Latest Videos

ಆಮೆಯಂತೆ ಮಗುವಿನ ಬೆನ್ನ ಮೇಲಿದೆ ಚಿಪ್ಪು, ಇದೆಂಥಾ ವಿಚಿತ್ರ ಕಾಯಿಲೆ!

By Vinutha PerlaFirst Published Apr 28, 2023, 11:49 AM IST
Highlights

ಕಾಲ ಬದಲಾದಂತೆ ಚಿತ್ರ-ವಿಚಿತ್ರಗಳು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಹಾಗೆಯೇ ಇಲ್ಲೊಂದು ಮಗುವಿನ ಬೆನ್ನಿನ ಮೇಲೆ ಚಿಪ್ಪು ಬೆಳೆದಿದೆ. ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಅಪರೂಪದ ಚರ್ಮದ ಕಾಯಿಲೆಯಿಂದ ಮಗು ಚಿಪ್ಪಿನೊಂದಿಗೆ ಜನಿಸಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಫ್ಲೋರಿಡಾದ ಕ್ಲಿಯರ್‌ವಾಟರ್‌ನ ಜೇಮ್ಸ್ ಮೆಕಲಮ್ ಎಂಬ ಮಗು ಹುಟ್ಟಿನಿಂದ ಈ ಸಮಸ್ಯೆಯಿಂದ ಬಳಲುತ್ತಿದೆ. ಮೆಲನೊಸೈಟಿಕ್ ನೆವಸ್‌ ಎಂಬ ಅಪರೂಪದ ಸ್ಥಿತಿಯು ಅಸಹಜವಾಗಿ ಗಾಢವಾದ, ಕ್ಯಾನ್ಸರ್‌ರಹಿತ ಚರ್ಮದ ಪ್ಯಾಚ್ ಹೊರಬರಲು ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ.

ಜೇಮ್ಸ್‌ನ ಹೆತ್ತವರು ಆರಂಭದಲ್ಲಿ ಮಗುವಿನ (Baby) ಬೆನ್ನಿನ ಮೇಲಿದ್ದ ಚಿಪ್ಪನ್ನು (Shell) ಜನ್ಮ ಗುರುತು ಎಂದು ಭಾವಿಸಿದ್ದರು. 'ಆದರೆ ಮಗುವಿಗೆ ಎರಡು ವರ್ಷವಾಗುವಷ್ಟರಲ್ಲಿ ಇದು ಮತ್ತಷ್ಟು ಬೆಳೆಯಿತು. ದಪ್ಪವಾಗಿ ಗಡ್ಡೆಯ ರೂಪವನ್ನು ಪಡೆದುಕೊಂಡಿತು. ಬೆನ್ನಿನ ಮೇಲೆ ದಪ್ಪದಾದ ಚಿಪ್ಪು ಇದ್ದ ಕಾರಣ ಅವನನ್ನು ಮಲಗಿಸಲು ಸಹ ಸಾಧ್ಯವಾಗುತ್ತಿರಲ್ಲಿಲ್ಲ. ಕಷ್ಟಪಟ್ಟು ಒಂದು ಬದಿಯಲ್ಲಿ ಮಲಗಿಸುತ್ತಿದ್ದೆವು' ಎಂದು ಲಿಟಲ್ ನಿಂಜಾ ಟರ್ಟಲ್ ಪೋಷಕರು (Parents) ತಿಳಿಸಿದ್ದಾರೆ. ಚಿಪ್ಪು ಬೆಳವಣಿಗೆಯ ಹಂತದಲ್ಲಿ ತುರಿಕೆಗೆ ಸಹ ಕಾರಣವಾಗಿತ್ತು ಹೀಗಾಗಿ ಜೇಮ್ಸ್ ತನ್ನ ಬೆನ್ನನ್ನು ಪದೇ ಪದೇ ಕೆರೆದುಕೊಳ್ಳುತ್ತಿದ್ದನು ಎಂದಿದ್ದಾರೆ.

ಅಬ್ಬಬ್ಬಾ..ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೆ ಒದ್ದಾಡಿದ ಮಹಿಳೆ!

ಹುಟ್ಟಿನಿಂದಲೇ ಮಗುವಿನ ಮೈ ಮೇಲಿತ್ತು ಚಿಪ್ಪು, ಗುಣಪಡಿಸಲು ಎರಡು ಸರ್ಜರಿ
ಮಗುವಿನ ಈ ಅಪರೂಪದ ಕಾಯಿಲೆಯನ್ನು  ((Rare disease) ಗುಣಪಡಿಸಲು ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು (Surgery) ನಡೆಸಲಾಯಿತು. ಮೊದಲನೆಯದು ಅವನು ಆರು ತಿಂಗಳ ಮಗುವಾಗಿದ್ದಾಗ ಮತ್ತು ಎರಡನೆಯದು ಮೂರು ತಿಂಗಳ ನಂತರ ನಡೆಯಿತು. ಶೆಲ್‌ನ ಹೆಚ್ಚಿನ ಭಾಗವನ್ನು ತೆಗೆದುಹಾಕಲು. ವೈದ್ಯರು ನೆವಸ್ ಅನ್ನು ಅವನ ಬೆನ್ನಿನಿಂದ ಆರೋಗ್ಯಕರ ಚರ್ಮ (Skin)ದೊಂದಿಗೆ ಬದಲಾಯಿಸಿದರು.

