ಪಿರಿಯಡ್ಸ್‌ ಹೊಟ್ಟೆ ನೋವು, ಮಧುಮೇಹಕ್ಕೂ ಮೆಂತೆ ಮದ್ದು!

By Suvarna NewsFirst Published Jul 23, 2018, 7:14 PM IST
Highlights

ಮೆಂತೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇರುವ ಕಾಳು. ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾಳಿನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳಿವೆ. ದಿನಕ್ಕೊಂದು ಸ್ಪೂನ್, ಖಾಲಿ ಹೊಟ್ಟೆಯಲ್ಲಿ ಮೆಂತೆ ಸೇವಿಸಿದರೆ ಆರೋಗ್ಯ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಪಿರಿಯಡ್ಸ್‌ಗೂ ಮದ್ದು, ಇತ್ತ ಶುಗರ್‌ಗೂ ಇದು ರಾಮಬಾಣ.

ಮೆಂತೆ ಕಾಳನ್ನು ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ತಿಂದರೆ ಹಲವು ಪ್ರಯೋಜನಗಳಿವೆ. ತಾಯಿ ಎದೆ ಹಾಲು ಹೆಚ್ಚುವುದರೊಂದಿಗೆ, ಅನೇಕ ಆರೋಗ್ಯಕಾರಿ ಅಂಶಗಳಿವೆ. ಮೆಂತೆಯ ಸುತ್ತೊಂದು ಸುತ್ತು...

- ಮೆಂತೆ ಕಾಳಿನಲ್ಲಿರುವ ಪೌಷ್ಟಿಕಾಂಶಗಳು : ಕ್ಯಾಲರಿ : 320, ಕಾರ್ಬೋಹೈಡ್ರೇಟ್ : 58g, ಫೈಬರ್ - 25g , ಪ್ರೊಟೀನ್ - 23g,... ಇತ್ಯಾದಿ. 

- ತಾಯಿಯ ಎದೆಹಾಲು: ಮೆಂತೆಯನ್ನು ಪ್ರತಿದಿನ ಸೇವಿಸದಿರೆ ತಾಯಿ ಎದೆ ಹಾಲು ಹೆಚ್ಚುತ್ತದೆ. ತಾಯಿಯ ಆರೋಗ್ಯಕ್ಕೂ ಉತ್ತಮ ಮದ್ದು. ಇದು ಹೆಣ್ಣನ್ನು ಕಾಡುವ ಸೊಂಟ ನೋವಿನಂಥ ಸಮಸ್ಯೆಗೂ ರಾಮಬಾಣ.

ಚೆಲುವಿನ ಅಂದದ ಮುಖಕೆ ಮೊಸರೇ ಕಾರಣ

ಜೀರ್ಣಕ್ರಿಯೆ:  ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತೆ ಕಾಳಿನಷ್ಟು ಉತ್ತಮ ಮದ್ದು ಮತ್ತೊಂದಿಲ್ಲ. ದೇಹದಲ್ಲಿರುವ ವಿಷಕಾರಕ ಅಂಶಗಳನ್ನು ಹೊರ ಹಾಕಿ, ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ.

ಡಯಾಬಿಟಿಸ್‌ಗೆ ರಾಮಬಾಣ: ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೂ ಮೆಂತು ಉತ್ತಮ ಮದ್ದು. ಇದರಲ್ಲಿ ಗಾಲಕ್ಟೋಮನನ್ ಎಂದು ಕರೆಯಲ್ಪಡುವ ನೈಸರ್ಗಿಕವಾಗಿ ಕರಗುವ ಫೈಬರ್ ಇದೆ. ಇದು ರಕ್ತ ಸಕ್ಕರೆ ಅಂಶ ಹೀರುವ ವೇಗವನ್ನು ಕಡಿಮೆಗೊಳಿಸುತ್ತದೆ. 

ಎದೆ ಉರಿ : ಮೆಂತೆಯಲ್ಲಿ ಕ್ಯಾಲ್ಸಿಯಂ ಇದೆ. ಇದು ಎದೆಯುರಿ ನಿವಾರಿಸಲು ಸಹಕರಿಸುತ್ತದೆ. 

ತೂಕ ಇಳಿಕೆ:  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತೆ ಕಾಳನ್ನು ಜಗಿದು, ತಿಂದರೆ ಹೆಚ್ಚುವರಿ ಕ್ಯಾಲೋರಿಗೆ ಗುಡ್ ಬೈ ಹೇಳಬಹುದು.

ಜ್ವರ, ಗಂಟಲು ಕೆರೆತ ನಿವಾರಕ:  ಮೆಂತೆ ಕಾಳನ್ನು ಪುಡಿ ಮಾಡಿ, ಒಂದು ಚಹಾ ಚಮಚ ನಿಂಬೆರಸ ಮತ್ತು ಜೇನಿನಲ್ಲಿ ಸೇರಿಸಿ, ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಗಂಟಲು ಕೆರೆತ ಮತ್ತು ಕೆಮ್ಮನ್ನೂ ಇದು ಗುಣಪಡಿಸುತ್ತದೆ.

ಬೆಂಗಳೂರಿಗರನ್ನು ಕಾಡುತ್ತಿದೆ ವೈರಲ್ ಜ್ವರ

ಮೆದುಳಿನ ಕಾರ್ಯ: ನಿಯಮಿತವಾಗಿ ಮೆಂತೆ ಕಾಳು ಸೇವಿಸಿದರೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ, ಮೆದುಳು ಕ್ರಿಯಾಶೀಲವಾಗುತ್ತದೆ. 

ಕ್ಯಾನ್ಸರ್ ನಿವಾರಕ: ಮೆಂತೆ ಕಾಳಿನ ಸೇವನೆಯಿಂದ ಕ್ಯಾನ್ಸರ್ ಪಸರಿಸುವ ಕಣಗಳು ಸಾಯುತ್ತವೆ. ಆರೋಗ್ಯ ವೃದ್ಧಿಗೆ ಇದು ಸಹಕಾರಿ. 

ಕಿಡ್ನಿ ಅರೋಗ್ಯ: ಕಿಡ್ನಿ ಅರೋಗ್ಯ ಕಾಪಾಡುವಲ್ಲಿ ಮೆಂತೆ ಸಹಕರಿಸುತ್ತದೆ. ಇದರಿಂದ ಕಿಡ್ನಿ ಡ್ಯಾಮೇಜ್ ಆಗೋದು ತಪ್ಪುತ್ತದೆ. 

ಪಿರಿಯಡ್ಸ್ ನೋವು: ಪಿರಿಯಡ್ಸ್ ನೋವು ನಿವಾರಿಸಲು ಮೆಂತೆಯನ್ನು ನಿಯಮಿತವಾಗಿ ಸೇವಿಸಿ. ಮಜ್ಜಿಗೆಯೊಂದಿಗೆ, ಮೆಂತೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿ.


ಕೂತಲ್ಲೇ ಕೂತು ಕೆಲಸ ಮಾಡಿದರೆ ಡೇಂಜರ್!

ಆರೋಗ್ಯಕ್ಕಾಗಿ ತಟ್ಟು ಚಪ್ಪಾಳೆ 
ಸೆಕ್ಸ್ ಸಾಮರ್ಥ್ಯ ಹೆಚ್ಚಿಸಲು ಈರುಳ್ಳಿ ಬೆಸ್ಟ್ ಮದ್ದು

click me!