ಪ್ರತಿರೋಧಕ ಶಕ್ತಿ ಹೆಚ್ಚಿಸೋ ಕಿಸ್ ಎಂಬ ಭಾವನಾತ್ಮಕ ಮದ್ದು

By Suvarna News  |  First Published Apr 19, 2019, 4:01 PM IST

ಪೇಮಿಗಳು, ದಾಂಪತ್ಯದಲ್ಲಿ ಮುತ್ತು ಮೋಡಿ ಮಾಡುವುದು ಎಲ್ಲರಿಗೂ ಗೊತ್ತು. ಆದರೆ, ಮಕ್ಕಳಿಗೂ ಪೋಷಕರು ನೀಡುವ ಈ ಮುತ್ತಿನಿಂದ ಪ್ರತಿರೋಧಕ ಶಕ್ತಿ ಹೆಚ್ಚುತ್ತೆ ಎಂಬ ಸತ್ಯ ಗೊತ್ತಾ?


ತಮ್ಮ ಮಗುವನ್ನು ಮುದ್ದಿಸುವುದು ಪ್ರತಿಯೊಬ್ಬ ತಾಯಿಗೆ ಅದಮ್ಯ ಸಂತೋಷವನ್ನು ನೀಡುತ್ತದೆ. ಅದು ಪ್ರಾಕೃತಿಕವಾಗಿ ನಡೆಯುವ ಕ್ರಿಯೆ. ಇದು ತಾಯಿ ತನ್ನ ಮಗುವನ್ನು ಪರಿಶುದ್ಧವಾಗಿ ಪ್ರೀತಿಸುವ ಒಂದು ಕ್ರಿಯೆ. ಕಿಸ್ ಮಾಡುವುದರಿಂದ ತಾಯಿ ಮತ್ತು ಮಗುವಿನ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಇದಕ್ಕೂ ಹೆಚ್ಚಾಗಿ ಮಗುವಿಗೆ ಕಿಸ್ ಮಾಡುವುದರಿಂದ ಮಗುವಿನ ಅರೋಗ್ಯ ಸಮಸ್ಯೆಯೂ ದೂರವಾಗುತ್ತದೆ. 

ಈ ಕಿಸ್ಸಿಂದ ವ್ಯಕ್ತಿತ್ವದ ಗುಟ್ಟೂ ಆಗುತ್ತೆ ರಟ್ಟು..

Tap to resize

Latest Videos

undefined

ಇಮ್ಯುನಿಟಿ ಹೆಚ್ಚುತ್ತದೆ: ನವಜಾತ ಮಗುವಿಗೆ ಕಿಸ್ ಮಾಡುವುದರಿಂದ ಮಗುವಿನ ತ್ವಚೆಯ ಮೇಲಿನ ಕೀಟಾಣುಗಳು ಕ್ಲೀನ್ ಆಗುತ್ತವೆ. ಅವು ಬಾಯಿ ಮೂಲಕ ಟಾನ್ಸಿಲ್‌ವರೆಗೆ ಹೋಗುತ್ತದೆ. ಅಲ್ಲಿ ಅದಕ್ಕೆ ಹೊಸ ಜನ್ಮ ಸಿಗುತ್ತದೆ. ಅಲ್ಲದೆ ರೋಗಗಳ ವಿರುದ್ಧ ಹೋರಾಡುವ ಕೀಟಾಣುವಾಗಿ ಮಾರ್ಪಾಡಾಗುತ್ತವೆ. ಇದು ಎದೆ ಹಾಲಿನ ಮೂಲಕ ಮಗುವಿನ ದೇಹ ಸೇರಿದಾಗ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

ಐಕ್ಯೂ ಲೆವೆಲ್ ಹೆಚ್ಚುತ್ತದೆ: ಮಗುವಿಗೆ ಕಿಸ್ ಮಾಡುವುದರಿಂದ ಮಗುವಿನ ಐಕ್ಯೂ ಲೆವೆಲ್ ಹೆಚ್ಚುತ್ತದೆ. ಮಗುವನ್ನು ಯಾವತ್ತೂ ಅಳಲು ಬಿಡಬೇಡಿ. ಇದರಿಂದ ಸಮಸ್ಯೆ ಸೃಷ್ಟಿಯಾಗಬಹುದು.

ಮನಸ್ಸಿನ ಶಾಂತತೆ: ಮಗುವನ್ನು ಗಟ್ಟಿಯಾಗಿ ಹಿಡಿದು ಕಿಸ್ ಮಾಡುವುದರಿಂದ ಮಗುವಿನ ಮನಸ್ಸು ಶಾಂತವಾಗುತ್ತದೆ. ಅಲ್ಲದೆ ಎಲ್ಲಾ ಸುಸ್ತೂ ದೂರವಾಗುತ್ತದೆ. 

ಸುರಕ್ಷಿತ ಭಾವ: ಮಕ್ಕಳಿಗೆ ಕಿಸ್ ಮಾಡುತ್ತಿದ್ದರೆ, ಅವರಲ್ಲಿ ಸುರಕ್ಷಿತ ಭಾವ ಮೂಡುತ್ತದೆ. ಇದರಿಂದ ಮಕ್ಕಳು ಸದಾ ಸಂತೋಷದಿಂದ ಇರುತ್ತವೆ. 

ಪ್ರೀತಿಯ ಅರ್ಥ: ಕಿಸ್ ಮಾಡುವುದರಿಂದ ಮಕ್ಕಳಿಗೆ ಪ್ರೀತಿ ಅಂದರೇನು ಅನ್ನೋದು ತಿಳಿಯುತ್ತದೆ. ಆದುದರಿಂದ ಮಕ್ಕಳಿಗೆ ಕಿಸ್ ಮಾಡುತ್ತಿರಿ. 

ಉತ್ತಮ ವ್ಯಕ್ತಿತ್ವ: ಯಾವ ಮಗು ಸುರಕ್ಷಿತ ಭಾವದಿಂದ ಬೆಳೆಯುತ್ತದೋ, ಪ್ರೀತ್ಯಾದರಗಳನ್ನು ಪಡೆಯುತ್ತವೋ ಅವುಗಳ ವ್ಯಕ್ತಿತ್ವವೂ ಉತ್ತಮಗೊಳ್ಳುತ್ತೆ. ಒಳ್ಳೆಯ ನಡತೆಯುಳ್ಳ ಮಗುವಾಗಿ ಮಾರ್ಪಾಡಾಗುತ್ತವೆ.

click me!