ತೆಂಗಿನ ಗರಿಯ ಪೊರಕೆ ಮಾಡುವ ಸುಲಭ ವಿಧಾನ: ಅಜ್ಜಿಯ ವೀಡಿಯೋ ಸಖತ್ ವೈರಲ್

Published : May 17, 2023, 03:31 PM ISTUpdated : May 17, 2023, 04:01 PM IST
ತೆಂಗಿನ ಗರಿಯ ಪೊರಕೆ ಮಾಡುವ ಸುಲಭ ವಿಧಾನ: ಅಜ್ಜಿಯ ವೀಡಿಯೋ ಸಖತ್ ವೈರಲ್

ಸಾರಾಂಶ

ತೆಂಗಿನ ಗರಿಗಳಿಂದ ಕಡ್ಡಿಗಳನ್ನು ಸುಲಭವಾಗಿ ಬೇರ್ಪಡಿಸಬಹುದು ಎಂಬುದನ್ನು ಹಿರಿಯಜ್ಜಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಅವರು ಪ್ರಯೋಗಿಸಿದ ಸರಳ ಉಪಾಯದ ವೀಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಸಾಕಷ್ಟು ವೈರಲ್ ಆಗಿದೆ. 

ಮನೆಯನ್ನು ಸ್ವಚ್ಛ ಮಾಡಲು ಪೊರಕೆ ಬೇಕೆ ಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತರ ತರಹದ ಪ್ಲಾಸ್ಟಿಕ್ ಪೊರಕೆಗಳು ಬಂದಿವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ತೆಂಗು ಅಡಿಕೆಯ ಗರಿಗಳಿಂದ ಮಾಡಿದ ಅಥವಾ ಕುರುಚಲು ಗಿಡಗಳ ಪೊರೆಕೆಯನ್ನೇ ಬಳಸುತ್ತಾರೆ. ತೆಂಗಿನ ಗರಿಗಳ ಪೊರಕೆ ಮಾಡುವುದು ಸುಲಭದ ಕೆಲಸವಲ್ಲ ಒಂದೊಂದೇ ಗರಿಯನ್ನು ಕೈಯಲ್ಲಿ ಹಿಡಿದು ಅದರಿಂದ ಕಡ್ಡಿಯನ್ನು ಬೇರ್ಪಡಿಸಬೇಕು. ಮನೆಯಲ್ಲಿ ಇರುವ ಹಿರಿಯ ಜೀವಗಳು ಇದನ್ನು ಸಲೀಸಾಗಿ ಮಾಡುತ್ತಾರೆ.  ಆದರೆ ತೆಂಗಿನ ಗರಿಗಳಿಂದ ಕಡ್ಡಿಗಳನ್ನು ಸುಲಭವಾಗಿ ಬೇರ್ಪಡಿಸಬಹುದು ಎಂಬುದನ್ನು ಹಿರಿಯಜ್ಜಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಅವರು ಪ್ರಯೋಗಿಸಿದ ಸರಳ ಉಪಾಯದ ವೀಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಸಾಕಷ್ಟು ವೈರಲ್ ಆಗಿದೆ. 

ದೇವಿಕಿರಣ್ ಗಣೇಶ್‌ಪುರ ಎಂಬ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ (Instagram)ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಸಾವಿರಾರು ಜನ ಈ ವೀಡಿಯೋಗೆ ಮೆಚ್ಚುಗೆ ಸೂಚಿಸಿ ಅಜ್ಜಿಗೆ ಧನ್ಯವಾದ ಹೇಳಿದ್ದಾರೆ. 

ಪಕ್ಕಾ ಹಳ್ಳಿ ಹುಡುಗಿಯಾದ ವಿದೇಶಿ ಯುವತಿ; ಗೊಬ್ಬರ ಹೊರೊಕೂ ಸೈ, ನಾಟಿಗೂ ಜೈ!

ವೀಡಿಯೋದಲ್ಲೇನಿದೆ.?

