'ನಾಯಿ' ಪಾಡಲ್ಲ..ಲಕ್ಸುರಿ ಲೈಫ್‌, ಗೋಲ್ಡನ್ ರೆಟ್ರೀವರ್‌ನಿಂದ ಕೋಟಿ ಕೋಟಿ ಗಳಿಸ್ತಿದ್ದಾರೆ ದಂಪತಿ!

Published : May 25, 2023, 11:20 AM ISTUpdated : May 25, 2023, 11:26 AM IST
'ನಾಯಿ' ಪಾಡಲ್ಲ..ಲಕ್ಸುರಿ ಲೈಫ್‌, ಗೋಲ್ಡನ್ ರೆಟ್ರೀವರ್‌ನಿಂದ ಕೋಟಿ ಕೋಟಿ ಗಳಿಸ್ತಿದ್ದಾರೆ ದಂಪತಿ!

ಸಾರಾಂಶ

ಸದ್ಯ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಎಂಬುದು ಹೈಲೀ ಪೈಯ್ಡ್‌ ಜಾಬ್‌ಗಳಲ್ಲಿ ಒಂದಾಗಿದೆ. ವೀಡಿಯೋ ಮಾಡಿ ಪೋಸ್ಟ್ ಮಾಡುತ್ತಲೇ ತಿಂಗಳಿಗೆ ಲಕ್ಷಾಂತರ ರೂ. ಗಳಿಸುತ್ತಾರೆ. ಇಲ್ಲೊಬ್ಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ತನ್ನ ಗೋಲ್ಡನ್ ರೆಟ್ರೀವರ್ ನಾಯಿಯನ್ನು ಬಳಸಿ ವರ್ಷಕ್ಕೆ ಕೋಟಿ ಕೋಟಿ ಗಳಿಸ್ತಿದ್ದಾಳೆ.

ಸೋಷಿಯಲ್ ಮೀಡಿಯಾಗಳು ಬಂದಾಗಿನಿಂದ ಜನರು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ಗಳಲ್ಲಿ ಪೋಸ್ಟ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಜನರು ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಅದರಲ್ಲೂ ರೀಲ್ಸ್‌ ಟ್ರೆಂಡ್‌ ಬಂದಾಗಿನಿಂದ ಜನರು ಹೋದಲ್ಲಿ ಬಂದಲ್ಲಿ ವೀಡಿಯೋಗಳನ್ನು ಮಾಡಿ ಸಾಂಗ್ ಹಾಕಿ ವೈರಲ್ ಆಗುತ್ತಾರೆ. ಮಾತ್ರವಲ್ಲ ಟಿಕ್‌ಟಾಕ್‌ಗಳಲ್ಲೂ ವಿಡಿಯೋಗಳು ಬೇಗ ವೈರಲ್ ಆಗುತ್ತವೆ. ಅದರಲ್ಲೂ ಇತ್ತೀಚಿಗೆ ಕಂಟೆಂಟ್ ಕ್ರಿಯೇಟರ್‌ಗಳು ಹೊಸ ಹೊಸ ವಿಚಾರಗಳನ್ನು ವೀಡಿಯೋ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ.

ಗಾರ್ಡನಿಂಗ್‌, ಫ್ಯಾಶನ್‌, ಬ್ಯೂಟಿ ಟಿಪ್ಸ್‌, ಟೆಕ್ನಾಲಜಿ ಇನ್‌ಫಾರ್ಮೇಶನ್‌, ಮಕ್ಕಳ ಪೆಟ್ಸ್ ವೀಡಿಯೋ ಹಲವು ರೀತಿಯ ಕಂಟೆಂಟ್ ಕ್ರಿಯೇಟರ್ಸ್ ಇದ್ದಾರೆ. ನಾನಾ ರೀತಿಯಲ್ಲಿ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಹೀಗೆ ಪೋಸ್ಟ್ ಮಾಡೋ ವೀಡಿಯೋಗಳು ವೈರಲ್ ಆಗಿ ಸಾಕಷ್ಟು ಹಣ (Money) ಗಳಿಸಲು ಸಾಧ್ಯವಾಗುತ್ತದೆ. ಹಾಗೆಯೇ ಇಲ್ಲೊಬ್ಬ ಮಹಿಳೆ (Woman) ತನ್ನ ಗೋಲ್ಡನ್ ರೆಟ್ರೀವರ್ ನಾಯಿಯನ್ನ ಬಳಸಿ ವಾರ್ಷಿಕವಾಗಿ 8 ಕೋಟಿ ರೂ. ಗಳಿಸುತ್ತಿದ್ದಾಳೆ. 

Watch: ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಸೇವೆಗೆ ವಾಪಸಾದ ಪಂಜಾಬ್‌ ಶ್ವಾನದಳದ ಲ್ಯಾಬ್ರಡಾರ್‌!

