿ ತಿಂದರೆ ಕೆಲಸ ಮಾಡಲು ಶಕ್ತಿ (Energy) ಬರುತ್ತೆ. ಅಂದ್ರೆ ದೇಹಕ್ಕೆ(Body) ಬೇಕಾಗುವ ಸರಿಯಾದ ಆಹಾರ. ಪ್ರೋಟೀನ್ (Protein), ನ್ಯೂಟ್ರೀನ್ (Nutrient) ಎಲ್ಲವೂ ಸಿಗುತ್ತೆ. ಕೆಲ ಸಂದರ್ಭದಲ್ಲಿ ಲೈಟ್ ಫುಡ್‌ಗಳು (Light Food) ದೇಹಕ್ಕೆ ಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಪ್ರತೀ ಬಾರಿಯೂ ಅದನ್ನೇ ಸೇವಿಸಬಾರದು. ಹಾಗಾದರೆ ಯಾವ ರೀತಿಯ ಆಹಾರ ಸೇವಿಸಬೇಕು, ಯಾವುದನ್ನು ಅವಾಯ್ಡಿ(Avoid) ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

ಬೆಳಗ್ಗೆ ಆಫೀಸ್‌ಗೆ (Office) ಲೇಟ್ ಆಯ್ತು ಅದಕ್ಕೆ ಅವಲಕ್ಕಿ (Poha) ಮಾಡ್ತೀನಿ. ಮಕ್ಕಳಿಗೆ ಸ್ಕೂಲ್ಗೆ(School) ಲೇಟ್ ಆಯ್ತು ಹಾಗಾಗಿ ಉಪ್ಪಿಟ್ (Upma) ಮಾಡ್ತೀನಿ. ಈ ರೀತಿಯಾಗಿ ಮಾಡುವುದು ಒಳ್ಳೆಯದಲ್ಲ. ನಮಗೆ ಟೈಂ (Time) ಇಲ್ಲವೆಂದೊ ಮತ್ತಿನ್ಯಾವುದೋ ಕಾರಣಕ್ಕೆ ಈಸಿ (Easy) ಆಗಿರುವ ತಿಂಡಿಯನ್ನು ಮಾಡಿ ಮುಗಿಸಿದರಾಯ್ತು ಎಂದುಕೊಳ್ಳುವುದು ತಪ್ಪು. ಪ್ರತೀ ದಿನ ಈ ರೀತಿಯ ತಿಂಡಿಗಳನ್ನು ಮಾಡುವವರು ಇದ್ದಾರೆ. ಹೀಗೆ  ಹಗುರ ಇರುವ ತಿಂಡಿಗಳನ್ನು ಸೇವಿಸುವುದು ಒಳ್ಳೆಯದಲ್ಲ.

ಉಪ್ಪಿಟ್ಟು (Upma), ಅವಲಕ್ಕಿ (Poha), ಮುರ್‌ಮುರಾ (Murmura), ಗಂಜಿ (Porridge) ತಿಂಡಿಗಳು ಆಗಾಗ್ಗೆ ಕೇಳುತ್ತಿರುತ್ತೇವೆ. ಈ ರೀತಿಯ ತಿಂಡಿಗಳು ಅಪರೂಪಕ್ಕೆ ಒಳ್ಳೆಯದೇ ಹೊರತು ವಾರದಲ್ಲಿ ಎರಡ್ಮೂರು ದಿನ ಇದನ್ನೇ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆರೋಗ್ಯಕರ ಆಹಾರ ಸೇವನೆ ಬೆಳಗಿನ ಬ್ರೇಕ್‌ಫಾಸ್ಟ್ಗೆ(Breakfasts) ಒಳ್ಳೆಯದು. ಲೈಟ್ ಫುಡ್ ತಿಂದರೆ ತೂಕ ಕಡಿಮೆ(Weight Loss) ಮಾಡುತ್ತದೆ ಎಂದು ಹಲವರು ಭ್ರಮೆಯಲ್ಲಿದ್ದಾರೆ. ಆದರೆ ಲೈಟ್‌ಫುಡ್‌ನಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ಅರಿವಿರುವುದಿಲ್ಲ. ಕೆಲಸ ಆರಂಭಿಸಲು ಬೆಳಗಿನ ಬ್ರೇಕ್‌ಫಾಸ್ಟ್ ಒಳ್ಳೆಯ ನ್ಯೂಟ್ರೀಷನ್‌ನಿಂದ(Nutrition) ಕೂಡಿರಬೇಕು. ಅಂದರೆ ರೊಟ್ಟಿ (Roti), ದಾಲ್ (Daal), ಸಬ್ಜಿ Sabji) ಹೀಗೆ. ಇದರಿಂದ ಹೊಟ್ಟೆ ತುಂಬಿರುವ ಜೊತೆಗೆ ದೇಹಕ್ಕೆ ಎನರ್ಜಿ ತುಂಬುತ್ತದೆ. ಹೊಟ್ಟೆ ತುಂಬಿದ್ದರೆ ಚೈತನ್ಯಭರಿತರಾಗಿ ಕೆಲಸ ಮಾಡಲು ಸಾಧ್ಯ. ಅದೇ ಗಂಜಿ, ಅವಲಕ್ಕಿ, ಉಪ್ಪಿಟ್ಟಿನಂತಹ ಬ್ರೇಕ್‌ಫಾಸ್ಟ್ಗಳು ಆ ಕ್ಷಣಕ್ಕೆ ಏನೋ ತಿಂದೆ ಎಂದು ಫೀಲ್(Feel) ಆಗುತ್ತದೆಯಷ್ಟೆ. ಜೊತೆಗೆ ಅಷ್ಟಾಗಿ ಹೊಟ್ಟೆ ಹಾಗೂ ದೇಹಕ್ಕೆ ಎನರ್ಜಿ ಸಿಗದ ಕಾರಣ ಆಲಸಿಗಳಾಗುತ್ತೇವೆ ಆರೋಗ್ಯ ಹದಗೆಡುತ್ತದೆ. 

