ಪಿರಿಯಡ್ಸ್‌ನಲ್ಲಿ ಪೀಡಿಸೋ ನೋವಿಗೆ ತುಳಸಿ ಮದ್ದು

By Web Desk  |  First Published Aug 10, 2018, 4:16 PM IST

ಹೆರುವ, ಹೊರುವ ಹೆಣ್ಣಿಗೆ ಪಿರಿಯಡ್ಸ್ ಪ್ರಕೃತಿ ನೀಡಿರುವ ಗಿಫ್ಟ್. ಆದರೆ, ವಿವಿಧ ಕಾರಣಗಳಿಂದ ಈ ಸಮಯದಲ್ಲಿ ತಲೆದೋರುವ ಸಮಸ್ಯೆಗಳಿಂದ ಈ ಸಮಯವನ್ನು ತಲೆನೋವೆಂದು ಪರಿಗಣಿಸುವವರೇ ಹೆಚ್ಚು. ಪಿರಿಯಡ್ಸ್‌ ಟೈಮಲ್ಲ ಪೀಡಿಸೋ ನೋವಿಗೆ ಇಲ್ಲಿದೆ ಮನೆಮದ್ದು.


ಪಿರಿಯಡ್ಸ್ ಮಹಿಳೆಯರ ಜೀವನದ ಪ್ರಾಕೃತಿಕ ಭಾಗ.. ಆದರೂ ಆ ಸಮಯದಲ್ಲಿ ಉಂಟಾಗುವ ನೋವನ್ನು ತಡೆಯಲು ಮಾತ್ರ ಹಲವರು   ಹೆಣಗಾಡುತ್ತಾರೆ. ಪಿರಿಯಡ್ಸ್‌ ಟೈಮಲ್ಲಿ ಪರಿತಪಿಸಲಾಗದೇ ಪರದಾಡೋ ಪೆಣ್ಣು ವೈದ್ಯರ ಬಳಿ ಹೋಗುವ ಬದಲು, ಮನೆಯಲ್ಲಿಯೇ ಮಾಡಿಕೊಳ್ಳಬಹುದು ಔಷಧಿ. ಇಲ್ಲಿವೆ ಟಿಪ್ಸ್....

ಮತ್ತಷ್ಟು ಮನೆ ಮದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Latest Videos

ತರಕಾರಿ ಜ್ಯೂಸ್: ಹೆಚ್ಚು ಹೊಟ್ಟೆ ನೋವು ಕಾಣಿಸಿದರೆ ಕ್ಯಾರೆಟ್ ಅಥವಾ ಇತರೆ ಮಿಕ್ಸಡ್ ವೆಜಿಟೇಬಲ್ ಜ್ಯೂಸ್ ಮಾಡಿ ಸೇವಿಸಿ. 
ಅಲೋವೆರಾ: ಅಲೋವೆರಾ ಜ್ಯೂಸನ್ನು ಜೇನಿನ ಜೊತೆ ಬೆರೆಸಿ ಸೇವಿಸಿದರೆ, ಹೊಟ್ಟೆ ನೋವು ಹೇಳ ಹೆಸರಿಲ್ಲದಂತೆ ಓಡುತ್ತೆ. 
ತುಳಸಿ: ಪಿರಿಯಡ್ಸ್ ನೋವು ನಿವಾರಿಸುವಲ್ಲಿ ತುಳಸಿ ಬೆಸ್ಟ್. ಒಂದು ಕಪ್ ಬಿಸಿ ನೀರಿಗೆ ಒಂದು ಮುಷ್ಟಿ ತುಳಸಿ ಎಲೆ ಹಾಕಿ ಕುದಿಸಿ. ಅದನ್ನು ತಣಿಸಿ ಕುಡಿಯುತ್ತಿರಿ. ಇದರಿಂದ ಹೊಟ್ಟೆ ನೋವು ಹೋಗುತ್ತದೆ. 
ಎಳ್ಳು: ಎಳ್ಳನ್ನು ನೀರಿಗೆ ಹಾಕಿ ದಿನಕ್ಕೆರಡು ಬಾರಿ ಸೇವಿಸಿದರೆ, ನೋವು ಕಡಿಮೆಯಾಗುತ್ತದೆ. 
ಶುಂಠಿ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಅದನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಮುಟ್ಟಿನ ನೋವ ನುಂಗಬಹುದು.
ಪಪ್ಪಾಯಿ: ಕಾಯಿ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆ ನೋವಿಗೂ ಮದ್ದು, ಬ್ಲೀಡಿಂಗ್ ಸಹ ಕಡಿಮೆಯಾಗುತ್ತದೆ. 
ಲ್ಯಾವೆಂಡರ್ ಆಯಿಲ್: ಲ್ಯಾವೆಂಡರ್ ಎಣ್ಣೆಯನ್ನು ಹೊಟ್ಟೆ ಸುತ್ತ ಹಚ್ಚುವುದರಿಂದ ಹೊಟ್ಟೆ ನೋವು ಕೂಡಲೇ ಶಮನವಾಗುತ್ತದೆ. 
ಕೊತ್ತಂಬರಿ ಬೀಜ: ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ, ಕುಡಿಯುವುದೂ ದಿವ್ಯೌಷಧಿ.

click me!