ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ಈ ವಿಚಾರ ಗಮನದಲ್ಲಿರಲಿ

Published : May 31, 2022, 08:16 PM IST
ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ಈ ವಿಚಾರ ಗಮನದಲ್ಲಿರಲಿ

ಸಾರಾಂಶ

ಪಬ್ಲಿಕ್ ಟಾಯ್ಲೆಟ್ (Public Toilet) ಸೀಟ್ ಮೇಲೆ ಕುಳಿತುಕೊಳ್ಳೋಕೆ ಭಯ. ಸೋಂಕು (Virus) ಶುರುವಾದ್ರೆ ಕಷ್ಟ ಅಂತ ನಾನು ಅದ್ರ ಮೇಲೆ ಕುಳಿತಕೊಳ್ಳೋದೇ ಇಲ್ಲ ಎನ್ನುವವರಿದ್ದಾರೆ. ಹೀಗಿದ್ರೂ ಅನಿವಾರ್ಯ ಸಂದರ್ಭಗಳಲ್ಲಿ ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡಬೇಕಾಗುತ್ತದೆ. ಹೀಗಿದ್ದಾಗ ಇಂಥಾ ವಿಚಾರಗಳನ್ನು ತಪ್ಪದೇ ಗಮನಿಸಿಕೊಳ್ಳಿ.

ಸಾರ್ವಜನಿಕ ಶೌಚಾಲಯ (Public Toilet) ಹೆಸರು ಕೇಳಿದ್ರೆ ಅನೇಕರು ಮೂಗು ಮುರಿಯುತ್ತಾರೆ. ಕೆಲವರು ಅಪ್ಪಿತಪ್ಪಿಯೂ ಸಾರ್ವಜನಿಕ ಶೌಚಾಲಯಕ್ಕೆ ಹೋಗುವುದಿಲ್ಲ. ಪಬ್ಲಿಕ್ ಟಾಯ್ಲೆಟ್ ಅಂದ್ರೆ ಕೊಳಕು (Dirty) ಎಂಬುದು ಎಲ್ಲರ ಭಾವನೆ. ಜನರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ(Public Toilet)ಗಳನ್ನು ತೆರೆಯಲಾಗಿದ್ದರೂ ಕೂಡಾ ಇದನ್ನು ಬಳಕೆ ಮಾಡುವುದರಿಂದ ಹಾನಿಯೇ ಹೆಚ್ಚು. ಆದರೆ ಕೆಲವೊಮ್ಮೆ ದೀರ್ಘ ಪ್ರಯಾಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡಬೇಕಾಗುತ್ತದೆ. ಆದರೆ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛತೆಯನ್ನು (Clean) ಪಾಲಿಸದ ಕಾರಣ ಹಲವರು ಹೇಗೋ ಕಷ್ಟಪಟ್ಟು ಹೋಗಿ ಬರುತ್ತಾರೆ. ಹಲವು ಸೋಂಕುಗಳು (Virus) ತ್ವರಿತವಾಗಿ ಹರಡುತ್ತಿರುವ ಈ ದಿನಗಳಲ್ಲಿ ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದೇನೆಂದು ತಿಳಿಯೋಣ. 

ಶೌಚಾಲಯದ ಬಾಗಿಲನ್ನು ಮುಟ್ಟಬೇಡಿ
ಬರಿಯ ಕೈಗಳಿಂದ ಟಾಯ್ಲೆಟ್ ಬಾಗಿಲನ್ನು (Door) ಮುಟ್ಟುವುದನ್ನು ತಪ್ಪಿಸಿ. ಬಾಗಿಲಿನ ಹ್ಯಾಂಡಲ್‌ನ್ನು ಅನೇಕ ಜನರು ಮುಟ್ಟಿರುವ ಕಾರಣ ಈ ಮೂಲಕ ಅನೇಕ ಸೂಕ್ಷ್ಮ ಜೀವಿಗಳು ಕೈಗಳಿಗೆ ಹರಡುವ ಸಾಧ್ಯತೆಯಿದೆ. ಇದು ಸೋಂಕಿಗೂ ಕಾರಣವಾಗಬಹುದು. ಹೊರಹೋಗುವ ಅಥವಾ ಒಳಗೆ ಹೋಗುವ ಮೊದಲು ಬಾಗಿಲಿನ ಡೋರ್‌ನ್ನು ಹೊರಗಿನಿಂದ ಮತ್ತು ಒಳಗಿನಿಂದ ಹಿಡಿದುಕೊಳ್ಳಲು ಟಿಶ್ಯೂ ಪೇಪರ್ ಅನ್ನು ಬಳಸಲು ಪ್ರಯತ್ನಿಸಿ.

