ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ 22 ಮೆಟ್ರಿಕ್ ಟನ್ ಪಾರಾಸಿಟಮಲ್ ಔಷಧ ಮೊಝಂಬಿಕ್ ರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಆಫ್ರಿಕಾದ ಈ ರಾಷ್ಟ್ರಕ್ಕೆ ಕೊರೋನಾ ವಿರುದ್ಧ ಹೋರಾಡಲು ಭಾರತ ನೆರವಾಗಿದೆ.
ಹೈಕ್ರೋಕ್ಲೋರಿಕ್ವಿನ್ ಸೇರಿದಂತೆ 22 ಮೆಟ್ರಿಕ್ ಟನ್ ಪಾರಾಸಿಟಮಲ್ ಔಷಧ ಮಝಂಬಿಕ್ ರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಆಫ್ರಿಕಾದ ಈ ರಾಷ್ಟ್ರಕ್ಕೆ ಕೊರೋನಾ ವಿರುದ್ಧ ಹೋರಾಡಲು ಭಾರತ ನೆರವಾಗಿದೆ.
ಕೊರೋನಾದಿಂದ ಜಗತ್ತೇ ತತ್ತರಿಸುತ್ತಿರುವ ಸಂದರ್ಭದಲ್ಲಿ ಭಾರತ ಆಫ್ರಿಕಾದ ಮೊಝಂಬಿಕ್ ರಾಷ್ಟ್ರಕ್ಕೆ 13 ಬಗೆಯ ಔಷಧವನ್ನು ಕಳುಹಿಸಿಕೊಟ್ಟಿದೆ. ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ 22 ಮೆಟ್ರಿಕ್ ಟನ್ ಪಾರಾಸಿಟಮಲ್ ಔಷಧ ಮಝಂಬಿಕ್ ರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಆಫ್ರಿಕಾದ ಈ ರಾಷ್ಟ್ರಕ್ಕೆ ಕೊರೋನಾ ವಿರುದ್ಧ ಹೋರಾಡಲು ಭಾರತ ನೆರವಾಗಿದೆ.
undefined
ಕೊರೋನಾ ಲಸಿಕೆ; ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ರಷ್ಯಾ
ಮೊಝಂಬಿಕ್‌ಗೆ ಭಾರತದ ಹೈ ಕಮಿಷನರ್ ಆಗಿರುವ ರಾಜೀವ್ ಕುಮಾರ್ ಅವರು ಇದನ್ನು ಮೊಝಂಬಿಕ್‌ನ ವಿದೇಶ ಸಚಿವ ವೆರೋನಿಕಾ ನೆಟಾನಿಯಲ್ ಮೆಕಾಮೊ ದ್ಲೋವೋಗೆ ಹಸ್ತಾಂತರಿಸಿದ್ದಾರೆ.
ಹೈ ಕಮಿಷನರ್ ರಾಜೀವ್ ಕುಮಾರ್ ಭಾರತ ಸರ್ಕಾರ ನೀಡುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್, ಅಝಿತ್ರೋಮಿಸಿನ್ ಹಾಗೂ ಪಾರಾಸಿಟಮಲ್ ಸೇರಿ 13 ಬಗೆಯ ಅಗತ್ಯ ಔಷಧವನ್ನು ಮೊಝಂಬಿಕ್ ರಾಷ್ಟ್ರದ ಆರೋಗ್ಯ ಸಚಿವ ವೆರೋನಿಕಾ ನೆಟಾನಿಯಲ್ ಮೆಕಾಮೊ ದ್ಲೋವೋಗೆ ಹಸ್ತಾಂತರಿಸಲಾಗಿದೆ ಎಂದು ಹೈ ಕಮಿಷನ್ ಇಂಡಿಯಾ ಖಾತೆ ಟ್ವೀಟ್ ಮಾಡಿದೆ.
ಸಿಎಂ ಬಿಎಸ್‌ವೈ ಜೊತೆ ಅಮೆರಿಕ ಕಾನ್ಸಲ್ ಜನರಲ್ ಸಭೆ, ಮಹತ್ವದ ಚರ್ಚೆ..!
22 ಮಿಲಿಯನ್ ಬೆಲೆ ಬರಬಹುದಾದ 13 ಬಗೆಯ ಔಷಧ ನೀಡಲಾಗಿದೆ ಎಂದು ಇನ್ನೊಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಜೂನ್ 3ರಂದು ಮೊಝಂಬಿಕ್ ಅಧ್ಯಕ್ಷ ಫಿಪ್ ನ್ಯೂಸಿ ಜೊತೆ ಫೋನ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕೊರೋನಾ ಹೋರಾಟದಲ್ಲಿ ನೆರವು ನೀಡುವುದಾಗಿ ಹೇಳಿದ್ದರು.
ಆಫ್ರಿಕನ್ ರಾಷ್ಟ್ರದ ಜೊತೆ ಭಾರತದ ಸಂಬಂಧ ವೃದ್ಧಿಯಲ್ಲಿ 13 ಬಗೆಯ ಔಷಧ ನೀಡಿ ನೆರವಾದ ಭಾರತ ಸರ್ಕಾರಕ್ಕೆ ಮೊಝಂಬಿಕ್ ಆರೋಗ್ಯ ಸಚಿವ ಧನ್ಯವಾದ ತಿಳಿಸಿದ್ದಾರೆ. ಮೊಝಂಬಿಕ್‌ನಲ್ಲಿ 6161 ಕೊರೋನಾ ಪ್ರಕರಣಗಳು ಕಂಡು ಬಂದಿದ್ದು 39 ಸಾವು ಸಂಭವಿಸಿದೆ.