ಗೋಲ್ಡನ್ ರೆಟ್ರೀವರ್‌ ನಾಯಿಯಿಂದ  8 ಕೋಟಿ ರೂ. ಆದಾಯ
ಪ್ರಭಾವಿಗಳ ಆರ್ಥಿಕ ಪರಿಸ್ಥಿತಿಯು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ (Social media users) ಆಗಾಗ್ಗೆ ಚರ್ಚೆಯಾಗುವ ವಿಷಯಗಳಲ್ಲಿ ಒಂದಾಗಿದೆ, ಇದು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಪರರನ್ನು ಆಶ್ಚರ್ಯಗೊಳಿಸುತ್ತದೆ. ಲಾಭದಾಯಕ ವೇತನದ ಕಾರಣದಿಂದಾಗಿ ಯುವಕರು ಗಮನಾರ್ಹ ಸಂಖ್ಯೆಯಲ್ಲಿ 'ಇನ್‌ಫ್ಲುಯೆನ್ಸರ್‌' ವೃತ್ತಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ಮಹಿಳೆಯ ಗೋಲ್ಡನ್ ರೆಟ್ರೀವರ್‌ ನಾಯಿಯಾದ (Dog) ಟಕರ್ ವರ್ಷಕ್ಕೆ ಅಂದಾಜು  8 ಕೋಟಿ ರೂ. ಮತ್ತು 28 ಲಕ್ಷ ಗಳಿಸುತ್ತದೆ.

ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ, ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಗಳ ಜಗತ್ತಿನಲ್ಲಿ ಟಕರ್ ನಂ. 1 ಆಗಿದೆ. ಎರಡು ವರ್ಷ ವಯಸ್ಸಿನಿಂದಲೂ ಪ್ರಾಯೋಜಿತ ಜಾಹೀರಾತುಗಳಿಂದ ವಾರ್ಷಿಕವಾಗಿ ಕೋಟಿ ಕೋಟಿ ಸಂಪಾದಿಸಿದೆ. ಯೂಟ್ಯೂಬ್ 30 ನಿಮಿಷದ ಟಕರ್ ಪೋಸ್ಟ್‌ಗೆ ಲಕ್ಷ ಲಕ್ಷ ಪಾವತಿಸುತ್ತದೆ. 

ದಿನವೂ ಲೋಕಲ್ ರೈಲಲ್ಲಿ ಸಂಚರಿಸುವ ಶ್ವಾನ: ವೀಡಿಯೋ ವೈರಲ್

ಪೇಜ್‌ ಕ್ರಿಯೇಟ್ ಮಾಡಿದ ಮೊದಲ ತಿಂಗಳೇ ವೀಡಿಯೊ ವೈರಲ್
31 ವರ್ಷದ ಮಹಿಳೆ ಬುಡ್ಜಿನ್ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಆಕೆಯ ಪತಿ ಮೈಕ್‌ ಟಕರ್‌ನ ಕಾಳಜಿ ವಹಿಸುತ್ತಾರೆ. ಇಬ್ಬರೂ ಟಕರ್ ಮತ್ತು ಅವರ ನಾಯಿಮರಿ ಟಾಡ್‌ನ ಪೂರ್ಣ ಸಮಯದ ನಿರ್ವಹಣೆಗಾಗಿ ತಮ್ಮ ಕೆಲಸವನ್ನು (Work) ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಅವರು ಜೂನ್ 2018ರಲ್ಲಿ ಟಕ್ಕರ್‌ಗೆ 8 ವಾರದ ವಯಸ್ಸಿದ್ದಾಗ ಪೋಟೋವನ್ನು ತೆಗೆದು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿ ಪೇಜ್ ಕ್ರಿಯೇಟ್ ಮಾಡಿದರು. ಪೇಜ್‌ ಕ್ರಿಯೇಟ್ ಮಾಡಿದ ಮೊದಲ ತಿಂಗಳೇ ಅವರ ಮೊದಲ ವೀಡಿಯೊ ವೈರಲ್ ಆಯಿತು.

'ನನ್ನಂತೆಯೇ ಅನೇಕ ಜನರು ನನ್ನ ನಾಯಿಯ ಬಗ್ಗೆ ಆಸಕ್ತಿ (Interest) ಹೊಂದಿದ್ದಾರೆ ಎಂದು ನಾನು ಭಾವಿಸಿದೆ. ಟಕ್ಕರ್‌ಗೆ 6 ತಿಂಗಳ ವಯಸ್ಸಾಗುವ ಹೊತ್ತಿಗೆ, ಪೇಜ್‌ 60,000 ಅನುಯಾಯಿಗಳನ್ನು (Followers) ಹೊಂದಿತ್ತು. ಟಕ್ಕರ್ ಈಗ ಟಿಕ್‌ಟಾಕ್‌ನಲ್ಲಿ 11.1 ಮಿಲಿಯನ್, ಯೂಟ್ಯೂಬ್‌ನಲ್ಲಿ 5.1 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 4.3 ಮಿಲಿಯನ್ ಸಾಮಾಜಿಕ ಮಾಧ್ಯಮದಲ್ಲಿ 25 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. Instagram ನಲ್ಲಿ 3.4 ಮಿಲಿಯನ್ ಮತ್ತು Twitter ನಲ್ಲಿ 62,400 ಮಂದಿ ಪೇಜ್‌ನ್ನು ಫಾಲೋ ಮಾಡುತ್ತಿದ್ದಾರೆ.

ಕುಡಿದು ಬಿದ್ದ ಮಾಲೀಕನ ಟಚ್ ಮಾಡೋಕು ಬಿಡದ ನಾಯಿ: ಫೋಟೋಸ್ ವೈರಲ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana