- ಚಿತ್ತೂರು ರಾಣಿ ತನ್ನ ಬಾಲ್ಯವನ್ನು ಹೆಚ್ಚಾಗಿ ತನ್ನ ಪ್ರೀತಿಯ ಗಿಳಿ ಹಿರಾಮಣಿಯೊಂದಿಗೆ ಕಳೆದಳು. ಬೆಳೆಯುತ್ತಿದ್ದಂತೆ ತಂದೆ ಗಂಧರ್ವ ರಾಜ ಮಗಳ ಸ್ವಯಂವರ ಏರ್ಪಡಿಸುತ್ತಾನೆ
- ಈಕೆಯ ಸ್ವಯಂವರಕ್ಕೆ ಅನೇಕ ಹಿಂದು ಮತ್ತು ರಜಪೂತ ಜರ ಜತೆ ಮೇವಾಡ ರಾಜ್ಯದ ರಾಜ ರತನ್ ಸಿಂಗ್ ಬಂದಿದ್ದರು. ಸ್ವಯಂವರದ ಟಾಸ್ಕ್‌ನಲ್ಲಿ ಗೆದ್ದಿದ್ದು ರಾಜ ರತನ್ ಸಿಂಗ್. ರಾಣಿ ಪದ್ಮಾವತಿಯನ್ನು ಒಲಿಸಿಕೊಂಡ.
- ಒಮ್ಮೆ ರಾಜ ರತನ್ ಸಿಂಗ್ ದರ್ಬಾರಿನಲ್ಲಿ ಕಛೇರಿ ನಡೆಯುತ್ತಿರುತ್ತದೆ. ಪ್ರಸಿದ್ಧ ಗಾಯಕ ರಾಗವ್ ಚೇತನ್ ಸಂಗೀತಕ್ಕೆ ಮನಸೋತ ರಾಜನಿಗೆ ಆತ ಮಾಂತ್ರಿಕನೆಂಬುವುದು ತಡವಾಗಿ ಗೊತ್ತಾಗುತ್ತದೆ. ತಕ್ಷಣವೇ ಆತನ್ನು ಕತ್ತೆ ಮೇಲೆ ಮೆರವಣಿಗೆ ಮಾಡಿಸಿ, ಗಡೀಪಾರು ಮಾಡುತ್ತಾನೆ.
- ರತನ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸುತ್ತಾನೆ ರಾಗವ್. ಸರಿ, ದಿಲ್ಲಿಯೆಡೆಗೆ ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ಹೇಗಾದರೂ ಮಾಡಿ ಖಿಲ್ಜಿಯನ್ನು ಭೇಟಿಯಾಗಲು ಚಿಂತಿಸುತ್ತಾನೆ. ದಟ್ಟಾರಣ್ಯವೊಂದಕ್ಕೆ ಖಿಲ್ಜಿ ಭೇಟಿ ನೀಡುವುದನ್ನು ಅರಿತ ರಾಗವ್, ಅಲ್ಲಿಗೆ ಹೋಗುತ್ತಾನೆ. ಖಿಲ್ಜಿ ಬರೋ ಸಮಯದಲ್ಲಿಯೇ ಕೊಳಲು ನುಡಿಸುತ್ತಾ, ರಾಜನನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾನೆ. ಅಂದಿನಿಂದ ಅವರಿಬ್ಬರ ಸಖ್ಯ ಆರಂಭವಾಗಿ, ಅಲ್ಲೀಯ ಆಸ್ಥಾನ ಸಂಗೀತಗಾರನಾಗಿ ಸೇರಿಕೊಳ್ಳುತ್ತಾನೆ. ಚಿತ್ತೂರು ರಾಜ್ಯದ ಮೇಲೆ ಕಣ್ಣಿಟ್ಟಿದ ಖಿಲ್ಜಿಗೆ ಪದ್ಮಾವತಿ ಮೇಲೆ ಮನಸ್ಸಾಗುವಂತೆ ಮಾಡುವಲ್ಲಿಯೂ ಯಶಸ್ವಿಯಾಗುತ್ತಾನೆ. ಆಗಲೇ ಪದ್ಮಾವತಿಯನ್ನು ಹೇಗಾದರೂ ಒಲಿಸಿಕೊಳ್ಳಬೇಕೆಂಬ ಜಿದ್ದಿಗೆ ಬೀಳುವುದು ಖಿಲ್ಜಿ.