ಟಾಯ್ಲೆಟ್ ಪೇಪರ್‌ನಲ್ಲಿ ಒರೆಸುವುದಕ್ಕಿಂತ ನೀರಲ್ಲಿ ತೊಳೆಯೋದೆ ಒಳ್ಳೆಯದಂತೆ !

ವೈಯಕ್ತಿಕ ವಸ್ತುಗಳನ್ನು ಗಮನದಲ್ಲಿಟ್ಟುಕೊಳ್ಳಿ
ನಿಮ್ಮ ವೈಯಕ್ತಿಕ ವಸ್ತುಗಳನ್ನು ನೋಡಿಕೊಳ್ಳಿ. ನಿಮ್ಮ ಕೈಗಳನ್ನು ಸ್ಪರ್ಶಿಸುವ ಸೂಕ್ಷ್ಮಾಣುಜೀವಿಗಳನ್ನು ಸುಲಭವಾಗಿ ತೊಳೆಯಬಹುದು. ಆದರೆ ಫೋನ್, ಕೈಚೀಲಗಳು ಮುಂತಾದ ನಿಮ್ಮ ವಸ್ತುಗಳಿಗೆ ಅವು ಹರಡಿದಾಗ ಅವು ನಿಮಗೆ ಸೋಂಕು ತರಬಹುದು. ನಿಮ್ಮ ಕೈಚೀಲಗಳನ್ನು ವಾಶ್‌ರೂಮ್‌ಗಳಲ್ಲಿ ಇರಿಸುವುದನ್ನು ತಪ್ಪಿಸಿ.

ಭಾರತೀಯ ಶೈಲಿಯ ಶೌಚಾಲಯಕ್ಕೆ ಆದ್ಯತೆ ನೀಡಿ
ಟಾಯ್ಲೆಟ್ ಮೇಲ್ಮೈಗಳೊಂದಿಗೆ ಯಾವುದೇ ನೇರ ಸಂಪರ್ಕವನ್ನು ತಪ್ಪಿಸಲು ಯಾವಾಗಲೂ ಪಾಶ್ಚಿಮಾತ್ಯ ಶೈಲಿಯ ಬದಲಿಗೆ ಭಾರತೀಯ ಆಸನ ಶೌಚಾಲಯಕ್ಕೆ ಆದ್ಯತೆ ನೀಡಿ. ನೀವು ಬಳಸುವ ವಾಶ್‌ರೂಮ್‌ನಲ್ಲಿ ಇಂಡಿಯನ್ ಸ್ಟೈಲ್ ಇಲ್ಲವಾಗಿದ್ದರೆ ಫಾರಿನ್ ಸ್ಟೈಲ್‌ ಬಳಸುವ ಮೊದಲು ಟಿಶ್ಯೂನಿಂದ ಟಾಯ್ಲೆಟ್ ಸೀಟ್ ಅನ್ನು ಒರೆಸುವುದನ್ನು ಮರೆಯಬೇಡಿ

