World Stroke Day 2022: ವಿಶ್ವ ಪಾರ್ಶ್ವವಾಯು ದಿನದ ಇತಿಹಾಸ ಮತ್ತು ಮಹತ್ವವೇನು

By Suvarna News  |  First Published Oct 29, 2022, 12:04 PM IST

ಪ್ರತಿ ವರ್ಷ ಅಕ್ಟೋಬರ್‌ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಮೆದುಳಿನ ಆಘಾತದ ಬಗ್ಗೆ ಜಾಗೃತಿ ಮೂಡಿಸಲೆಂದು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ದಿನದ ಹಿನ್ನೆಲೆ, ಮಹತ್ವ, ಉದ್ದೇಶ ತಿಳಿದುಕೊಳ್ಳೋಣ. 


ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನಾಗಿ ಆಚರಿಸಲಾಗುತ್ತದೆ. ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆತರೆ ಪಾರ್ಶ್ವವಾಯುವಿಗೆ ತುತ್ತಾದವರು ಬದುಕುಳಿಯುತ್ತಾರೆ ಎನ್ನುವ ಸತ್ಯವನ್ನು ಜನರಿಗೆ ತಿಳಿಸಲು World Stroke Day ಆಚರಿಸಲು ನಿರ್ಧರಿಸಲಾಯಿತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪಾರ್ಶ್ವವಾಯು ಎಂದರೇನು ?
ಚಟುವಟಿಕೆಯಿಂದ ಇದ್ದ ವ್ಯಕ್ತಿಯು ದೇಹದ (Body) ಒಂದು ಭಾಗದ ಸ್ವಾಧೀನವನ್ನೇ ಕಳೆದುಕೊಳ್ಳುವಂತಹ ಕಾಯಿಲೆ ಪಾರ್ಶ್ವವಾಯು (Stroke) ಎಂದು ಹೇಳುತ್ತಾರೆ. ಇದಲ್ಲದೆ ಪಾರ್ಶ್ವವಾಯು ಹಲವು ಹೆಸರಿನಲ್ಲಿ ಕರೆಯಲ್ಪಡುತ್ತದೆ. ಸ್ಟ್ರೋಕ್‌, ಲಕ್ವಾ ಎಂದು ಸಹ ಇದನ್ನು ಹೇಳುತ್ತಾರೆ. ಮೆದುಳಿನ ಆಘಾತ ಎಂಬ ಪದವೂ ಬಳಕೆಯಲ್ಲಿದೆ. ಜನರ ಪ್ರಾಣಕ್ಕೆ ಕುತ್ತು ತರುವ ಕಾಯಿಲೆಗಳಲ್ಲಿ (Disease) ಸ್ಟ್ರೋಕ್‌ಗೆ ಎರಡನೇ ಸ್ಥಾನವಿದೆ. ಹಾಗೆಯೇ, ವ್ಯಕ್ತಿಯು ಅಂಗವಿಕಲಗೊಳ್ಳಲು ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್‌ಗೆ ಮೊದಲನೇ ಸ್ಥಾನವಿದೆ. ಸ್ಟ್ರೋಕ್‌ನಿಂದ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. 

Latest Videos

undefined

World Stroke Day 2022: ಡೇಂಜರಸ್ ಮೆದುಳಿನ ಸ್ಟ್ರೋಕ್‌ ತಡೆಗಟ್ಟುವುದು ಹೇಗೆ ?

ವಿಶ್ವ ಪಾರ್ಶ್ವವಾಯು ದಿನದ ಇತಿಹಾಸ
2004ರ ಅಕ್ಟೋಬರ್‌ 29ರಂದು ಕೆನಡಾದಲ್ಲಿ ಮೊದಲ ಬಾರಿಗೆ  World stroke day ಆರಂಭಿಸಲಾಯಿತು. 2006ರಲ್ಲಿ ಈ ದಿನವನ್ನು ಸಾರ್ವಜನಿಕ ಜಾಗೃತಿಗಾಗಿ ಮೀಸಲಿಡಲು ಉದ್ದೇಶಿಸಲಾಯಿತು. ಇದಕ್ಕಾಗಿ ವರ್ಲ್ಡ್‌ ಸ್ಟ್ರೋಕ್‌ ಫೆಡರೇಷನ್‌ ಮತ್ತು ಇಂಟರ್‌ನ್ಯಾಷನಲ್‌ ಸ್ಟ್ರೋಕ್‌ ಸೊಸೈಟಿಯನ್ನು ವಿಲೀನವಾಗಿಸಿ World Stroke Organization (WSO) ಸ್ಥಾಪಿಸಲಾಯಿತು. 1990ರ ದಶಕದಲ್ಲಿ ಜಗತ್ತಿನಾದ್ಯಂತ ಪಾರ್ಶ್ವವಾಯು ಸಮಸ್ಯೆ ಹೆಚ್ಚುತ್ತಿರುವುದನ್ನು ಮನಗಂಡು ಈ ದಿನ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. 2010ರಲ್ಲಿ ವಿಶ್ವ ಪಾರ್ಶ್ವವಾಯು ಸಂಘಟನೆಯು ಸ್ಟ್ರೋಕ್‌ ಅನ್ನು ಆರೋಗ್ಯ ತುರ್ತು ಪರಿಸ್ಥಿತಿ (Emergency) ಎಂದು ಘೋಷಿಸಿತು.

