ಸ್ತನದ ಬೆಳವಣಿಗೆಗೆ ಸೋಂಪೆಂಬ ಮದ್ದು...!

By Suvarna NewsFirst Published Apr 19, 2019, 4:29 PM IST
Highlights

ಜೀರಿಗೆ ಕಾಳಿನಂತಿರುವ ಸೋಂಪನ್ನು ಊಟದ ನಂತರ ಮೌತ್ ಫ್ರೇಷರ್‌ನಂತೆ ಬಳಸುವುದು ಗೊತ್ತು. ಈ ಪುಟ್ಟ ಪುಟ್ಟು ಕಾಳಿನಲ್ಲಿ ಎಷ್ಟೆಲ್ಲಾ ಆರೋಗ್ಯವರ್ಧಕ ಗುಣಗಳಿವೆ ಎಂಬುವುದು ಗೊತ್ತಾ? ಏನೇನಿವೆ?

ಜೀರಿಗೆ ಕಾಳಿನಂತೆ ಸೋಂಪೂ ಆರೋಗ್ಯಕ್ಕೆ ತುಂಬಾ ಸಹಾಯಕ. ಭಾರತೀಯ ಜನರಿಗಂತೂ ಸೋಂಪೆಂದರೆ ವಿಶೇಷ ಪ್ರೀತಿ. ಊಟವಾದ ಬಳಿಕ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ. ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಸೋಂಪನ್ನು ಪ್ರತಿದಿನ ಅಡುಗೆಯಲ್ಲಿ ಬಳಸಿದರೆ ದೇಹಕ್ಕೆ ಬೇಕಾದ ಫೈಬರ್, ಪೊಟ್ಯಾಷಿಯಂ, ಸತು, ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಾಮಿನ್ ಸಿ, ಕಬ್ಬಿಣಾಂಶಗಳು ದೊರೆಯುತ್ತವೆ.

  • ಸೋಂಪು ಕಾಳು ಕೆಟ್ಟ ಉಸಿರಾಟ, ಬಾಯಿ ವಾಸನೆ ನಿವಾರಿಸುತ್ತದೆ. 
  • ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಜೊತೆಗೆ ಆ್ಯಸಿಡಿಟಿ, ಹೊಟ್ಟೆಯಲ್ಲಿ ತಳಮಳ ಮೊದಲಾದ ಸಮಸ್ಯೆಗಳೂ ದೂರವಾಗುತ್ತವೆ. 
  • ಫೈಬರ್ ಅಂಶವಿರುವ ಇದು ಸೇವಿಸಿದಲ್ಲಿ ಕೊಲೆಸ್ಟ್ರಾಲ್ ಲೆವೆಲ್ ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. 
  • ಇದರಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡ ನಿವಾರಿಸುತ್ತದೆ. 
  • ಸೋಂಪು ಕಾಳು ಚಹಾ ಮಾಡಿ ನಿಯಮಿತವಾಗಿ ಸೇವಿಸಿದರೆ ಟಾಕ್ಸಿನ್ ಅಂಶ ನಿವಾರಣೆಯಾಗಿ, ಮೂತ್ರ ಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು.
  • ಸೈನಸ್ ಸಮಸ್ಯೆಗೂ ಸೋಂಪು ಒಳ್ಳೆ ಮದ್ದು. 

ಸ್ತನ ಸೌಂದರ್ಯಕ್ಕೆ ಬ್ರಾ ತರುತ್ತೆ ಧಕ್ಕೆ...

  • ತಾಯಿಯ ಎದೆಹಾಲು ಹೆಚ್ಚಿಸುತ್ತದೆ. 
  • ಸ್ತನಗಳ ಬೆಳವಣಿಗೆಗೂ  ಸೋಂಪು ಕಾಳು ಸಹಾಯಕ. ಆದರೆ ಇದನ್ನು ಸೇವಿಸೋ ಮುನ್ನ ವೈದ್ಯರ ಸಲಹೆ ಕೇಳುವುದು ಉಚಿತ. 
click me!