ಫ್ಲಶ್ ಮಾಡಿ ಹೊರಬನ್ನಿ
ಫ್ಲಶ್ ಮಾಡಿ, ತಿರುಗಿ ಶೌಚಾಲಯದಿಂದ ಹೊರಬನ್ನಿ. ಫ್ಲಶಿಂಗ್ ಮಾಡುವಾಗ ಗಾಳಿಯಿಂದ ಹರಡುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಸೋಂಕಿಗೆ ಒಳಗಾಗುವ ಸಂಭವನೀಯತೆ ತುಂಬಾ ಹೆಚ್ಚು. ನೀವು ಫ್ಲಶ್ ಮಾಡುವ ಮೊದಲು ಯಾವಾಗಲೂ ಮುಚ್ಚಳವನ್ನು ಮುಚ್ಚಿ, ಫ್ಲಶ್ ಬಟನ್ ಅನ್ನು ಒತ್ತಿ ಮತ್ತು ಸ್ಥಳದಿಂದ ತ್ವರಿತವಾಗಿ ನಿರ್ಗಮಿಸಿ.

Healt Tips : ಪಬ್ಲಿಕ್ ಟಾಯ್ಲೆಟ್ ನಲ್ಲಿ ಅರ್ಧಮರ್ಧ ಕುಳಿತು ಯೂರಿನ್‌ ಮಾಡ್ತೀರಾ? ಎಚ್ಚರ

ಹ್ಯಾಂಡ್ ಡ್ರೈಯರ್ ಬಳಸಬೇಡಿ
ಹ್ಯಾಂಡ್ ಡ್ರೈಯರ್ ಅನ್ನು ಬಳಸುವುದನ್ನು ತಪ್ಪಿಸಿ, ತ್ವರಿತವಾಗಿ ಒಣಗಲು ಅದು ಉತ್ತಮವಾಗಿರಬಹುದು. ಬಿಸಿ ಗಾಳಿಯನ್ನು ನೀಡುವ ಬ್ಲೋ ಡ್ರೈಯರ್ ಗಾಳಿಯಲ್ಲಿ ಇರುವ ಸೂಕ್ಷ್ಮಾಣುಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ. ಕೈಗಳನ್ನು ಚೆನ್ನಾಗಿ ತೊಳೆದ ನಂತರವೂ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು, ಅವುಗಳನ್ನು ಒಣಗಿಸಲು ಕಾಗದದ ಟವಲ್ ಬಳಸಿ. ನೀವು ಪ್ರಯಾಣದಲ್ಲಿರುವಾಗ ಸಣ್ಣ ಕರವಸ್ತ್ರವನ್ನು ಒಯ್ಯಿರಿ.

ಹ್ಯಾಂಡ್ ಸ್ಯಾನಿಟೈಸರ್ ಬಳಸಿ
ಹ್ಯಾಂಡ್ ಸ್ಯಾನಿಟೈಸರ್ ಬಳಸುವುದನ್ನು ಮರೆಯಬೇಡಿ. ಕೊರೋನಾದ ನಂತರ ಈಗ ಮಂಕಿಪಾಕ್ಸ್ ಕೂಡಾ ಹೆಚ್ಚಾಗಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಸುವಾಗ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹೀಗಾಗಿ ಮಾಸ್ಕ್ ತಪ್ಪದೇ ಧರಿಸಿ. ಸ್ಯಾನಿಟೈಸರ್‌ಬಳಸಿ ಆಗಾಗ ಕೈ ಸ್ವಚ್ಛಗೊಳಿಸುತ್ತಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೇನಿನ ಜೊತೆ ಈ ವಸ್ತು ಮಿಕ್ಸ್ ಮಾಡಿ ಸೇವಿಸಿ… ಶೀತ, ಕೆಮ್ಮು ಶಮನ ಮಾತ್ರವಲ್ಲ Weight Lose ಗ್ಯಾರಂಟಿ
ನಿಮಿರುವಿಕೆ ಸಮಸ್ಯೆಯೇ? ಈ ಆಹಾರಗಳಲ್ಲಿದೆ ದೃಢತೆ ಕಾಪಾಡುವ ರಹಸ್ಯ!