ವೀಡಿಯೋದಲ್ಲಿ ಅಜ್ಜಿಯೊಬ್ಬರು (Grand mother) ಪುಟಾಣಿ ಸ್ಟೂಲ್ ಮೇಲೆ ಕುಳಿತಿದ್ದು, ಅನ್ನವನ್ನು ಗಂಜಿಯಿಂದ ಬೇರ್ಪಡಿಸುವ (ಚಿಬ್ಬುಲ್) ಪಾತ್ರವನ್ನು ಕೈಯಲ್ಲಿ ಹಿಡಿದುಕೊಂಡು ಆ ಪಾತ್ರದಿಂದಲೇ ಅವರು ತೆಂಗಿನ ಗರಿಯಿಂದ ಕಡ್ಡಿಯನ್ನು ಪ್ರತ್ಯೇಕಗೊಳಿಸುತ್ತಿದ್ದಾರೆ. ತುಳುನಾಡಿನಲ್ಲಿ (Tulunadu) ಚಿಬ್ಬುಲ್ ಎಂದು ಕರೆಯಲ್ಪಡುವ ಈ ಪಾತ್ರೆಯಲ್ಲಿ ತೂತುಗಳಿವೆ. ಮೊದಲಿಗೆ ಅಜ್ಜಿ ತೆಂಗಿನ ಗರಿಯನ್ನು ಕೈಯಲ್ಲಿ ತೆಗೆದುಕೊಂಡು ಅದರ ಒಂದು ತುದಿಯನ್ನು ಚಾಕುವಿನಿಂದ ಕ್ಲೀನ್ ಮಾಡಿ ಈ ಚಿಬ್ಬುಲ್‌ನಲ್ಲಿರುವ ತೂತಿನೊಳಗೆ ನುಗ್ಗಿಸುತ್ತಾರೆ ಈ ವೇಳೆ ಕಡ್ಡಿ ಹಾಗೂ ಗರಿ ಸುಲಭವಾಗಿ ಬೇರಾಗುತ್ತದೆ. ಅಲ್ಲದೇ ಇದು ಕೆಲಸವನ್ನು ವೇಗವಾಗಿ ಮುಗಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಹೊತ್ತಿನಲ್ಲಿ ಒಂದು ಪೊರಕೆ (Brooms) ಅಥವಾ ಹಿಡಿಸೂಡಿಗೆ ಬೇಕಾಗುವಷ್ಟು ಕಡ್ಡಿಗಳು ರೆಡಿ ಆಗುತ್ತವೆ. 

ಹಳ್ಳಿಗೆ ಹೋಗಿ ಕೃಷಿ ಮಾಡ್ಕೊಂಡ್‌ ಬದುಕ್ತೀರಾ?

ಅಜ್ಜಿಯ ಈ ಗುಜರಿ ಟೆಕ್ನಿಕ್‌ಗೆ ಇಂಟರ್‌ನೆಟ್ ಫಿದಾ ಆಗಿದ್ದು, ಅನೇಕರು ಥ್ಯಾಂಕ್ಸ್ ಅಜ್ಜಿ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಸುಲಭ ವಿಧಾನ, ಈ ವಿಚಾರ ನಮಗೆ ಗೊತ್ತಿರಲಿಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದು, ಧನ್ಯವಾದ ತಿಳಿಸಿದ್ದಾರೆ. ಭಾರತದ ಹಳ್ಳಿಗಾಡಿನಲ್ಲಿ ಅನೇಕ ಮಹಿಳೆಯರು ಇಂತಹ ಅನೇಕ ಕರಕುಶಲ ವಸ್ತುಗಳನ್ನು ತಾವಾಗೇ ತಯಾರಿಸುತ್ತಾರೆ. ಬುಡಕಟ್ಟು ಸಮುದಾಯದ (tribal comunity) ಅನೇಕರು ಬುಟ್ಟಿ ಮಾಡುವ ಮರ ಅಥವಾ ಕಾಡಿನಲ್ಲಿ ಸಿಗುವ ಬಳಿಗಳಿಂದ ಇಂತಹ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುತ್ತಾರೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..