ಹೆಂಡ್ತಿಗೆ ಮ್ಯಾಗಿ ಬಿಟ್ಟು ಮತ್ತೇನ್ ಮಾಡೋಕೆ ಬರಲ್ಲ, ಮೂರು ಹೊತ್ತು ತಿಂದು ಬೇಸತ್ತು ಡಿವೋರ್ಸ್ ನೀಡಿದ ಪತಿ !

ಲೈಟ್(Light) ಎನ್ನುವ ಪದವು ಕೆಲ ಸ್ನಾö್ಯಕ್ಸ್(Snacks), ನಮ್ಕೀನ್‌ಗಳ(Namkeen) ಪ್ಯಾಕ್‌(Pack) ಮೇಲೆ ಬರೆದುಕೊಂಡಿರುತ್ತದೆ. ಇದು ಮುಂದುವರೆದು ಅವಲಕ್ಕಿ, ಉಪ್ಪಿಟ್ಟು, ಇಡ್ಲಿಯಂತಹ(Idli) ತಿಂಡಿಗಳಿಗೂ ಹೇಳಲಾಗುತ್ತದೆ. ಆದರೆ ನ್ಯೂಟ್ರೀಷನ್ ಎಕ್ಸಪರ್ಟ್ಸ್(Nutrition Expert's) ಹೇಳುವಂತೆ ಲೈಟ್‌ಫುಡ್‌ಗಳಿಗಿಂತ ಭರಪೂರಿತ ರೊಟ್ಟಿ ದಾಲ್ ಸೇವನೆ ಆರೋಗ್ಯಕ್ಕೆ ಉತ್ತಮ. ಹಗುರವಾಗಿರುವ ಈ ತಿಂಡಿಗಳು ಬಹು ಬೇಗನೆ ಜೀರ್ಣವಾಗುತ್ತದೆ(Digest). ಆದರೆ ರೊಟ್ಟಿಯಂತಹ ತಿಂಡಿಗಳು ಶರೀರಕ್ಕೆ ಬೇಕಾಗುವ ಕಾರ್ಬೋಹೈಡ್ರೇಟ್(Carbohydrate) ಮತ್ತು  ಫೈಬರ್(Fibre), ಪ್ರೋಟೀನ್‌ಗಳನ್ನು(Protein) ಬಿಡುಗಡೆ ಮಾಡುತ್ತದೆ. ಹಾಗಾಗಿ ಜೀರ್ಣವಾಗುವುದು ಸ್ವಲ್ಪ ತಡ.

ಲೈಟ್‌ಫುಡ್ ಎಂದರೇನು?
ಜೀರ್ಣಕ್ರಿಯೆ(Digestive) ಸುಗಮಗೊಳಿಸುವ ಹಗುರವಾದ ಆಹಾರ. ಅಂದ್ರೆ ಗಂಜಿ, ಉಪ್ಪಿಟ್ಟು, ಅವಲಕ್ಕಿಯಂತಹ ಪದಾರ್ಥಗಳು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದಾಗಿದ್ದು, ಬಹು ಬೇಗ ಜೀರ್ಣವಾಗುತ್ತದೆ.

