2050ಕ್ಕೆ ಬೆಂಗಳೂರು ನಗರದಲ್ಲಿ ನೀರೇ ಇರಲ್ವಾ..ತಜ್ಞರು ಹೇಳಿದ್ದೇನು?

By Vinutha Perla  |  First Published Apr 28, 2023, 10:42 AM IST

ಬೇಸಿಗೆ ಶುರುವಾಗಿದೆ. ಜೊತೆಯಲ್ಲೇ ನೀರಿಗೆ ಹಾಹಾಕಾರ ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೆಂಗಳೂರು ಸಹ ಇದರಲ್ಲಿ ಮುಂಚೂಣಿಯಲ್ಲಿದೆ. ಶಾಕಿಂಗ್ ವಿಚಾರವೆಂದರೆ 2050ರಲ್ಲಿ ಬೆಂಗಳೂರು 514 ಎಂಎಲ್‌ಡಿ ನೀರಿನ ಕೊರತೆಯನ್ನು ಎದುರಿಸಲಿದೆಯಂತೆ. ಈ ಬಗ್ಗೆ ತಜ್ಞರೇ ಮಾಹಿತಿ ನೀಡಿದ್ದಾರೆ. 


ಮನುಷ್ಯನ ಜೀವನಕ್ಕೆ ನೀರೇ ಆಧಾರ. ಜೀವಜಲವಿಲ್ಲದೆ ಮನುಷ್ಯನಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸರ ನಾಶ, ವಾಯು ಮಾಲಿನ್ಯ, ಮಳೆ ಕೊರತೆಯಿಂದ ನೀರಿನ ತತ್ವಾರ ಎದುರಾಗುತ್ತಿದೆ. ಬೇಸಿಗೆ ಶುರುವಾಗುವ ಮೊದಲೇ ನೀರಿನ ಕೊರತೆ ಕಾಡತೊಡಗುತ್ತದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ನೀರಿನ ಸಮಸ್ಯೆಯನ್ನು ಎದುರಿಸುತ್ತಾರೆ. ಕಿಲೋ ಮೀಟರ್‌ಗಟ್ಟಲೆ ದೂರ ನಡೆದುಕೊಂಡು ಹೋಗಿ ನೀರನ್ನು ಸಂಗ್ರಹಿಸಿ ತರುತ್ತಾರೆ. ಬೆಂಗಳೂರಿನಲ್ಲಿಯೂ ನೀರಿನ ಸಮಸ್ಯೆ ಹೊಸದೇನಲ್ಲ. ಶಾಕಿಂಗ್ ವಿಚಾರವೆಂದರೆ 2050ರಲ್ಲಿ ಬೆಂಗಳೂರು 514 ಎಂಎಲ್‌ಡಿ ನೀರಿನ ಕೊರತೆಯನ್ನು ಎದುರಿಸಲಿದೆಯಂತೆ. ಈ ಬಗ್ಗೆ ತಜ್ಞರೇ ಮಾಹಿತಿ ನೀಡಿದ್ದಾರೆ. 

2050 ರಲ್ಲಿ ತಾಜಾ ನೀರಿನ (Fresh water) ಭಾರತದ ವಾರ್ಷಿಕ ಬೇಡಿಕೆಯು 1,180 ದಶಲಕ್ಷ ಘನ ಮೀಟರ್‌ಗಳನ್ನು ಮುಟ್ಟುವ ನಿರೀಕ್ಷೆಯಿದೆ, ಆದರೆ ಪ್ರಸ್ತುತ ಪೂರೈಕೆಯು ಕೇವಲ 1,126 MCM ಆಗಿದೆ ಎಂದು ತಿಳಿದುಬಂದಿದೆ.  ಬೆಂಗಳೂರು ನಗರದ ಪರಿಸ್ಥಿತಿಯೂ ಇದಕ್ಕಿಂತ ವಿಭಿನ್ನವಾಗಿಲ್ಲ. ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ (ಐಪಿಎ) ಆಯೋಜಿಸಿದ್ದ 'ಪ್ಲಂಬೆಕ್ಸ್ ಇಂಡಿಯಾ 2023'ರ ನೀರು, ನೈರ್ಮಲ್ಯ ಮತ್ತು ಕೊಳಾಯಿ ಉತ್ಪನ್ನಗಳ ಪ್ರದರ್ಶನದಲ್ಲಿ, ಐಟಿ ಸಿಟಿಯು 2050 ರಲ್ಲಿ ದಿನಕ್ಕೆ 514 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ತಜ್ಞರು (Experts) ಹೇಳಿದ್ದಾರೆ.

