ಪ್ರಸವದ ನಂತರದ ಪೇನ್‌ಗೇನು ಮಾಡೋದು?

By Nirupama K SFirst Published Aug 23, 2018, 6:59 PM IST
Highlights

ಹೆರುವ, ಹೊರುವ ಈ ಗ್ಯಾಪ್‌ನಲ್ಲಿ ಗರ್ಭ ಧರಿಸದಂತೆ ತೆಗೆದುಕೊಳ್ಳುವ ಕೆಲವು ಗರ್ಭನಿರೋಧಕಗಳಿಂದ ಹೆಣ್ಣು ತನ್ನ ದೇಹ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವುದು ಸಹಜ. ಇಷ್ಟೆಲ್ಲವಾದರೂ ಫಿಟ್‌ ಆಗಿರುವಂತೆ ಆಕೆ ಏನು ಮಾಡಬಹುದು?

ಪ್ರಸವ ನಂತರ ಮಹಿಳೆಯರ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಕೆಲವು ಸಾಮಾನ್ಯವಾಗಿರುತ್ತವೆ. ಇನ್ನು ಕೆಲವು ಸರಿಯಾಗಿ ಆರೋಗ್ಯದ ಕಡೆಗೆ ಗಮನ ಹರಿಸದೆ ಇರೋದರಿಂದ ಕಾಣಿಸಿಕೊಳ್ಳುತ್ತದೆ. ಅಂಥ ಸಮಸ್ಯೆಗಳನ್ನ ಆರಂಭದಲ್ಲಿಯೇ ಗಮನಿಸಿ ಆರೈಕೆ ಮಾಡಿದರೆ ಉತ್ತಮ. 

ಪ್ರಸವದ ನಂತರವೂ ದೇಹ ತೂಕ ಹೆಚ್ಚುತ್ತದೆ. ಸಣ್ಣಗಿದ್ದವರೂ ಡೆಲಿವರಿಯ ನಂತರ ಬೊಜ್ಜು ಬರಿಸಿಕೊಳ್ಳುವುದಿದೆ. ಹಾರ್ಮೋನ್ ಬದಲಾವಣೆಯೂ ಇದಕ್ಕೆ ಕಾರಣವಾಗಬಹುದು. ಕೂದಲು ಉದುರುವಂಥ ಸಮಸ್ಯೆಯೂ ಸಹಜ. ಅಲ್ಲದೇ ಮತ್ತೇನು ಸಮಸ್ಯೆ ಮಹಿಳೆಯನ್ನು ಕಾಡಬಹುದು?

- ಕೆಲವು ಸಮಯಗಳವರೆಗೆ ಪಿರಿಯಡ್ಸ್‌ ಆಗೋದಿಲ್ಲ. 6 ರಿಂದ 9 ತಿಂಗಳ ನಂತರ ಮತ್ತೆ ಪಿರಿಯಡ್ಸ್‌ ಆರಂಭವಾಗುತ್ತದೆ. ಇನ್ನು ಕೆಲವರಿಗೆ ಮತ್ತಷ್ಟು ತಡವಾಗಬಹುದು. ಈ ಸಮಯದಲ್ಲಿ ಹೊಟ್ಟೆ, ಬೆನ್ನು ನೋವಿನಂತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
- ಮಗು ಹುಟ್ಟಿದ ನಂತರ ಮಹಿಳೆಯರ ಸ್ತನಗಳ ಗಾತ್ರದಲ್ಲಿ ಬದಲಾವಣೆಯಾಗುತ್ತದೆ. ನೋವೂ ಕಾಣಿಸಿಕೊಳ್ಳಬಹುದು. 
- ಹಾರ್ಮೋನ್ಸ್‌ ಬದಲಾವಣೆಯಿಂದ ಮಹಿಳೆಯರಲ್ಲಿ ವಜೈನಲ್‌ ಡಿಸ್‌ಚಾರ್ಜ್‌ ಹೆಚ್ಚಬಹುದು. ಇದು ಸಹಜ. ಭಯ ಬೇಡ. 
- ಕೆಲವು ಸಮಯದ ನಂತರ ಪಿರಿಯಡ್ಸ್ ಮತ್ತೆ ಆರಂಭವಾದಾಗ ರಕ್ತ ಸ್ರಾವ ಹೆಚ್ಚುವ ಸಾಧ್ಯತೆ ಇರುತ್ತದೆ.
- ಯೂರಿನ್‌ ಇನ್‌ಫೆಕ್ಷನ್‌ ಸಹ ಸಾಮಾನ್ಯವಾಗಿ ಮಹಿಳೆಯನ್ನು ಕಾಡಬಹುದು. ಇದರಿಂದಾಗಿ ಉರಿ ಮೂತ್ರ, ಪದೇ ಪದೇ ಮೂತ್ರ ವಿಸರ್ಜನೆ ಉಂಟಾಗುತ್ತದೆ. 

ಈ ಸಮಸ್ಯೆಗಳು ಸಾಮಾನ್ಯವಾಗಿ ಕಾಡುವುದು ಹೌದು. ಆದರೆ, ತೀರಾ ನೋವು ಅನುಭವಿಸಬಾರದು. ತಡೆಯಲು ಕಷ್ಟವೆನಿಸಿದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗುವುದೊಳಿತು.

ಮಹಿಳೆಗೆ ಸಂಬಂಧಿಸಿದಂ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!