ಲೈಟ್‌ಫುಡ್‌ನಿಂದಾಗುವ ಸಮಸ್ಯೆಗಳೇನು
ಕಡಿಮೆ ಪ್ರಮಾಣದ ಫ್ಯಾಟ್(Fat) ಇರುವ ಆಹಾರ ಸೇವನೆ ಆರೋಗ್ಯ ಹದಗೆಡಿಸಬಹುದು. ಹಗುರ ಇರುವ ತಿಂಡಿಗಳನ್ನು ತಿಂದರೆ ಹಸಿವು(Hungry), ತೂಕ ಹೆಚ್ಚಳ(weight gain), ಹೃದಯ ಸಂಬAಧಿ ಖಾಯಿಲೆ, ಒತ್ತಡ(Stress), ಗ್ಯಾಸ್ಟಿçಕ್(Gastric), ರಕ್ತದೊತ್ತಡ(Blood pressure) ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೇಹಕ್ಕೆ ಶಕ್ತಿ, ಗ್ಲೂಕೋಸ್(Glucose) ಸಿಗದಿದ್ದ ಮೇಲೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. 

ಬ್ರೇಕ್‌ಫಾಸ್ಟ್‌ಗೆ ಯಾವಾಗ್ಲೂ ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಒಳ್ಳೇದಾ ?

ಲೈಟ್‌ಫುಡ್ ಯಾವಾಗ ಬೇಕು?
ಹಗುರವಾದ ತಿಂಡಿಗಳು ಪ್ರತಿ ದಿನ ಸೇವಿಸುವುದು ಒಳ್ಳೆಯದಲ್ಲ. ಬದಲಾಗಿ ಹುಷಾರು(Unhealthy) ತಪ್ಪಿದಾಗ, ಜ್ವರ(Fever) ಬಂದಾಗ ಬಾಯಿ ಮುರುಗಟ್ಟಿದಲ್ಲಿ ಗಂಜಿ(Porridge) ತಿನ್ನುವುದು ಕಾಮನ್. ಬಹುಬೇಗ ತಿಂಡಿ ತಯಾರಿಸಬೇಕು ಎನ್ನುವವರು ಉಪ್ಪಿಟ್ಟು ಐದು ನಿಮಿಷದಲ್ಲಿ ಮಾಡಿಬಿಡುತ್ತಾರೆ. ಆದರೆ ಈ ತಿಂಡಿಗಳು ಹೊಟ್ಟೆ ತುಂಬುವುದಿಲ್ಲ. ತಿಂದರೂ ಬೇಗ ಹಸಿವಾಗುತ್ತದೆ. ಚೆನ್ನಾಗಿದ್ದಾಗ ಈ ತಿಂಡಿಗಳನ್ನು ತಿಂದರೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಏಕೆಂದರೆ ಕಾರ್ಬೋಹೈಡ್ರೇಟ್(Carbohydrate) ಅಂಶ ಹೆಚ್ಚಾಗಿದ್ದು, ರಕ್ತಕ್ಕೆ ಬೇಕಾಗುವ ಗ್ಲೂಕೋಸ್ ಅಂಶವೂ ಹೆಚ್ಚುತ್ತದೆ. ಹಾಗಾಗಿ ಈ ಲೈಟ್ ಫುಡ್ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

ಬ್ರೇಕ್‌ಫಾಸ್ಟ್ ಹೀಗಿರಲಿ!
ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಬೇಕು ಎಂದಲ್ಲಿ, ಗ್ಲೆöÊಕಮಿಕ್ ಇಂಡೆಕ್ಸ್(Glycemic Index) ಕಡಿಮೆ ಇರುವ ಆಹಾರವನ್ನು ಬೆಳಗಿನ ಆಹಾರದಲ್ಲಿ ಸೇವಿಸಬೇಕು. ಅಂದರೆ ದಾಲ್, ಸಾಂಬರ್(Sambar), ಮೊಸರು ಮುಂತಾದ ಪದಾರ್ಥಗಳನ್ನು ದೈನಂದಿನ ಆಹಾರದಲ್ಲಿ ಸೇವಿಸಬೇಕು. ಬೇಕಾದಲ್ಲಿ ಅವಲಕ್ಕಿ ಜೊತೆ ಮೊಸರು, ಮುರ್‌ಮುರಾ ಜೊತೆಗೆ ದಾಲ್ ಹೀಗೆ ಕಾಂಬಿನೇಷನ್(Combination) ಮಾಡಿಕೊಂಡು ತಿನ್ನುವುದು ಒಳ್ಳೆಯದು. ದಾಲ್‌ನಲ್ಲಿ ಶರೀರಕ್ಕೆ ಬೇಕಾದ ಹೆಚ್ಚು ಪ್ರೋಟೀನ್ ಸಿಗುತ್ತದೆ. ಮೊಸರಿನಲ್ಲಿ ಜಿಡ್ಡಿನಾಂಶ ಸಿಗುತ್ತದೆ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ?: ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು
Storage Tips: ತಪ್ಪಾಗಿ ಸಹ ಈ 5 ಹಣ್ಣನ್ನು ಫ್ರಿಜ್‌ನಲ್ಲಿ ಇಡಬಾರದು..