ವಿಶ್ವ ಸ್ಟ್ರೋಕ್‌ ದಿನದ ಮಹತ್ವ
ಹೃದಯಾಘಾತ ಅಥವಾ ಹೃದಯ ಕಾಯಿಲೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಸ್ಟ್ರೋಕ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.. ಹಾಗಾಗಿ, ಸ್ಟ್ರೋಕ್‌ಗೆ ಒಳಗಾದವರ ಪೈಕಿ ಬಹಳಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್‌ 29ರಂದು ವಿಶ್ವ ಸ್ಟ್ರೋಕ್‌ ದಿನವನ್ನಾಗಿ ವಿಶ್ವ ಆರೋಗ್ಯ ಸಂಸ್ಥೆ ಆಚರಿಸಲಾಗುತ್ತದೆ. 

ವಿಶ್ವ ಪಾರ್ಶ್ವವಾಯು ದಿನ 2022ರ ಥೀಮ್‌ 
ಪ್ರತಿವರ್ಷ ಒಂದೊಂದು ಥೀಮ್‌ ಅಥವಾ ಘೋಷವಾಕ್ಯದಡಿ ವಿಶ್ವ ಪಾರ್ಶ್ವವಾಯು ದಿನವನ್ನು ಆಯೋಜಿಸಲಾಗುತ್ತದೆ. ಕಳೆದ ವರ್ಷ Minutes Can Save Lives ಎಂಬ ಥೀಮ್‌ ಅಳವಡಿಸಿಕೊಳ್ಳಲಾಗಿತ್ತು. 2022ರ ಥೀಮ್‌ ಅಮೂಲ್ಯ ಸಮಯ (#Precioustime) ಎಂಬುದಾಗಿದೆ. . ಈ ಮೂಲಕ ಸ್ಟ್ರೋಕ್‌ ಆದವರನ್ನು ಹೆಚ್ಚು ವಿಳಂಬ ಮಾಡದೆ ಆಸ್ಪತ್ರೆಗೆ ಸೇರಿಸಿ ಅಥವಾ ಸೂಕ್ತ ಚಿಕಿತ್ಸೆ (Treatment) ದೊರಕುವಂತೆ ನೋಡಿಕೊಳ್ಳಿ ಎಂದು ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಮಾರಣಾಂತಿಕ ಸ್ಟ್ರೋಕ್ ಅಪಾಯ !

ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ವಿಶ್ವದಾದ್ಯಂತ 15 ಮಿಲಿಯನ್ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂಬ ಮಾಹಿತಿ ನೀಡಿದೆ. ಈ ಪೈಕಿ 5 ಮಿಲಿಯನ್ ಜನರು ಸಾವನ್ನಪ್ಪಿದರೆ, ಇನ್ನೂ 5 ಮಿಲಿಯನ್ ಜನರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. 40 ವರ್ಷದೊಳಗಿನ ಜನರಲ್ಲಿ ಪಾರ್ಶ್ವವಾಯು ಅಸಾಮಾನ್ಯವಾಗಿದೆ. ಸುಮಾರು ಶೇ. 8ರಷ್ಟು ಮಕ್ಕಳಲ್ಲಿ ಪಾರ್ಶ್ವವಾಯು ಸಂಭವಿಸುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡ ಮತ್ತು ತಂಬಾಕು ಸೇವನೆಯು ಅತ್ಯಂತ ಅಪಾಯಕಾರಿ (Dangerous) ಅಂಶ ಎಂದು ಗುರುತಿಸಲಾಗಿದೆ. ಇದನ್ನು ನಿಯಂತ್ರಿಸಿದರೆ ಪಾರ್ಶ್ವವಾಯು ಸಮಸ್ಯೆಯನ್ನು ತೊಲಗಿಸಬಹುದಾಗಿದೆ. ರಕ್ತದೊತ್ತಡ ಮತ್ತು ಮಾದಕ ವ್ಯಸನ ತ್ಯಜಿಸಿದರೆ ಪಾರ್ಶ್ವವಾಯು ಮುಕ್ತವಾಗಿ ಸ್ವಾಸ್ಥ್ಯ ಸಮಾಜ ಸೃಷ್ಟಿಯಾಗುತ್ತದೆ.

click me!