Foreign Festival : ಹ್ಯಾಲೋವೀನ್ ಹಬ್ಬದ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷ್ಯ

By Suvarna NewsFirst Published Oct 29, 2022, 12:55 PM IST
Highlights

ಹ್ಯಾಲೋವೀನ್ ಪಾರ್ಟಿಗಳು ಶುರುವಾಗಿವೆ. ಜನರು ದೆವ್ವದ ವೇಷ ಧರಿಸಿ ಓಡಾಟ ಶುರು ಮಾಡಿದ್ದಾರೆ. ಆದ್ರೆ ಈ ಹಬ್ಬದಲ್ಲಿ ಚಿತ್ರವಿಚಿತ್ರ ವೇಷ ಧರಿಸುವ ಜನರಿಗೆ ಈ ಹಬ್ಬದ ಬಗ್ಗೆ ತಿಳಿದಿಲ್ಲ. ಹ್ಯಾಲೋವೀನ್ ಗೆ ಸಂಬಂಧಿಸಿದ ಕೆಲ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ.

ಹ್ಯಾಲೋವೀನ್, ಭೂತದ ವೇಷ ಧರಿಸುವ ಹಬ್ಬ. ಹಿಂದೆ ಭಾರತೀಯರಿಗೆ ಈ ಹಬ್ಬದ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಇದೊಂದು ವಿದೇಶದ ಹಬ್ಬವಾದ್ರೂ ಈಗ ನಮ್ಮ ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅಕ್ಟೋಬರ್ 31ರಂದು ಹ್ಯಾಲೋವೀನ್ ಹಬ್ಬ ಆಚರಣೆ ಮಾಡಲಾಗ್ತಿದೆ. ಪಾಶ್ಚಿಮಾತ್ಯ ದೇಶಗಳ ಜನರು ದೆವ್ವಗಳಂತೆ ವೇಷ ಧರಿಸಿ ಹಬ್ಬ ಆಚರಣೆ ಮಾಡ್ತಾರೆ. ಈ ಹಬ್ಬ ಶಕ್ತಿಗಳು ಮತ್ತು ಅಲೌಕಿಕ ಶಕ್ತಿಗಳೊಂದಿಗೆ ಸಂಬಂಧ ಹೊಂದಿದೆ. ಈ ಹ್ಯಾಲೋವೀನ್ ಹಬ್ಬ ಈಗ ಹಬ್ಬವಾಗಿ ಉಳಿದಿಲ್ಲ. ಅದೊಂದು ಟ್ರೆಂಡ್  ಆಗಿದೆ. ಬರೀ ದೆಹಲಿ, ಬೆಂಗಳೂರಿನಂತಹ ದೊಡ್ಡ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ ಸಣ್ಣ ಪಟ್ಟಣಗಳಲ್ಲಿ ಕೂಡ ಹ್ಯಾಲೋವೀನ್ ಪಾರ್ಟಿಗಳನ್ನು ನಾವು ನೋಡಬಹುದು. ಶಾಲೆಗಳಲ್ಲೂ ಈ ಹಬ್ಬದ ಆಚರಣೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಈ ಹ್ಯಾಲೋವೀನ್ ಹಬ್ಬಕ್ಕೆ ಸಂಬಂಧಿಸಿದ ಕೆಲ ಕುತೂಹಲಕಾರಿ ವಿಷ್ಯವನ್ನು ನಾವಿಂದು ನಿಮಗೆ ಹೇಳ್ತೆವೆ. 

ಇದಕ್ಕಿದೆ 2000 ವರ್ಷಗಳಿಗಿಂತಲೂ ಹಳೆಯ ಇತಿಹಾಸ (History) : ಹ್ಯಾಲೋವೀನ್‌ (Halloween ) ನ ಪೌರಾಣಿಕ ಇತಿಹಾಸ 2000 ವರ್ಷಗಳಿಗಿಂತ  ಹಳೆಯದು ಎನ್ನಲಾಗುತ್ತದೆ. ಐರ್ಲೆಂಡ್ (Ireland), ಯುನೈಟೆಡ್ ಕಿಂಗ್ಡಮ್, ಉತ್ತರ ಫ್ರಾನ್ಸ್ ಇತ್ಯಾದಿಗಳಲ್ಲಿ ಇದನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ಅಕ್ಟೋಬರ್ 31 ರಂದು ಆಚರಿಸಲಾದ ಈ ಹಬ್ಬವನ್ನು ಸಂಹೈನ್ (Samhain) ಎಂದು ಕರೆಯಲಾಗ್ತಿತ್ತು.

Latest Videos

Social Belief : ಅಂತ್ಯಸಂಸ್ಕಾರದ ವೇಳೆ ಬಿಳಿ ಬಟ್ಟೆ ಧರಿಸುವುದ್ಯಾಕೆ?

