ಕೊಳಕು ಟಾಯ್ಲೆಟ್ ಸೀಟನ್ನು ಉಜ್ಜಲು ಬ್ರಷ್ ಬೇಕಿಲ್ಲ..ವೈರಲ್ ಆಯ್ತು ಅಮೆರಿಕದ ಈ ವಿಧಾನ

Published : May 07, 2025, 04:03 PM ISTUpdated : May 07, 2025, 04:11 PM IST
ಕೊಳಕು ಟಾಯ್ಲೆಟ್ ಸೀಟನ್ನು ಉಜ್ಜಲು ಬ್ರಷ್ ಬೇಕಿಲ್ಲ..ವೈರಲ್ ಆಯ್ತು ಅಮೆರಿಕದ ಈ ವಿಧಾನ

ಸಾರಾಂಶ

ಶೌಚಾಲಯದ ಸ್ವಚ್ಛತೆ ಅತ್ಯಗತ್ಯ. ಕೊಳಕು ಸೀಟಿನಲ್ಲಿ ಬ್ಯಾಕ್ಟೀರಿಯಾ ಹರಡಿ ರೋಗಗಳನ್ನು ಉಂಟುಮಾಡಬಹುದು. ಪ್ರತಿ ಫ್ಲಶ್‌ನೊಂದಿಗೆ ಸೀಟು ಸ್ವಚ್ಛವಾಗಲು ವಿನೆಗರ್, ನಿಂಬೆಹಣ್ಣು ಕೂಡ ಪರಿಣಾಮಕಾರಿ.

ನೀವು ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ಟಾಯ್ಲೆಟ್ ಸೀಟ್ ಸ್ವಚ್ಛವಾಗಿ ಇಲ್ಲ ಅಂದ್ರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕಿಂತ ಶೌಚಾಲಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ. ಲಿವಿಂಗ್ ರೂಮ್ ಸ್ವಲ್ಪ ಕೊಳಕಾಗಿದ್ದರೂ ಪರವಾಗಿಲ್ಲ ಆದರೆ ಶೌಚಾಲಯ ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಎಂದು ಕೆಲವರು  ಹೇಳಿರುವುದನ್ನು ಕೇಳಿರಬೇಕು. ನಿಮ್ಮ ಶೌಚಾಲಯದ ಸೀಟು ಸ್ವಚ್ಛವಾಗಿಲ್ಲದಿದ್ದರೆ ಮನೆ ಶುಚಿಗೊಳಿಸುವಿಕೆ ಅಪೂರ್ಣ. ಒಂದು ಶೌಚಾಲಯದ ಸೀಟು ಇಡೀ ಕುಟುಂಬವನ್ನೇ ಅಸ್ವಸ್ಥಗೊಳಿಸಬಹುದು. ಸೀಟ್ ಕೊಳಕಾಗಿದ್ದರೆ, ಅದರ ಮೇಲೆ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದು ಅನೇಕ ರೀತಿಯ ಅಪಾಯಕಾರಿ ರೋಗಗಳು ಮತ್ತು ಸೋಂಕುಗಳನ್ನು ಹರಡಬಹುದು. 

ಆದ್ದರಿಂದ ಶೌಚಾಲಯದ ಸೀಟನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಡೀಪ್ ಆಗಿ ಸ್ವಚ್ಛಗೊಳಿಸಬೇಕು. ಆದರೆ ನಾವೆಲ್ಲಾ ಇಂದು  ಬಹಳ ಬ್ಯುಸಿ. ಹಾಗಾಗಿ ಕಮೋಡ್ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಕಷ್ಟಕರವಾಗುತ್ತದೆ. ಇದಕ್ಕಾಗಿಯೇ ಜನರು ದುಬಾರಿ ಕ್ಲೀನರ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈಗ ಇದೆಲ್ಲಾ ಬಿಡಿ..ಇಂದು ನಾವು ನಿಮಗೆ ಅಗ್ಗದ ಮತ್ತು ಸುಲಭವಾದ ಅಮೇರಿಕನ್ ವಿಧಾನವನ್ನು ಹೇಳುತ್ತೇವೆ. ಇದನ್ನ ಫಾಲೋ ಮಾಡಿದ್ರೆ ಸಾಕು, ನಿಮ್ಮ ಟಾಯ್ಲೆಟ್ ಸೀಟ್ ಹೊಸದರಂತೆ ಹೊಳೆಯುತ್ತದೆ. ಮತ್ತೇಕೆ ತಡ, ಟಾಯ್ಲೆಟ್ ಸೀಟ್ ಅನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯೋಣ...   

