ಅಡುಗೆಮನೆ ನಿಭಾಯಿಸುವುದೇನೂ ಕಷ್ಟವಲ್ಲ ಬಿಡ್ರಿ....

By Web DeskFirst Published Jul 3, 2019, 3:43 PM IST
Highlights

ನಿಮ್ಮನ್ನು ನೀವು ಕಿಚನ್ ಎಕ್ಸ್‌‍ಪರ್ಟ್ ಎಂದುಕೊಂಡಿರಬಹುದು. ಬಾಣಲೆ ಹಾಗೂ ಮೊಟ್ಟೆಯನ್ನು ಕವಡೆಯಂತೆ ಆಡಿಸುವ ಚಾಕಚಕ್ಯತೆ ನಿಮಗಿರಬಹುದು. ಆದರೆ, ಯಾವ ವಿಷಯದಲ್ಲೂ ಕಲಿತು ಮುಗಿಯೆತೆಂದು ಆಗುವುದಿಲ್ಲ ಅಲ್ಲವೇ? ಈ ಕೆಲವು ಕಿಚನ್ ಹ್ಯಾಕ್ಸ್ ನಿಮ್ಮನ್ನು ಮತ್ತಷ್ಟು ತಜ್ಞರಾಗಿಸಬಹುದು. 

ಈ ಮಹಿಳೆಯರಿಗೇನು ಬಹಳ ಕೆಲಸವಾ ಎಂಬಂತೆ ಬಹಳಷ್ಟು ಜನ ಗಂಡಸರು ತಮ್ಮ ಪತ್ನಿ, ತಾಯಿಯರನ್ನು ಅಸಡ್ಡೆಯಿಂದ ನೋಡುವುದಿದೆ. ಆದರೆ, ಮನೆ ನಿಭಾಯಿಸುವುದು ಹೋಗಲಿ, ಕೇವಲ ಅಡುಗೆಮನೆ ನಿಭಾಯಿಸುವುದು ಗಣಿತ, ವಿಜ್ಞಾನ, ಎಂಜಿನಿಯರಿಂಗ್, ಮೆಡಿಕಲ್ ಎಲ್ಲ ಜ್ಞಾನವನ್ನೂ ಬೇಡುತ್ತದೆ. ಇಷ್ಟೆಲ್ಲದರಲ್ಲೂ ಎಕ್ಸ್‌ಪರ್ಟ್ ಆದ ಮೇಲೂ ಆಹಾರ ಸ್ಟೋರೇಜ್, ಸಿಪ್ಪೆ ತೆಗೆಯುವುದು, ಬಹಳ ದಿನ ಕೆಡದಂತೆ ಆಹಾರ ರಕ್ಷಿಸುವುದು, ಫ್ರೀಜಿಂಗ್ ಮುಂತಾದ ವಿಷಯದಲ್ಲಿ ಕೆಲವೊಂದು ಟ್ರಿಕ್ಸ್ ತಿಳಿದುಕೊಂಡರೆ ಅಡುಗೆಮನೆ ಕೆಲಸ ಇನ್ನಷ್ಟು ಸುಲಭವೂ, ಸರಾಗವೂ, ಉಳಿತಾಯವೂ ಆಗಬಹುದು. 

- ಹೆಚ್ಚಿಟ್ಟ ಆಲೂಗಡ್ಡೆಯ ಸ್ಟಾರ್ಚ್ ಬಿಡುಗಡೆಯಾಗಿ ಆಕ್ಸಿಡೈಸ್ ಆಗಿ ಅದು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದು ಹೀಗಾಗದಿರಲು ಹೆಚ್ಚಿದ ಆಲೂಗಡ್ಡೆ ಹೋಳುಗಳನ್ನು ತಣ್ಣೀರಿನ ಪಾತ್ರೆಯೊಳಗೆ ಹಾಕಿಡಿ. ನಂತರ ಬೇಯಲು ಹಾಕಿ. 

ಅಡುಗೆ ಮನೆ ವಿನ್ಯಾಸ; ಈ ಟ್ರೆಂಡ್‌ಗಳನ್ನು ದೂರವಿಡಿ..