- ಅಲ್ಲಿಂದಲೇ ಆರಂಭವಾಗುತ್ತೆ ಪದ್ಮಾವತಿಯನ್ನು ಒಲಿಸಿಕೊಳ್ಳುವ ಖಿಲ್ಜಿ ಪ್ರಯತ್ನ. ರಾಣಿ ಪದ್ಮಿನಿಯನ್ನು ಸಹೋದರಿಯನ್ನಾಗಿ ಸ್ವೀಕರಿಸುತ್ತೇನೆ, ಭೇಟಿಯಾಗಬೇಕೆಂದು ಪತ್ರ ಕಳುಹಿಸುತ್ತಾನೆ. ಖಿಲ್ಜಿಯ ಆಗ್ರಹವನ್ನು ಪೂರೈಸದೇ ಹೋದಲ್ಲಿ, ಮುಂದಾಗುವ ಅನಾಹುತವನ್ನು ಗ್ರಹಿಸಿದ ಸಿಂಗ್ ಹೊಸ ಪ್ಲ್ಯಾನ್ ಮಾಡುತ್ತಾನೆ. ಖಿಲ್ಜಿಗೆ ರಾಣಿ ಪದ್ಮಾವತಿಯನ್ನು ಕನ್ನಡಿಯಲ್ಲಿ ತೋರಿಸುವ ವ್ಯವಸ್ಥೆ ಮಾಡುತ್ತಾನೆ. ಕನ್ನಡಿಯಲ್ಲಿಯೇ ಕಂಡ ರಾಣಿಯ ಸೌಂದರ್ಯ ನೋಡಿ, ಖಿಲ್ಜಿಯ ವ್ಯಾಮೋಹ ಮತ್ತಷ್ಟು ಹೆಚ್ಚುತ್ತದೆ. ಆಕೆಯನ್ನು ಹೇಗಾದರೂ ಪಡೆದೇ ತೀರಬೇದು ನಿರ್ಧರಿಸುತ್ತಾನೆ.
- ಪದ್ಮಾವತಿಯ ಸೌಂದರ್ಯಕ್ಕೆ ಮಾರು ಹೋದ ಖಿಲ್ಜಿ, ಅರಮನೆಯಿಂದ ಹೊರ ಬರುವಾಗಲೇ ರಾಜ ರತನ್ ಸಿಂಗ್‌ನನ್ನು ಅಪಹರಿಸಿ, ದಿಲ್ಲಿಗೆ ಕರೆದೊಯ್ಯುತ್ತಾನೆ. ಪತಿ ಬೇಕಾದರೆ ಯುದ್ಧ ಮಾಡು, ಇಲ್ಲವೇ ಶರಣಾಗೆಂದು ಖಿಲ್ಜಿ ಪತ್ರ ಬರೆಯುತ್ತಾನೆ.
- ಇತ್ತ ರಾಣಿಗೋ ಗಂಡನನ್ನು ಉಳಿಸಿಕೊಳ್ಳಬೇಕು. ಖಿಲ್ಜಿ ಬಲೆಗೆ ಬೀಳಬಾರದು. ಏನು ಮಾಡಬೇಕೆಂಬುವುದು ತೋಚದೇ ಆತಂಕಕ್ಕೆ ಒಳಗಾಗುತ್ತಾಳೆ. ಆಗಿಬ್ಬರು ಗೊರ ಮತ್ತು ಪಾದಲ್ ಎಂಬಿಬ್ಬರು ಸೈನಿಕರು ರಾಣಿ ಸಹಾಯಕ್ಕೆ ಧಾವಿಸುತ್ತಾರೆ. ಖಿಲ್ಜಿಗೆ 'ಶರಣಾಗುವೆ. ಆದರೆ, ನಾನು ಬರೋ ಮುನ್ನ ನನ್ನ 150 ಸಖಿಯರು ಅಲ್ಲಿಗೆ ಬರುವುದಾಗಿ' ಹೇಳಿ ಪದ್ಮಾವತಿ ಪತ್ರ ಬರೆಯುತ್ತಾಳೆ. ಆದರೆ, 150 ಸೈನಿಕರನ್ನು ಕಳುಹಿಸಿ, ಯುದ್ಧ ಸಾರುತ್ತಾಳೆ. ಅಲ್ಲದೇ ಪತಿ ರತನ್ ಸಿಂಗ್‌ನನ್ನೂ ಕಾಪಾಡುವಲ್ಲಿಯೂ ರಾಣಿ ಯಶಸ್ವಿಯಾಗುತ್ತಾಳೆ.
