ಬೆಂಗಳೂರಿನಲ್ಲಿ ಬ್ಯಾಚುಲರ್ ಬಿಟ್ಟು ಹೋದ ಫ್ಲಾಟ್ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ನೋಡಿ!

By Vinutha PerlaFirst Published Apr 27, 2023, 10:38 AM IST
Highlights

ಬೆಂಗಳೂರಲ್ಲಿ ಬ್ಯಾಚುಲರ್ಸ್‌ಗೆ ಮನೆ ಸಿಗೋದು ತುಂಬಾನೆ ಕಷ್ಟ. ಬಹುತೇಕ ಮನೆ, ಫ್ಲಾಟ್ ಮನೆ ಮಾಲೀಕರು ಹುಡುಗರಿಗೆ, ಹುಡುಗಯರಿಗೆ ಮದ್ವೆ ಆಗಿಲ್ಲಾಂದ್ರೆ ಮನೇನೆ ಕೊಡಲ್ಲ. ಇಲ್ಲೊಂದೆಡೆ ಬ್ಯಾಚುಲರ್ಸ್‌ ಖಾಲಿ ಬಿಟ್ಟು ಹೋಗಿರುವ ಫ್ಲಾಟ್‌, ಮನೆ ಮಾಲೀಕರು ಯಾಕೆ ಬ್ಯಾಚುಲರ್ಸ್‌ಗೆ ಮನೆ ಕೊಡಲ್ಲ ಎಂಬುದಕ್ಕೆ ಉತ್ತರ ಕೊಟ್ಟಂತಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ, ಫ್ಲಾಟ್ ಹುಡುಕೋ ಪೇಚಾಟ ಅಷ್ಟಿಷ್ಟಲ್ಲ. ಬ್ಯಾಚುಲರ್ಸ್‌, ನಾನ್‌ವೆಜ್ ತಿನ್ನೋರಿಗೆ ಮನೆ ಸಿಗಲ್ಲ. ಸುಮ್ ಸುಮ್ನೆ ಮನೆ ಓನರ್ ನೂರೆಂಟು ಕಂಡೀಷನ್ಸ್ ಹಾಕ್ತಾರೆ ಅಂತ ಹಲವರು ಹೇಳಿರೋದನ್ನು ಕೇಳಿರಬಹುದು. ಸಾಮಾನ್ಯವಾಗಿ ಯಾವಾಗ್ಲೂ ಬಾಡಿಗೆಗೆ ಇರೋ ವ್ಯಕ್ತಿಗಳೇ ಓನರ್ ಬಗ್ಗೆ ದೂರು ಹೇಳ್ತಿರ್ತಾರೆ. ಆದ್ರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಮನೆ ಓನರ್ ಒಬ್ಬರು, ಬಾಡಿಗೆದದಾರರ ಮೇಲೆ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಚುಲರ್ ಬಿಟ್ಟುಹೋದ ಫ್ಲಾಟ್‌ನ ಫೋಟೋಗಳನ್ನು ವ್ಯಕ್ತಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಫೋಟೋದಲ್ಲಿ ವ್ಯಕ್ತಿಯೊಬ್ಬರು ಬ್ಯಾಚುಲರ್‌ಗೆ ಬಿಟ್ಟು ಕೊಟ್ಟ ಫ್ಲಾಟ್ ಮತ್ತು ರೂಮಿನಲ್ಲಿ ಎಲ್ಲೆಡೆ ಕಸ ಬಿದ್ದಿರುವ ಶೋಚನೀಯ ಸ್ಥಿತಿಯ ಪೋಟೋವನ್ನು ಹಂಚಿಕೊಂಡಿದ್ದಾರೆ. ಪಾಡ್‌ಕ್ಯಾಸ್ಟ್ ಹೋಸ್ಟ್ ಆಗಿರುವ ರವಿ ಹಂಡಾ ಅವರು ರೆಡ್ಡಿಟ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. MNC ಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ 'ವಿದ್ಯಾವಂತ ಬ್ಯಾಚುಲರ್' ಈ ಫ್ಲಾಟ್‌ನ್ನು ಬಿಟ್ಟಿದ್ದಾನೆ' ಎಂದು ಅವರು ಹೇಳಿದ್ದಾರೆ. ರೂಮಿನಲ್ಲಿ ಎಲ್ಲೆಂದರಲ್ಲಿ ಖಾಲಿ ಬಿಯರ್ ಬಾಟಲ್‌ಗಳು ಬಿದ್ದಿರುವುದನ್ನು ಫೋಟೋದಲ್ಲಿ ನೋಡಬಹುದು ಮಾತ್ರವಲ್ಲ, ಇಡೀ ಜಾಗವೇ ಕಸದ ತೊಟ್ಟಿಯಂತೆ ಕಾಣುತ್ತಿದೆ. ಸ್ಲ್ಯಾಬ್‌ನ ಸುತ್ತಲೂ ತ್ಯಾಜ್ಯ ಬಿದ್ದಿದ್ದು, ಕ್ಯಾಬಿನೆಟ್‌ಗಳು ಮುರಿದು ಬಿದ್ದಿರುವುದರಿಂದ ಅಡುಗೆ ಮನೆ ತುಂಬಾ ಅಸ್ತವ್ಯಸ್ತವಾಗಿ ಕಾಣುತ್ತದೆ. ರೂಮನ್ನು ನೋಡಿದರೆ ಬಹುದಿನಗಳ ವರೆಗೆ ಕ್ಲೀನ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಗುತ್ತದೆ. 

ಕೊನೆಗೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಪೋಸ್ಟ್ ಮಾಡಿದ ವ್ಯಕ್ತಿ, ರೂಮಾ, ಜೈಲಾ ಎಂದ ನೆಟ್ಟಿಗರು!

ಫ್ಲ್ಯಾಟ್ ಮಾಲೀಕ ತಾನು  2 BHK ಫ್ಲಾಟ್‌ನ್ನು ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ನೀಡಿದ್ದೆ. ಆತ  3-4 ತಿಂಗಳ ಬಾಡಿಗೆ ಪಾವತಿಸಿದ ನಂತರ, ಇದ್ದಕ್ಕಿದ್ದಂತೆ ಹೊರಟು ಹೋದ. ಈಗ ಫ್ಲಾಟ್ ಅನ್ನು ಖಾಲಿ ಮಾಡಬೇಕಾಗಿದೆ. ವ್ಯಕ್ತಿ ಡೆಪಾಸಿಟ್‌ ಹಣವನ್ನು ಹಿಂತಿರುಗಿಸಬೇಕೆಂದು ತಿಳಿಸಲು ಕರೆದನು. ಆದರೆ, ಸರಿಯಾಗಿ ಫ್ಲ್ಯಾಟ್ ಹಸ್ತಾಂತರಿಸಲು ಹಿಂದೇಟು ಹಾಕಿದ್ದು ಅನುಮಾನಕ್ಕೆ ಕಾರಣವಾಗಿತ್ತು.

ಹೀಗಾಗಿ ಫ್ಲಾಟ್‌ಗೆ ಭೇಟಿ ನೀಡಲು ಹೋದಾಗ, ಸ್ಥಳದಲ್ಲಿ ಖಾಲಿ ಮದ್ಯದ ಬಾಟಲಿಗಳು ಬಿದ್ದಿದ್ದವು. ಕಿಟಕಿಗಳನ್ನು ತೆರೆದಿರುವುದರಿಂದ ಪಾರಿವಾಳಗಳು ಎಲ್ಲೆಂದರಲ್ಲಿ ಬಂದು ಹಿಕ್ಕೆ ಹಾಕಿದ್ದವು.. ಲಿವಿಂಗ್ ರೂಮಿನ ಮಧ್ಯದಲ್ಲಿ ಕೊಳಕು ಹಾಸಿಗೆ ಕೂಡ ಬಿದ್ದಿತ್ತು ಮತ್ತು ಅಡುಗೆಮನೆ ಮತ್ತು ಶೌಚಾಲಯವು ಅವ್ಯವಸ್ಥೆಯಲ್ಲಿತ್ತು ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!

'ಇದು ಅಪರೂಪದ ಪ್ರಕರಣವಾಗಿದೆ, 98% ಬ್ಯಾಚುಲರ್‌ಗಳು ತಮ್ಮ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳುತ್ತಾರೆ' ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 'ಇದು ಸರಿಯಾಗಿದೆ ಅಲ್ಲದೆ ಎಲ್ಲಾ ಮನೆ ಮಾಲೀಕರು ಪೇಂಟಿಂಗ್ ಮತ್ತು ಕ್ಲೀನಿಂಗ್ ಶುಲ್ಕಕ್ಕಾಗಿ 1 ತಿಂಗಳ ಬಾಡಿಗೆಯನ್ನು ಕಡಿತಗೊಳಿಸುತ್ತಾರೆ' ಎಂದು ತಿಳಿಸಿದ್ದಾರೆ. ಮತ್ತೊಬ್ಬ ನೆಟಿಜನ್ ತನ್ನ ಫ್ಲಾಟ್ ಅನ್ನು ತಾಯಿ-ಮಗಳ ಜೋಡಿಗೆ ನೀಡಿದ್ದೆ. ನನಗೂ ಇದೇ ರೀತಿಯ ಅನುಭವವಾಗಿತ್ತು ಎಂದು ಫ್ಲಾಟ್‌ನ ಶೋಚನೀಯ ಸ್ಥಿತಿಯನ್ನು ತೋರಿಸುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

This is why people don’t like renting to bachelors.

An “educated” bachelor working in a “large MNC” did this in Bangalore.

Got these pics from Reddit. pic.twitter.com/LbYhEk9hx5

— Ravi Handa (@ravihanda)
click me!