ಸೀರೆ ಉಟ್ಟರೆ ನಾರಿ, ಮಂದಿ ಹೇಳಬೇಕು ಅಬ್ಬಾ ರೀ...

By Web Desk  |  First Published Jul 8, 2019, 12:18 PM IST

ಸಾಂಪ್ರದಾಯಿಕ ಉಡುಗೆಯಾದರೂ ಸೀರೆ ಮಾಡರ್ನ್ ಹುಡುಗಿಯರೂ ಇಷ್ಟ ಪಡುವ ಧಿರಿಸು. ಹಾಗಂತ ಇದನ್ನು ಹೇಗೋ ಉಡ್ಲಿಕ್ಕೆ ಆಗೋಲ್ಲ. ಸೀರೆ ಉಡುವಾಗ ನೀವು ಕೆಲವೊಂದಿಷ್ಟು ಅಂಶಗಳನ್ನು ಗಮನಿಸಲೇಬೇಕು... 


ಸೀರೆಯನ್ನು ಎಲ್ಲಾ ಡ್ರೆಸ್‌ಗಿಂತಲೂ ಸೆಕ್ಸಿ ಔಟ್ ಫಿಟ್. ಸುಂದರವಾದ ಈ ಭಾರತೀಯ ಧಿರಿಸನ್ನು ಧರಿಸುವಾಗ ಚೆಂದ ಕಾಣಿಸಬೇಕು. ಒಂದು ವೇಳೆ ನೀವು ಉಟ್ಟಿದ್ದು ಸರಿ ಇಲ್ಲ ಎಂದಾದರೆ ನಗೆ ಪಾಟಲಿಗೀಡಾಗುವುದು ಗ್ಯಾರಂಟಿ. ಸೀರೆಯುಟ್ಟು ತುಂಬಾ ಚೆನ್ನಾಗಿ ಕಾಣಬೇಕು ಎಂದಾದರೆ ಈ ತಪ್ಪು ಮಾಡಬಾರದು...

ತಪ್ಪಾದ ಫೂಟ್ ವೇರ್

Latest Videos

ಸೀರೆ ಜೊತೆ ತಪ್ಪಿಯೂ ಕ್ಯಾಶುಯಲ್ ಫ್ಲಾಟ್ ಫಾರ್ಮ್ ಹೀಲ್ ಅಥವಾ ವೇಜಸ್ ಧರಿಸಬೇಡಿ. ಫ್ಲಾಟ್ ಮತ್ತು ಸ್ಲಿಪ್ಪರ್ ಕೂಡ ಬೇಡ. ಸುಂದರವಾಗಿ ಕಾಣಿಸಬೇಕು ಎಂದಾದರೆ ಹೈ ಹೀಲ್ ಸ್ಯಾಂಡಲ್ ಮತ್ತು ಸ್ಟಿಲಿಟೊಸ್ ಧರಿಸಿ. ಇದರಿಂದ ನೀವು ಸಣ್ಣಗೆ ಮತ್ತು ಉದ್ದ ಕಾಣುತ್ತೀರಿ. 

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

ಹೆವಿ ಜ್ಯುವೆಲ್ಲರಿ 

ಮದುವೆ ಸಮಾರಂಭಕ್ಕೆ ಓಕೆ. ಆದರೆ ಬೇರೆಲ್ಲಾ ಕಾರ್ಯಕ್ರಮಗಳಿಗೆ ಸೀರೆ ಜೊತೆ ಹೆವಿ ಜ್ಯುವೆಲ್ಲರಿ ಬೇಡ. ಸೀರೆ ಗ್ರ್ಯಾಂಡ್ ಆಗಿದ್ದು, ಅದರ ಜೊತೆಗೆ ಹೆವಿ ಜ್ಯುವೆಲ್ಲರಿ ಧರಿಸಿದರೆ ಚೆನ್ನಾಗಿ ಕಾಣೋದಿಲ್ಲ. ಅದರ ಬದಲಾಗಿ ಸಣ್ಣ ಇಯರಿಂಗ್, ಕೈ ತುಂಬಾ ಬಳೆ ಬದಲು ಒಂದು ಬ್ರೇಸ್ ಲೇಟ್ ಮತ್ತು ಸಣ್ಣ ಪೆಂಡೆಂಟ್ ಇರುವ ಚೈನ್ ಧರಿಸಿದರೆ ಚೆಂದ. 

