ಮನೆ ಹುಡುಕಿ ನೋಡು, ಬಾಡಿಗೆ ಪಡೆದು ನೋಡು; ಯಾರಿಗೆ ಹೇಳೋಣ ಬ್ಯಾಚುಲರ್ಸ್ ಪ್ಲಾಬ್ಲಂ!

By Suvarna NewsFirst Published Apr 28, 2023, 12:53 PM IST
Highlights

ನಿಮ್ಮ ಅಂಕ ಎಷ್ಟು ಅನ್ನೋದು ಮುಖ್ಯವಲ್ಲ. ಜೀವನದಲ್ಲಿನ ಗುರಿ, ಅದನ್ನು ಸಾಧಿಸಲು ಶ್ರಮ , ಸವಾಲು ಎದುರಿಸುವುದು ಇವೆಲ್ಲ ಮುಖ್ಯ ಎಂದು ಯಶಸ್ವಿ ಉದ್ಯಮಿಗಳು, ಕ್ರೀಡಾಪಟುಗಳು, ಚಿಂತಕರು, ವಿಜ್ಞಾನಿಗಳು ಪದೇ ಪದೆ ಹೇಳುತ್ತಲೇ ಇರುತ್ತಾರೆ. ಆದರೆ ಬೆಂಗಳೂರಿನಲ್ಲಿ ನೀವು ಮನೆ ಬಾಡಿಗೆ ಪಡೆಯಲು ನಿಮ್ಮ ಅಂಕ ಮುಖ್ಯ. ಇಲ್ಲೊಬ್ಬ ಶೇ.75 ರಷ್ಟು ಅಂಕಪಡೆದರೂ ಕಡಿಮೆ ಎಂದು ಬಾಡಿಗೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

ಬೆಂಗಳೂರು(ಏ.28): ಉದ್ಯಾನ ನಗರಿಯಲ್ಲಿ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಎಲ್ಲಾ ಶ್ರಮಪಟ್ಟು ಮನೆ ಹುಡುಕಿ ನಿಮಗೆ ಒಕೆಯಾದರೂ, ಮಾಲೀಕನ ಬಯಸುವ ಗುಣ, ನಡತೆ, ವಿದ್ಯಭ್ಯಾಸ, ಕೆಲಸ ನಿಮ್ಮಲ್ಲಿರಬೇಕು. ಇವೆಲ್ಲಾ ಒಕೆಯಾದರೆ ಮಾಲೀಕ ಹೇಳುವ ಅಡ್ವಾನ್ಸ್ ಹಾಗೂ ಬಾಡಿಗೆ ನೀಡಿ ಮನೆ ಪಡೆದುಕೊಳ್ಳಬಹುದು. ಇದೀಗ ಬೆಂಗಳೂರಿನ ಮನೆ ಹುಡುವ ಸಂಕಷ್ಟ ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ. ಕಾರಣ ಇಲ್ಲೊಬ್ಬ ಹರಸಾಹಸ ಪಟ್ಟು ಮನ ಹುಡುಕಿದ್ದಾನೆ. ಆದರೆ ಒಂದೂ ಮನೆಯೂ ಸಿಕ್ಕಿಲ್ಲ. ಕೊನೆಗೆ ಬ್ರೋಕರ್ ಮೂಲಕ ಮನೆಗೆ ಹುಡುವ ಕೆಲಸ ಶುರು ಮಾಡಿದ್ದಾನೆ. ಬ್ರೋಕರ್ ತೋರಿಸಿದ ಫೋಟೋ ನೋಡಿ ಒಂದು ಮನೆ ಒಕೆ ಮಾಡಿದ್ದಾನೆ. ಆದರೆ ಮನೆ ಮಾಲೀಕ ಮಾತ್ರ ಒಕೆಯಾಗಿಲ್ಲ. ಕಾರಣ ಈತನ ಸಂಪೂರ್ಣ ಜಾತಕ ಪಡೆದುಕೊಂಡ ಮಾಲೀಕ, ಪಿಯುಸಿಯಲ್ಲಿ ಕೇವಲ ಶೇ.75 ರಷ್ಟು ಅಂಕ ಇದೆ ಎಂದು ರಿಜೆಕ್ಟ್ ಮಾಡಿದ್ದಾನೆ. 

ಟ್ವಿಟರ್‌ನಲ್ಲಿ ಶುಭ್ ಅನ್ನೋ ವ್ಯಕ್ತಿ ಈ ಕುರಿತು ಮಹತ್ವದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಅಂಕಗಳು ನಿಮ್ಮ ಭವಿಷ್ಯ ರೂಪಿಸುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಮನೆ ಪಡೆಯಲು ಅಂಕ ಬೇಕೆ ಬೇಕು ಎಂದು ಹೇಳಿಕೊಂಡಿದ್ದಾನೆ. ಈತ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ ಹಲವು ರೋಚಕ ಮಾಹಿತಿ ಬಹಿರಂಗವಾಗಿದೆ. ಬ್ರೋಕರ್ ಹಾಗೂ ಮನೆ ಹುಡುಕುತ್ತಿದ್ದ ವ್ಯಕ್ತಿ ಯೋಗೇಶ್ ನಡುವಿನ ಮಾತುಕತೆಯ ಸ್ಕ್ರೀನ್ ಶಾಟ್ ವಿವರ ಇಲ್ಲಿದೆ.

