
ಕೆಲವು ಜನರು ಯಾರನ್ನಾದರೂ ನೋಡು ನೋಡುತ್ತಿದ್ದಂತೆಯೇ ಪ್ರೀತಿಯಲ್ಲಿ ಬೀಳುತ್ತಾರೆ. ಆ ವ್ಯಕ್ತಿಯನ್ನು ತಮ್ಮ ಹೃದಯದ ಅರಮನೆಯಲ್ಲಿ ನೆಲೆಗೊಳ್ಳುವಂತೆ ಮಾಡುತ್ತಾರೆ. ಇದಕ್ಕೇ ಹೇಳುವುದು ಮೊದಲ ನೋಟದ ಪ್ರೀತಿ ಎಂದು. ಅಷ್ಟಕ್ಕೂ ಈ ರೀತಿ ಹುಟ್ಟಿಕೊಳ್ಳುವ ಪ್ರೀತಿಯ ಆಯಸ್ಸೆಷ್ಟು?
ಮೊದಲ ನೋಟದಲ್ಲಿಯೇ ಪ್ರೀತಿ ಹುಟ್ಟಿದರೆ ಮೊದ ಮೊದಲು ಹೊಸ ತರದ ಖುಷಿ. ಆದರೆ ದಿನ ಕಳೆದಂತೆ ಅದು ತನ್ನ ಖದರ್ ಕಳೆದುಕೊಳ್ಳುತ್ತದೆ. ಮೊದಲಿಗೆ ಎಲ್ಲವೂ ಸುಂದರವೇ. ಆದರೆ ಸಮಯ ಕಳೆದಂತೆ ನಿಜ ಬಣ್ಣ ಬಯಲಾಗುತ್ತದೆ. ಇದರರ್ಥ ಮೊದಲ ನೋಟದಲ್ಲಿ ಉಂಟಾಗೋ ಪ್ರೀತಿ ಕೇವಲ ಆಕರ್ಷಣೆ ಅಷ್ಟೇ. ಯಾವಾಗ ಅದು ಕೇವಲ ಆಕರ್ಷಣೆಯಾಗಿರುತ್ತದೋ ಆಗ ಪ್ರೀತಿಯ ಹುಚ್ಚು ಇಳಿಯುತ್ತದೆ.
ಮೊದಲ ನೋಟದಲ್ಲೇ ಹುಡುಗಿ ಗಮನಿಸುವುದೇನು?
ಮೊದಲಿಗೆ ಪ್ರೀತಿಯೇ ಸರ್ವಸ್ವ ಎಂದೆನಿಸುತ್ತದೆ. ಆದರೆ ಸಮಯ ಕಳೆದ ಹಾಗೆ ಏನು ಬೇಕು, ಪ್ರೀತಿ ಅಂದರೇನು, ಯಾವುದು ನೈಜ ಪ್ರೀತಿ ಅನ್ನೋದು ತಿಳಿಯುತ್ತದೆ. ಮೊದಲ ನೋಟಕ್ಕೆ ಪ್ರೀತಿ ಉಂಟಾಗುತ್ತದೆ ಅಲ್ವಾ ಅವಾಗ ನಿಮ್ಮ ಹೃದಯ ಮತ್ತು ಮೆದುಳು ಏನೂ ಕೆಲಸ ಮಾಡೋದಿಲ್ಲ. ಯಾಕೆಂದರೆ ಅದು ಒಮ್ಮಿಂದೊಮ್ಮೆಲೆ ಆಗುವ ಕ್ರಿಯೆ. ಸಮಯ ಕಳೆದಂತೆ ನಿಮ್ಮ ಮನಸ್ಸಿಗೆ ಏನು ಬೇಕು ಎಂಬುವುದು ತಿಳಿಯುತ್ತದೆ. ನೋಡಿದ ಕೂಡಲೇ ಪ್ರೀತಿ ಹುಟ್ಟದರೆ ಸೀರಿಯಸ್ ಆಗಿ ತೆಗೆದುಕೊಳ್ಳ ಬೇಡಿ. ಕಾಯಿರಿ. ನಿಮ್ಮ ಮನಸಿಗೆ ಅದು ಪ್ರೀತಿ ಎಂದು ಅನಿಸಿದ ಮೇಲೆ ಮುಂದುವರಿಯಿರಿ.
ALL THE BEST ನಿಮ್ಮ ಪ್ರೀತಿಗೆ ಹಾಗೂ ಅದರ ಪರಿಗೆ....
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.