ಟಾಯ್ಲೆಟ್ ಸೀಟ್ ಸ್ವಚ್ಛಗೊಳಿಸಲು ಬೇಕಾಗುವ ವಸ್ತುಗಳು 
ಟೂತ್‌ಪೇಸ್ಟ್
ಕತ್ತರಿ ಅಥವಾ ಚಾಕು
ಅಡುಗೆ ಸೋಡಾ
ಸ್ನಾನದ ಸೋಪ್
ಅಲ್ಯೂಮಿನಿಯಂ ಫಾಯಿಲ್

ಅಲ್ಯೂಮಿನಿಯಂ ಫಾಯಿಲ್‌ ಸಹಕಾರಿ 
ಟಾಯ್ಲೆಟ್ ಸೀಟನ್ನು ಸ್ವಚ್ಛಗೊಳಿಸಲು ನೀವು ಮೊದಲು ಅಲ್ಯೂಮಿನಿಯಂ ಫಾಯಿಲ್‌ನ ಕೆಲವು ಉಂಡೆಗಳನ್ನು ಮಾಡಬೇಕು. ಮೊದಲಿಗೆ ಹಳೆಯ ಪಾತ್ರೆ ತೆಗೆದುಕೊಂಡು ಅದರಲ್ಲಿ ಟೂತ್‌ಪೇಸ್ಟ್ ನ ಪೇಸ್ಟ್ ಹಾಕಿ. ನಿಮ್ಮಲ್ಲಿ ಅವಧಿ ಮೀರಿದ ಟೂತ್‌ಪೇಸ್ಟ್ ಇದ್ದರೆ, ನೀವು ಅದನ್ನೂ ಬಳಸಬಹುದು. ಈಗ ಸ್ನಾನದ ಸೋಪನ್ನು ತುರಿಯುವ ಮಣೆಯ ಸಹಾಯದಿಂದ ತುರಿದುಕೊಂಡು ಪೇಸ್ಟ್ ಜೊತೆ ಸೇರಿಸಿ. ಈ ಮಿಶ್ರಣಕ್ಕೆ ಅಡುಗೆ ಸೋಡಾ ಕೂಡ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿದ ನಂತರ, ಅದಕ್ಕೆ ಚೆಂಡಿನ ಆಕಾರ ನೀಡಿ. ಈ ಚೆಂಡನ್ನು ಅಲ್ಯೂಮಿನಿಯಂ ಹಾಳೆಯ ಸಹಾಯದಿಂದ ಸುತ್ತಿ. ಅದು  ಚೆಂಡಿನಂತೆ ದುಂಡಾಗಿ ಇಡಬೇಕು. ನೀವು ಇಂತಹ ಹಲವಾರು ಸಣ್ಣ ಚೆಂಡುಗಳನ್ನು ಮಾಡಬಹುದು.   

ಟಾಯ್ಲೆಟ್ ಸೀಟ್ ಸ್ವಚ್ಛಗೊಳಿಸುವುದು ಹೇಗೆ?
ಈಗ ನೀವು ಸಿದ್ಧಪಡಿಸಿದ ಚೆಂಡುಗಳ ಮೇಲೆ ಚಾಕು ಅಥವಾ ಕತ್ತರಿ ಸಹಾಯದಿಂದ ರಂಧ್ರಗಳನ್ನು ಮಾಡಬೇಕು. ಈ ಎಲ್ಲಾ ಚೆಂಡುಗಳನ್ನು ಟಾಯ್ಲೆಟ್ ಸೀಟ್ ಟ್ಯಾಂಕ್‌ನಲ್ಲಿ ಹಾಕಿ ಬಿಡಿ. ಈ ರೀತಿಯಾಗಿ ಶುಚಿಗೊಳಿಸುವ ಲಿಕ್ವಿಡ್ ಸಿದ್ಧವಾಗುವುದಲ್ಲದೆ, ಟಾಯ್ಲೆಟ್ ಸೀಟ್ ಟ್ಯಾಂಕ್‌ನಲ್ಲಿ ಕರಗುತ್ತದೆ. ಇದಾದ ನಂತರ ನೀವು ಪ್ರತಿ ಬಾರಿ ಫ್ಲಶ್ ಮಾಡಿದಾಗ, ನಿಮ್ಮ ಟಾಯ್ಲೆಟ್ ಸೀಟ್ ಸ್ವಯಂಚಾಲಿತವಾಗಿ ಸ್ವಚ್ಛವಾಗುತ್ತದೆ. ಜೊತೆಗೆ ನಿಮ್ಮ ಟಾಯ್ಲೆಟ್ ಸೀಟ್ ಸ್ಕ್ರಬ್ ಮಾಡುವುದನ್ನು ತಪ್ಪಿಸುತ್ತದೆ. ಈ ರೀತಿಯಾಗಿ ನೀವು ನಿಮ್ಮ ಹಣ ಮತ್ತು ಸಮಯ ಎರಡನ್ನೂ ಉಳಿಸುತ್ತೀರಿ.   

ಶೌಚಾಲಯ ಸ್ವಚ್ಛಗೊಳಿಸುವ ತಂತ್ರಗಳು
* ಟಾಯ್ಲೆಟ್ ಸೀಟ್ ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾ ಮತ್ತು ವಿನೆಗರ್ ದ್ರಾವಣವನ್ನು ಸಹ ಬಳಸಬಹುದು.
* ಇದಲ್ಲದೆ, ನಿಂಬೆಹಣ್ಣನ್ನು ಟ್ಯಾಂಕ್‌ಗೆ ಹಾಕುವ ಮೂಲಕ ನೀವು ಶೌಚಾಲಯದ ವಾಸನೆಯನ್ನು ಸಹ ತೆಗೆದುಹಾಕಬಹುದು.
* ಕಮೋಡ್ ನ ಕೊಳಕು ಕಲೆಗಳನ್ನು ಸ್ವಚ್ಛಗೊಳಿಸಲು ನೀವು ನಿಂಬೆ, ಅಡುಗೆ ಸೋಡಾ ಮತ್ತು ಟೂತ್ಪೇಸ್ಟ್ ದ್ರಾವಣವನ್ನು ಸಹ ಬಳಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!