ಚಿಕಿತ್ಸೆಯ ನಂತರ ಜೇಮ್ಸ್‌ನ ಸ್ಥಿತಿ ಸಂಪೂರ್ಣವಾಗಿ ಸುಧಾರಣೆಯಾಯಿತು. 'ಸರ್ಜರಿಯ ನಂತರ ನಾವು ತುಂಬಾ ಸಂತೋಷಗೊಂಡಿದ್ದೇವೆ. ಜೇಮ್ಸ್‌ ಈಗ ಯಾವುದೇ ಅಡ್ಡಿಯಿಲ್ಲದೆ ಆರಾಮವಾಗಿ ಮಲಗಲು ಸಾಧ್ಯವಾಗುತ್ತಿದೆ' ಎಂದು ಪೋಷಕರು ತಿಳಿಸಿದ್ದಾರೆ. ಜೇಮ್ಸ್ ಅವರ ಪೋಷಕರು ವೈದ್ಯರು ಆಗಸ್ಟ್‌ನಲ್ಲಿ ಮಗುವಿನ ಎರಡನೇ ಹುಟ್ಟುಹಬ್ಬದ ವೇಳೆಗೆ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ.

Health Tips : ಕುಡಿದ ನಶೆಯಂತೆ ಏರುವ ಈ ಖಾಯಿಲೆ ಯಾವ್ದು ಗೊತ್ತಾ?

ಈಕೆಗೆ ಮೂರು ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ಲೋಕೆ ಆಗಲ್ಲ
ಅಮೇರಿಕನ್ ಮಹಿಳೆಯೊಬ್ಬರು ತನಗೆ ಗುರುತ್ವಾಕರ್ಷಣೆಗೆ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದಾಳೆ. ಇದರಿಂದಾಗಿ ಅವಳು ದಿನಕ್ಕೆ 23 ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆಯುತ್ತಾಳೆ ಮತ್ತು ಕೇವಲ 3 ನಿಮಿಷಗಳ ಕಾಲ ಭೂಮಿಯ ಮೇಲೆ ನಿಲ್ಲಲು ಸಾಧ್ಯವಾಗುತ್ತದೆ. 28 ವರ್ಷದ ಈ ಮಹಿಳೆಯ ಹೆಸರು ಲಿಂಡ್ಸೆ ಜಾನ್ಸನ್. ಆಶ್ಚರ್ಯಕರ ವಿಷಯವೆಂದರೆ ಈ ಮಹಿಳೆ ದಿನಕ್ಕೆ 10 ಬಾರಿ ಮೂರ್ಛೆ ಹೋಗುತ್ತಾಳೆ ಮತ್ತು ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲಲು ಸಾಧ್ಯವಿಲ್ಲ. ಈ ಮಹಿಳೆ ಪೋಸ್ಚುರಲ್ ಟಾಕಿಕಾರ್ಡಿಯಾ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ಈ ಅಮೇರಿಕನ್ ಮಹಿಳೆಗೆ (Woman) ಫೆಬ್ರವರಿ 2022 ರಲ್ಲಿ ಪೋಸ್ಚುರಲ್ ಟಾಕಿಕಾರ್ಡಿಯಾ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ಈ ರೋಗವನ್ನು POTS ಎಂದೂ ಕರೆಯುತ್ತಾರೆ. ರೋಗಿಯು ನಿಂತಿರುವಾಗ ಅಥವಾ ಕುಳಿತಾಗ ಹೃದಯವು (Heart) ಅಸಹಜವಾಗಿ ಬಡಿಯುವ ರೋಗ ಇದಾಗಿದೆ ಮತ್ತು ಅದಕ್ಕಾಗಿಯೇ ರೋಗಿಯು ಸುಮ್ಮನೆ ಮಲಗಲು ಬಯಸುತ್ತಾಳೆ. ನನಗೆ ಗುರುತ್ವಾಕರ್ಷಣೆಗೆ ಅಲರ್ಜಿ ಇದೆ ಎಂದು ಮಹಿಳೆ ಹೇಳಿದ್ದಾರೆ. ಇದು ವಿಚಿತ್ರವೆನಿಸುತ್ತದೆ ಆದರೆ ಇದು ನಿಜ. ಮೂರ್ಛೆ ಹೋಗದೆ ಅಥವಾ ಅನಾರೋಗ್ಯಕ್ಕೆ ಒಳಗಾಗದೆ ನಾನು ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲಲು ಸಾಧ್ಯವಿಲ್ಲ. ನಾನು ಮಲಗಲು ಇಷ್ಟಪಡುತ್ತೇನೆ. ನಾನು ಇಡೀ ದಿನ ಹಾಸಿಗೆಯಲ್ಲಿ ಇರುತ್ತೇನೆ. ದಿನಕ್ಕೆ 23 ಗಂಟೆಗಳವರೆಗೆ ಹೀಗೆ ಮಲಗಿರುತ್ತೇನೆ ಎಂದು ಮಹಿಳೆ ಹೇಳಿದ್ದಾಳೆ.

click me!