
ಹಲ್ಲನ್ನು ಸರಿಯಾಗಿ ಬ್ರಶ್ ಮಾಡಲೊಪ್ಪದ ಮಕ್ಕಳು ದೊಡ್ಡವರಾದಾಗ ಹೃದಯ ಸಮಸ್ಯೆಯಿಂದ ಬಳಲುವ ಸಂಭವ ಹೆಚ್ಚಂತೆ! ಅರೆ, ಹೃದಯಕ್ಕೂ, ಹಲ್ಲುಗಳಿಗೂ ಎತ್ತಣದೆತ್ತಣ ಸಂಬಂಧ ಎಂದಿರಾ?
ಹಲ್ಲು ಬ್ರಷ್ ಮಾಡಲೇಬಾರದು...ಯಾವಾಗ?
ಇದೆಯಪ್ಪಾ ಇದೆ ಅಂತಿದಾರೆ ಹೆಲ್ಸಿಂಕಿ ಯೂನಿವರ್ಸಿಟಿಯ ಸಂಶೋಧಕರು. ಪ್ಲೇಕ್ ಮೇಲಿರುವ ಬ್ಯಾಕ್ಟೀರಿಯಾಗಳು ಹಲ್ಲಿನ ಟಿಶ್ಯೂಗಳನ್ನು ಆವರಿಸಿಕೊಂಡಾಗ ಹಲ್ಲಿನ ಸಮಸ್ಯೆಗಳು ಆರಂಭವಾಗುತ್ತವೆ. ಕೆಲರ ದೇಹ ಈ ಬ್ಯಾಕ್ಟೀರಿಯಾಕ್ಕೆ ಅತಿಯಾಗಿ ಸ್ಪಂದಿಸಿ ಇನ್‌ಫ್ಲೇಮೇಷನ್‌ಗೆ ಕಾರಣವಾಗುತ್ತದೆ. ಈ ಉರಿ ನಿಧಾನವಾಗಿ ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಆಮ್ಲಜನಕಯುಕ್ತ ರಕ್ತವು ನಮ್ಮ ಅಂಗಾಂಗಗಳಿಗೆ ಹೋಗಲು ಅಡ್ಡಿಯುಂಟಾಗುತ್ತದೆ. ಪರಿಣಾಮ, ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಅಥವಾ ಅಕಾಲಿಕ ಸಾವು ಉಂಟಾಗಬಹುದು ಎಂಬುದು ಅಧ್ಯಯನದ ಫಲಿತಾಂಶ.
ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್
ಅಬ್ಬಬ್ಬಾ, ನಮ್ಮ ದೇಹದಲ್ಲಿ ಎಲ್ಲವೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬ ವಿಷಯವೇ ಬಹಳ ಜಟಿಲ. ಇನ್ನಾದರೂ ನಿಮ್ಮ ಮಕ್ಕಳಿಗೆ ದಿನಕ್ಕೆರಡು ಬಾರಿ ಸರಿಯಾಗಿ ಬ್ರಶ್ ಮಾಡುವಂತೆ ತಿಳಿ ಹೇಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.