ಹುಣ್ಣಿಮೆ (Full Moon) ಯಲ್ಲಿ ಬರಲ್ಲ ಹ್ಯಾಲೋವೀನ್ ಹಬ್ಬ : ಸಾಮಾನ್ಯವಾಗಿ ಸಿನಿಮಾ (Movies) ಗಳಲ್ಲಿ, ಧಾರಾವಾಹಿಗಳಲ್ಲಿ ಹ್ಯಾಲೋವೀನ್ ತೋರಿಸುವ ವೇಳೆ ಪೂರ್ಣ ಚಂದ್ರನನ್ನು ತೋರಿಸಲಾಗುತ್ತದೆ. ಆದ್ರೆ ಹ್ಯಾಲೋವೀನ್ ಸಮಯದಲ್ಲಿ ಹುಣ್ಣಿಮೆ ಬರೋದು ಅಪರೂಪ. ಎಷ್ಟೋ ವರ್ಷಗಳಿಗೊಮೆ ಈ ಸಂದರ್ಭ ಬರುತ್ತದೆ. ಹಿಂದೆ 2020ರಲ್ಲಿ ಬಂದಿತ್ತು.  ಮುಂದಿನ ಹ್ಯಾಲೋವೀನ್ ಮತ್ತು ಹುಣ್ಣಿಮೆಯ ರಾತ್ರಿಗಾಗಿ ಬಹಳ ವರ್ಷ ಕಾಯ್ಲೇಬೇಕು. 

ಟ್ರಿಕ್ ಅಥವಾ ಟ್ರೀಟ್ ಅಭ್ಯಾಸ : ಹ್ಯಾಲೋವೀನ್ ಹಬ್ಬದಲ್ಲಿ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ಮನೆ, ಮನೆಗಳಿಗೆ ಹೋಗುತ್ತಾರೆ. ನಂತ್ರ ಟ್ರಿಕ್ ಓ ಟ್ರೀಟ್ ಹೇಳುತ್ತ ಮಿಠಾಯಿಗಳನ್ನು ಕೇಳುತ್ತಾರೆ. ಅನೇಕ ದೇಶಗಳಲ್ಲಿ ಈ ಸಂಪ್ರದಾಯವಿದೆ. ಈ ಆಚರಣೆಗೆ  ಪೌರಾಣಿಕ ಹಿನ್ನೆಲೆಯಿದೆ. ಈ ಆಚರಣೆ ಶುರುವಾದ ಸಂದರ್ಭದಲ್ಲಿ ರಾತ್ರಿ ದೆವ್ವಗಳು ಭೂಮಿಯಲ್ಲಿ ಸಂಚರಿಸುತ್ತವೆ ಎಂದು ನಂಬಲಾಗಿತ್ತು. ಇದರಿಂದಾಗಿ ಜನರು ವಿವಿಧ ಬಟ್ಟೆಗಳನ್ನು ಧರಿಸಿ ತಮ್ಮ ಮನೆಯ ಹೊರಗೆ ಆಹಾರವನ್ನು ಇಡುವ ಅಭ್ಯಾಸವನ್ನು ಪ್ರಾರಂಭಿಸಿದರು. ಇದರ ನಂತರ ಚರ್ಚ್‌ನಲ್ಲಿ ಆಹಾರದ ಬದಲು ಪ್ರಾರ್ಥನೆ ಮಾಡುವ ಅಭ್ಯಾಸ ಶುರುವಾಯಿತು. ಕ್ರಮೇಣ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ಇದನ್ನು ಪದ್ಧತಿ ಮಾಡಿಕೊಂಡು ಅನುಸರಿಸುತ್ತ ಬಂದ್ರು. 

ವೈಷ್ಟೋದೇವಿಯಿಂದ… ತಿರುವನಂತಪುರದವರೆಗೂ ನೀವು ನೋಡಲೇಬೇಕು ಈ ದೇಗುಲಗಳನ್ನು

ಹ್ಯಾಲೋವೀನ್‌ ಹಬ್ಬದ ಸಂದರ್ಭದಲ್ಲಿ ಕಪ್ಪು ಮತ್ತು ಕಿತ್ತಳೆ ಬಣ್ಣ ಮಾತ್ರ ಏಕೆ ಬಳಸುತ್ತಾರೆ ? : ಹ್ಯಾಲೋವೀನ್‌ನಲ್ಲಿ ಕಪ್ಪು ಮತ್ತು ಕಿತ್ತಳೆ ಬಣ್ಣಗಳಿಂದ ಅಲಂಕರಿಸಲು ಅವಕಾಶವಿದೆ. ಆದರೆ ಈ ಎರಡು ಬಣ್ಣಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎನ್ನುವ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕಿತ್ತಳೆ ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ ಈ ಬಣ್ಣವು ಶರತ್ಕಾಲದ ಋತುವನ್ನು ತೋರಿಸುತ್ತದೆ.  ಇನ್ನು ಕಪ್ಪು ಬಣ್ಣವನ್ನು ಭಯ ಮತ್ತು ಸಾವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಚಳಿಗಾಲವನ್ನು ತೋರಿಸುತ್ತದೆ. ಈ ಎರಡು ಬಣ್ಣಗಳು ಋತುಗಳ ಬದಲಾವಣೆಯನ್ನು ಮತ್ತು ಜೀವನ ಮತ್ತು ಮರಣವನ್ನು ತೋರಿಸುತ್ತವೆ. ಇದೇ ಕಾರಣಕ್ಕೆ ಹ್ಯಾಲೋವೀನ್ ಹಬ್ಬದ ಆಚರಣೆ ವೇಳೆ ಜನರು ಈ ಎರಡು ಬಣ್ಣಗಳ ಬಟ್ಟೆಗೆ ಹೆಚ್ಚು ಆದ್ಯತೆ ನೀಡ್ತಾರೆ. 

click me!