ಹೆಣ್ಣಿನ ದೈಹಿಕ ಸೌಂದರ್ಯ ಹೆಚ್ಚಿಸುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುತ್ತವೆ ಮೇಲಿನ ಒಳ ಉಡುಪು. ಆದರೆ, ವೈದ್ಯರು ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಕೆಲವು ಒಳ ಉಡುಪುಗಳು ಸ್ತನವನ್ನು ಫಿಟ್ ಆಗಿಡುವ ಬದಲು, ಕುಗ್ಗುವಂತೆ ಮಾಡುತ್ತದೆಯಂತೆ! 

ಈ ಅಧ್ಯಯನಕ್ಕೆ ಸುಮಾರು 18 ರಿಂದ 35 ವರ್ಷದ ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಸುಮಾರು ಒಂದು ವರ್ಷದ ಸಂಶೋಧನೆ ನಂತರ ಭ್ರಾ ಧರಿಸದೇ ಇದ್ದ ಮಹಿಳೆಯರ ಸ್ತನ ಸ್ಟಿಫ್ ಆಗಿದ್ದು, ಮುಂದಿನ ಹಲವಾರು ವರ್ಷಗಳು ಹಾಗೆಯೇ ಇದ್ದಿದ್ದು ಗಮನಕ್ಕೆ ಬಂತು. ಆದರೆ, ಬ್ರಾ ಧರಿಸಿದ ಮಹಿಳೆಯರ ಸ್ತನಗಳು ಫಿಟ್‌ನೆಸ್‌ ಕಳೆದುಕೊಂಡಿದ್ದವು. 

ಹಾಗಂಥ ಈ ಸಂಶೋಧನೆ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅನ್ವಯಿಸುವುದಿಲ್ಲ. ಅದಕ್ಕೆ ಹವಾಮಾನ, ಆರೋಗ್ಯ, ದೇಹ ಎಲ್ಲವಕ್ಕೂ ಸೂಟ್ ಆಗುವಂಥ ಬಟ್ಟೆಗಳನ್ನು ತೊಡಬೇಕು. ಸೈಜ್ ಬಗ್ಗೆ ಹೆಚ್ಚು ಅರಿವು ಅಗತ್ಯ. ಏನೋ ಚೆಂದ ಕಾಣಿಸಿಕೊಳ್ಳಲು ಹೋಗಿ, ಯಾವುದೇ ಎಡವಟ್ಟು ಆಗದಂತೆ ಇರಲಿ ನಿಮ್ಮ ಉಡುಪಿನ ಆಯ್ಕೆ. 

ಟೈಟ್ ಬ್ರಾ ಧರಿಸುವುದರಿಂದ ಬೆನ್ನು ನೋವು, ಭುಜ ನೋವಲ್ಲದೇ, ಸ್ತನದ ಸುತ್ತಲೂ ಬರೆ ಬರೆಯಂಥ ಮಾರ್ಕ್‌ಗಳೂ ಸೃಷ್ಟಿಯಾಗಬಹುದು. ಒಳ್ಳೆ ಕ್ವಾಲಿಟಿಯ, ತಕ್ಕ ಅಳತೆಯ ಬ್ರಾ ಧರಿಸುವುದು ಅಗತ್ಯ.