- ಟೊಮ್ಯಾಟೋ ಸ್ಟೋರ್ ಮಾಡುವಾಗ ಅದರ ಕಾಂಡದ ಭಾಗ ಕೆಳಗೆ ಬರುವಂತೆ ಮಾಡಿಡಿ. ಇದರಿಂದ ಟೊಮ್ಯಾಟೋದೊಳಗಿನ ತೇವಾಂಶ ಹೊರಗೆ ಹೋಗುವುದು ಹಾಗೂ ಹೊರಗಿನ ಗಾಳಿ ಒಳಗೆ ಹೋಗುವುದು ತಪ್ಪುತ್ತದೆ. ಇದರಿಂದ ಟೊಮ್ಯಾಟೋ ಬಹಳ ದಿನಗಳ ಕಾಲ ಕೆಡದಂತಿರುತ್ತದೆ. ಅಲ್ಲದೆ, ಫ್ರಿಡ್ಜ್‌ನಲ್ಲಿಡುವುದಕ್ಕಿಂತ ಹೊರಗೆ ರೂಂ ಟೆಂಪರೇಚರ್‌ನಲ್ಲಿಯೇ ಟೊಮ್ಯಾಟೋ ಹೆಚ್ಚು ದಿನ ಚೆನ್ನಾಗಿರುತ್ತದೆ.

- ಬಾಳೆಹಣ್ಣು ಬಹುಕಾಲ ಫ್ರೆಶ್ ಆಗಿರಲು ಬಾಳೆಚಿಪ್ಪಿಗೆ ಪ್ಲ್ಯಾಸ್ಟಿಕ್‌ನಿಂದ ಸುತ್ತಿಡಿ. ಇನ್ನೂ ಉತ್ತಮವೆಂದರೆ ಎಲ್ಲ ಬಾಳೆಹಣ್ಣುಗಳನ್ನು ಬೇರೆ ಬೇರೆ ಮಾಡಿ, ತೊಟ್ಟಿಗೆ ಪ್ಲ್ಯಾಸ್ಟಿಕ್ ಸುತ್ತಿಡಿ. ಈ ಪ್ಲ್ಯಾಸ್ಟಿಕ್ ಬುಡದಿಂದ ಎಥಿಲಿನ್ ಗ್ಯಾಸ್ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಆ ಮೂಲಕ ಬಾಳೆಹಣ್ಣು ಬೇಗ ಕೊಳೆಯದಂತೆ ನೋಡಿಕೊಳ್ಳುತ್ತದೆ. ಇನ್ನು ಬಾಳೆಹಣ್ಣು ಬೇಗ ಹಣ್ಣಾಗಬೇಕೆಂದರೆ ಆಗ ಹಣ್ಣುಗಳನ್ನು ಪೇಪರ್ ಬ್ಯಾಗ್‌ನಲ್ಲಿಡಿ. ಇದರಿಂದ ಎಥಿಲಿನ್ ಗ್ಯಾಸ್ ಒಂದೆಡೆಯೇ ಕಾಂನ್ಸೆಂಟ್ರೇಟ್ ಆಗಿ ಬಾಳೆಕಾಯಿ ಬೇಗ ಹಣ್ಣಾಗುವಂತೆ ಮಾಡುತ್ತದೆ.

- ಹೆಚ್ಚಿದ ಹಣ್ಣುಗಳ ಹೋಳುಗಳು ಕಪ್ಪಾಗದಂತೆ ತಡೆಯಲು ಲಿಂಬೆರಸ ಹಾಗೂ ಸ್ವಲ್ಪ ಜೇನುತುಪ್ಪ ಸವರಿ. ಲಿಂಬೆಯಲ್ಲಿರುವ ಸಿಟ್ರಿಕ್ ಆ್ಯಸಿಡ್, ವಿಟಮಿನ್ ಸಿ ಹಾಗೂ ಜೇನಿನಲ್ಲಿರುವ ಪೆಪ್ಟೈಡ್, ಆಕ್ಸಿಡೇಶನ್ ಪ್ರೊಸೆಸ್ ನಿಧಾನಗೊಳಿಸಿ ಹಣ್ಣುಗಳು ಬಣ್ಣಗೆಡದಂತೆ ನೋಡಿಕೊಳ್ಳುತ್ತವೆ. 