Latest Videos

ಬೆಂಗಳೂರಿನಲ್ಲಿ ಬ್ಯಾಚುಲರ್ ಬಿಟ್ಟು ಹೋದ ಫ್ಲಾಟ್ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ನೋಡಿ!

ಯೋಗೇಶ್ ನಿಮ್ಮ ಫ್ರೋಫೈಲ್‌ಗೆ ಮನೆ ನೀಡಲು ಮಾಲೀಕರು ಸಮ್ಮತಿಸಿದ್ದಾರೆ ಎಂದು ಬ್ರೋಕರ್ ಮೆಸೇಜ್ ಮಾಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿದ ಯೋಗೇಶ್ ಬಳಿ, ನಿಮ್ಮ ಲಿಂಕ್ಡ್ ಇನ್ ಪ್ರೋಫೈಲ್, ಟ್ವಿಟರ್ ಪ್ರೋಫೈಲ್, ಕಂಪನಿಗೆ ಸೇರಿದ ದಾಖಲೆ ಪತ್ರ, 10 ಮತ್ತೆ ಪಿಯುಸಿಯ ಫಲಿತಾಂಶ ಸರ್ಟಿಫಿಕೇಟ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ದಾಖಲೆಗಳನ್ನು ನೀಡಿ ಎಂದು ಸೂಚಿಸಿದ್ದಾನೆ. ಈ ದಾಖಲೆಗಳನ್ನು ಮಾಲೀಕರು ಕೇಳುತ್ತಿದ್ದಾರೆ ಎಂದಿದ್ದಾರೆ.

ಬೆಳಗ್ಗೆ ಕಳುಹಿಸುತ್ತೇನೆ, ಇದರ ಅವಶ್ಯಕತೆ ಇದೆಯಾ ಎಂದು ಕೇಳಿದ್ದಾನೆ. ಇತ್ತ ಬ್ರೋಕರ್ ಮತ್ತೊಂದು ಬೇಡಿಕೆ ಮುಂದಿಟ್ಟಿದ್ದಾನೆ. ನಿಮ್ಮಬಗ್ಗೆ 150 ರಿದಂ 200 ಪದಗಳಲ್ಲಿ ಬರೆದು ಕಳುಹಿಸಿ ಎಂದಿದ್ದಾನೆ. ಮಾಲೀಕ ಕೇಳಿದ ಎಲ್ಲಾ ದಾಖಲೆ, ಬರಹ, ಅಂಕ ಪಟ್ಟಿಯನ್ನು ನೀಡಿದ ಬಳಿಕ ಬ್ರೋಕರ್ ಮೆಸೇಜ್ ನೋಡಿ ಆಘಾತವಾಗಿದೆ. ನೀವು ಕಳುಹಿಸಿದ ಎಲ್ಲಾ ದಾಖಲೆ, ಬರಹ, ಅಂಕಗಳನ್ನು ಮಾಲೀಕರಿಗೆ ಕಳುಹಿಸಿದ್ದೆ. ಆದರೆ ಮಾಲೀಕರು ನಿಮ್ಮ ಪ್ರೋಫೈಲ್ ರಿಜೆಕ್ಟ್ ಮಾಡಿದ್ದಾರೆ. ಕಾರಣ ನಿಮ್ಮ ಪಿಯುಸಿ ಅಂಕ ಶೇಕಡಾ 75. ಮಾಲೀಕರು ಶೇಕಡಾ 90 ಅಥವಾ ಅದಕ್ಕಿಂತ ಮೇಲೆ ಅಂಕಪಡೆದವರಿಗೆ ಬಾಡಿಗೆ ನೀಡುತ್ತಾರೆ ಎಂದು ಬ್ರೋಕರ್ ಮೆಸೇಜ್ ಮಾಡಿದ್ದಾನೆ.

ಬೆಂಗ್ಳೂರಲ್ಲಿ ಲೂಟಿಗಿಳಿದ ಮನೆ ಮಾಲೀಕರು, ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತಿದಾರೆ ಬಾಡಿಗೆದಾರರು!

ಈ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಪ್ರವೇಶ ಪರೀಕ್ಷೆ ಬರೆಯಬೇಕು ಎಂದಿದ್ದಾರೆ. ನೀವು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತೀರಿ ಎಂದು ತಿಳಿದರೆ ನಿಮ್ಮ ಮನೆಕೆಲಸದವರು 30 ಸಾವಿರ ವೇತನ ಕೇಳುತ್ತಾರೆ. ನೀವು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅವರಿಗೆ ಅರಿವಾದರೆ 9 ಸಾವಿರಕ್ಕೆ ಇಳಿಸುತ್ತಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದಕ್ಕಿಂತ ಲೋನ್ ಮಾಡಿ ಮನೆ ಕಟ್ಟುವುದೇ ಲೇಸು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು ಅನ್ನೋ ಮಾತು ಈಗ ಬದಲಾಗಿದೆ. ಮನೆ ಹುಡುಕಿ ನೋಡು, ಬಾಡಿಗೆ ಪಡೆದು ನೋಡು ಎಂದಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

click me!