Tap to resize

Latest Videos

ವಿಶ್ವದ ದುಬಾರಿ ನೀರಿನ ಬಾಟಲ್‌ನ ಬೆಲೆ 45 ಲಕ್ಷ, ಅಂಥದ್ದೇನಿರುತ್ತೆ ಈ ನೀರಿನಲ್ಲಿ?

BWSSB ಕಾವೇರಿ ನದಿಯಿಂದ 1,470 MLD ಶುದ್ಧ ನೀರನ್ನು ಪಂಪ್ ಮಾಡುತ್ತದೆ. ಆದರೆ ಪ್ರಸ್ತುತ ಬೇಡಿಕೆ 2,100 MLD ಆಗಿದೆ. 630 ಎಂಎಲ್‌ಗಳಷ್ಟು ನೀರನ್ನು ಬೋರ್‌ವೆಲ್ ಸಂಪರ್ಕಗಳು ಮತ್ತು ಟ್ಯಾಂಕರ್ ಪೂರೈಕೆಯಿಂದ (Supply) ತುಂಬಿಸಲಾಗುತ್ತಿದೆ.

ರಾಷ್ಟ್ರೀಯ ಜಲ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ ಅರ್ಚನಾ ವರ್ಮಾ ಈ ಬಗ್ಗೆ ಮಾಹಿತಿ (Information) ನೀಡಿದ್ದಾರೆ. 'ಉತ್ತಮ ಕೊಳಾಯಿ ಮತ್ತು ಕಡಿಮೆ ನೀರು ಹರಿವಿನ ಕಾರ್ಯವಿಧಾನಗಳ ಮೂಲಕ ನೀರನ್ನು ಉಳಿಸಬಹುದು. ಇಲ್ಲಿ IPA ನಂತಹ ಸಂಘಗಳು ಜಾಗೃತಿ (Awareness) ಮೂಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಪ್ರಸ್ತುತ ಭಾರತದಲ್ಲಿ, ಪ್ಲಂಬಿಂಗ್ ಮತ್ತು ಸ್ಯಾನಿಟರಿವೇರ್ ಮಾರುಕಟ್ಟೆಯನ್ನು 50,000 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಆದರೆ ಕಡಿಮೆ ಹರಿವಿನ ನೀರು-ಉಳಿತಾಯ ಉಪಕರಣಗಳು ಕೇವಲ 5% ಅನ್ನು ರೂಪಿಸುತ್ತವೆ' ಎಂದು ತಿಳಿಸಿದ್ದಾರೆ.

RO ನೀರು ಕುಡಿತಿದೀರಾ? ರಕ್ತಹೀನತೆಗೆ ಕಾರಣವಾಗಬಹುದು ಎಚ್ಚರ

IPAಯ ರಾಷ್ಟ್ರೀಯ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ಮಾತನಾಡಿ, ;ಹಲವು ನಗರಗಳಲ್ಲಿ ನೀರಿನ ಮಟ್ಟ ವೇಗವಾಗಿ ಖಾಲಿಯಾಗುತ್ತಿವೆ. ಇಂದು, ಬೆಂಗಳೂರಿನ ಸರಾಸರಿ ನೀರಿನ ಮಟ್ಟವು ಸುಮಾರು 800 ಅಡಿಗಳಷ್ಟಿದೆ. ಸುಮಾರು 30 ವರ್ಷಗಳ ಹಿಂದೆ ಇದು ಕೇವಲ 100 ಅಡಿ ಇತ್ತು. 2025 ರ ವೇಳೆಗೆ ನೀರಿನ ಬೇಡಿಕೆ 2,314 MLDಗೆ ಏರಿಕೆಯಾಗಲಿದೆ' ಎಂದು ಮಾಹಿತಿ ನೀಡಿದ್ದಾರೆ.

click me!