- ಮೊಟ್ಟೆಯು ಕೆಟ್ಟಿದೆಯೇ ಅಥವಾ ಬಳಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಅದನ್ನು ತಣ್ಣೀರು ತುಂಬಿರುವ ಬಟ್ಟಲಿಗೆ ಹಾಕಿ. ಮೊಟ್ಟೆ ಕೆಟ್ಟಿದ್ದರೆ ಅದು ತೇಲುತ್ತದೆ. ಬಳಕೆಗೆ ಯೋಗ್ಯವಾಗಿದ್ದರೆ ಮುಳುಗುತ್ತದೆ. ಮೊಟ್ಟೆಯ ಹೊರಗಿನ ಪದರ ರಂಧ್ರಗಳಿಂದ ಕೂಡಿರುವುದರಿಂದ ಕಾಲ ಕಳೆದಂತೆ ಅದರೊಳಗಿನ ದ್ರವವೆಲ್ಲ ಆರಿ ಹೋಗಿ ಮೊಟ್ಟೆ ಹಗುರಾಗುತ್ತದೆ.

ಉದ್ಯೋಗಸ್ಥ ಮಹಿಳೆಯ ಅಡುಗೆಕೋಣೆಯಲ್ಲಿರಲೇಬೇಕಾದ ಸಾಧನಗಳಿವು

- ಆಲೂಗಡ್ಡೆಯ ಸಿಪ್ಪೆ ತೆಗೆಯಲು ಅದನ್ನು ಸಿಪ್ಪೆಸಹಿತ ಬೇಯಿಸಿ ಬಳಿಕ ಐಸ್‌ನೀರಿನಲ್ಲಿ ಹಾಕಿ. ತಕ್ಷಣ ಸಿಪ್ಪೆ ಕಿತ್ತು ಕೈಗೆ ಬರುತ್ತದೆ.

- ನಿಂಬೆಹಣ್ಣಿನಿಂದ ಹೆಚ್ಚಿನ ರಸ ಪಡೆಯಲು ಅದನ್ನು ಫ್ರಿಡ್ಜ್‌ನಲ್ಲಿಡಿ. ಬಳಿಕ ಮೈಕ್ರೋವೇವ್‌ನಲ್ಲಿ 15ರಿಂದ 20 ಸೆಕೆಂಡ್ ಬಿಸಿ ಮಾಡಿ. ನಂತರ ಹಿಂಡಿರಿ. ಇನ್ನು ನಿಂಬೆಬೀಜ ಬೀಳದಂತೆ ರಸ ಹಿಂಡಲು ಸ್ಟಾಕಿಂಗ್ ಅಥವಾ ಚೀಸ್‌ಕ್ಲೋತ್‌ನೊಳಗೆ ನಿಂಬೆಹಣ್ಣಿಟ್ಟುಕೊಂಡು ರಸ ತೆಗೆಯಿರಿ.

- ಬರ್ತ್‌ಡೇ ಕೇಕ್ ಹೆಚ್ಚು ಸಮಯ ಡ್ರೈ ಆಗದಂತೆ ನೋಡಿಕೊಳ್ಳಲು ಅದರ ಮೇಲೆ ಒಂದು ಬ್ರೆಡ್ ಸ್ಲೈಸ್ ಇಡಿ. ಕೇಕ್‌ನ ಮಾಯಿಶ್ಚರ್‌ನೆಲ್ಲ ಬ್ರೆಡ್ ತಡೆದಿಟ್ಟುಕೊಳ್ಳುತ್ತದೆ.

- ಪಿಜ್ಜಾ ಹಾಗೂ ಇತರೆ ಬೇಯಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವಾಗ ಮೈಕ್ರೋಓವನ್‌ನೊಳಗೆ ಒಂದು ಲೋಟ ನೀರಿಡಿ. ಇದರಿಂದ ಆ ಮಾಯಿಶ್ಚರೈಸರನ್ನು ಹೀರಿಕೊಂಡ ಪಿಜ್ಜಾ ಫ್ರೆಶ್ ಎನಿಸುತ್ತದೆ.

- ತಾಜಾ ಹರ್ಬ್‌ಗಳು ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ನೀರಿನೊಂದಿಗೆ ಹರ್ಬ್ಸ್‌ನ್ನು ಐಸ್ ಕ್ಯೂಬ್ ಟ್ರೇನಲ್ಲಿಟ್ಟು ಫ್ರೀಜರಲ್ಲಿಡಿ. ಬೇಕೆಂದಾಗ ಐಸ್ ಕ್ಯೂಬ್ ತೆಗೆದು ಬಳಸಿ.

click me!