ಸ್ಟೈಲ್ ಜೊತೆಗೆ ಎಕ್ಸ್‌ಪೆರಿಮೆಂಟ್ 

ಸೀರೆಯನ್ನು ಬೇರೆ ಬೇರೆ ರೀತಿಯಲ್ಲಿ ಉಡಬಹುದು. ಹೊಸ ಸ್ಟೈಲ್ ಟ್ರೈ ಮಾಡಿದರೆ ಕಂಫರ್ಟೇಬಲ್ ಫೀಲ್ ಮಾಡಿಕೊಳ್ತೀರಾ ಎಂಬುದನ್ನು ಗಮನಿಸಿ. ಇದರ ಬದಲಾಗಿ ನಿಮಗೆ ಸರಿಯಾಗಿ ಗೊತ್ತಿರುವ ರೀತಿಯಲ್ಲೇ ಸ್ವಲ್ಪ ಸ್ಟೈಲಿಶ್ ಆಗಿ ಸೀರೆ ಉಡಿ. 

ಧೋತಿ ಸೀರೆ, ಪಲಾಜೋ ಸೀರೆ... ರೆಡಿ ಟು ವೇರ್ ಸೀರೆಗಳ ಕಾರುಬಾರು!

ಸಂದರ್ಭಕ್ಕೆ ಸೂಟ್ ಆಗಿರಲಿ

ಒಂದೇ ರೀತೀಯ ಸೀರೆ ಎಲ್ಲ ಕಡೆದೂ ಧರಿಸಬೇಡಿ. ಆಫೀಸ್‌ಗೆ ಹೋಗುವಾಗ ಕಾಟನ್ ಸೀರೆ ಅಥವಾ ಹಗುರ ಫ್ಯಾಬ್ರಿಕ್ ಸೀರೆ, ಮದುವೆ ಸಂದರ್ಭದಲ್ಲಿ ರೇಷ್ಮೆ ಸೀರೆ, ಡಿಸೈನರ್ ಸೀರೆ ಆಯ್ಕೆ ಮಾಡಿ. 

ತುಂಬಾ ಪಿನ್ ಬೇಡ 

ಕೆಲವರಿಗೆ ಸೀರೆ ಉಟ್ಟರೆ ಎಲ್ಲೆಂದರಲ್ಲಿ ಪಿನ್ ಹಾಕುವ ಅಭ್ಯಾಸ ಇರುತ್ತದೆ. ನೀವು ತುಂಬಾ ಪಿನ್ ಹಾಕಿದರೆ ಸೀರೆ ಹರಿದು ಹೋಗಬಹುದು. ಆದುದರಿಂದ ಸೀರೆ ಸರಿಯಾಗಿ ನಿಲ್ಲಲು ಎಷ್ಟು ಪಿನ್ ಬೇಕೋ ಅಷ್ಟು ಕಡಿಮೆ ಪಿನ್ ಹಾಕಿ. ಇದರಿಂದ ಸೀರೆ ತೆಗೆಯುವುದೂ ಸುಲಭ. 

ದುಬಾರಿ ಕಾಂಜೀವರಂ ಸೀರೆ ಕೇರ್ ಹೀಗಿರಲಿ....

ಬ್ಲೌಸ್ ಫಿಟ್ಟಿಂಗ್ ಸರಿಯಾಗಿರಲಿ

ಹೌದು. ಮುಖ್ಯವಾಗಿ ನೀವು ಸುಂದರವಾಗಿ ಕಾಣಲು ಬೇಕಾಗಿರುವುದು ಬ್ಲೌಸ್. ಅದು ಸರಿಯಾದ ಫಿಟ್ಟಿಂಗ್‌ನಲ್ಲಿದ್ದರೆ ಸೀರೆ ಚೆನ್ನಾಗಿ ಕಾಣುತ್ತದೆ. ಜೊತೆಗೆ ನೀವೂ ಸಖತ್ತಾಗಿ ಕಾಣಿಸುತ್ತೀರಿ. 

click me!