- ಆದರೆ, ಖಿಲ್ಜಿ ಸುಮ್ಮನಾಗುತ್ತಾನೆಯೇ? ಮತ್ತೆ ಚಿತ್ತೂರು ರಾಜ್ಯದ ಮೇಲೆ ಯುದ್ಧ ಸಾರುತ್ತಾನೆ. ದಿಲ್ಲಿ ಹಾಗೂ ಚಿತ್ತೂರು ರಾಜರ ನಡುವೆ ನಡೆದ ಯುದ್ಧದದಲ್ಲಿ ರಾಜ ರತನ್ ಸಿಂಗ್ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.
- ಆಗ ರಾಣಿ ಪದ್ಮಾವತಿಗೆ ಇದ್ದಿದ್ದು, ಕೇವಲ ಎರಡು ಆಯ್ಕೆಗಳು. ಒಂದು ಖಿಲ್ಜಿಗೆ ಶರಣಾಗುವುದು. ಮತ್ತೊಂದು ಪ್ರಾಣ ಕಳೆದುಕೊಳ್ಳುವುದು.
- ಸ್ವಾಭಿಮಾನಿ ಭಾರತೀಯ ಹೆಣ್ಣು ಆಯ್ದುಕೊಳ್ಳುವುದು ಎರಡನೇ ಆಯ್ಕೆಯನ್ನು. ಅರೆಮನೆಯಲ್ಲಿಯೇ ಅಗ್ನಿ ಕುಂಡವನ್ನು ನಿರ್ಮಿಸಿ, ಅದರಲ್ಲಿ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈಕೆಯೊಂದಿಗೆ ರಾಜ್ಯದ ಅನೇಕ ಹೆಂಗಸರೂ ಸತಿ ಸಹಗಮನ ಪದ್ಧತಿಗೆ ಪ್ರಾಣ ತೆತ್ತುತ್ತಾರೆ. ಸೌಂದರ್ಯದ ಖನಿ ರಾಣಿ ಪದ್ಮಾವತಿ ಇಂಥದ್ದೊಂದು ದುರಂತಕ್ಕೆ ಬಲಿಯಾಗುತ್ತಾಳೆ. ಅವಳ ಸೌಂದರ್ಯ, ಧೈರ್ಯ, ಸ್ವಾಭಿಮಾನ, ವಿಶ್ವಾಸ...ಹೀಗೆ ವಿಶೇಷ ಗುಣಗಳಿಂದಲೇ ಭಾರತೀಯರ ಮನದಲ್ಲಿ ಸದಾ ಹಸಿರಾಗಿದ್ದಾಳೆ. ಪದ್ಮಾವತಿ ಎಂದರೆ ಏನೋ ವಿಚಿತ್ರ ಆಕರ್ಷಣೆ, ಎಲ್ಲರನ್ನೂ ಸೆಳೆಯುವಂಥದ್ದು.
ರಾಣಿಯನ್ನು ನೋಡಲ್ಲಂತೂ ಆಗುವುದಿಲ್ಲ. ಆದರೆ, ಚಿತ್ತೂರು ಸಂಸ್ಥಾನ, ರಾಣಿ ಪದ್ಮಾವತಿ ಅರಮನೆ... ಎಲ್ಲವನ್ನೂ ನೋಡಬೇಕು ಎಂದೆನಿಸುತ್ತಿದೆ ಅಲ್ಲವೇ? ಹೀಗೆ ವಿಸಿಟ್ ಮಾಡಿ....
ಇರೋದು: ರಾಜಸ್ಥಾನದ ಚಿತ್ತೋರ್‌ಗಢ್‌ನಲ್ಲಿ
ಬೆಳಗ್ಗೆ 9.30ರಿಂದ ಸಂಜೆ 5ರ ತನಕ ಕೋಟೆ ತೆರೆದಿರುತ್ತೆ.
ಜತೆಗೆ ಜೋಧ್‌ಪುರ್, ಜಯಸಲ್ಮೇರ್ ಸಹ ಸಮೀಪವಿದ್ದು, ಎಲ್ಲ ಕಡೆಗೂ ಭೇಟಿ ನೀಡಿ ಬರಬಹುದು.