ಕೆಟ್ಟ ಹವ್ಯಾಸಗಳು ಒಳ್ಳೆಯದಾಗಲೂು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗುತ್ತಿದ್ಯಾ? ಆ ಕೆಟ್ಟ ಹವ್ಯಾಸಗಳು ಯಾವವು ಮತ್ತು ಅದು ಹೇಗೆ ಒಳ್ಳೆಯದು ಮಾಡುತ್ತೆ?
ಉತ್ತಮ ಆರೋಗ್ಯಕ್ಕಾಗಿ ಯಾವಾಗಲೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದನ್ನು ಹಿಂದಿನಿಂದಲೂ ನಮ್ಮ ಪೂರ್ವಜರು ಹೇಳಿಕೊಂಡು ಬಂದಿದ್ದಾರೆ. ಆದರೆ ಕೆಟ್ಟದು ಎಂದು ಹೇಳಬಹುದಾದ ಕೆಲವು ಹವ್ಯಾಸಗಳೂ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಯಾವುದವು?
ಕಾಫಿ ಕುಡಿಯೋದು
undefined
ದಿನದಲ್ಲಿ 5-6 ಕಪ್ ಕಾಫಿ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ದಿನದಲ್ಲಿ 2-3 ಕಪ್ ಕಾಫಿ ಕುಡಿಯೋದರಿಂದ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಕಡಿಮೆ, ಎನ್ನುತ್ತೆ ರಿಸರ್ಚ್. ಜೊತೆಗೆ ಮೂಡ್ ಹಾಳಾಗಿದ್ದರೆ ಒಂದು ಕಪ್ ಕಾಫಿ ಕುಡಿದರೆ ಮೂಡ್ ಫ್ರೆಶ್ ಆಗುತ್ತದೆ.
ಕಾಂತಿಯುತ ಕೂದಲಿಗೆ ಕೆಫಿನ್ ಟ್ರೀಟ್ಮೆಂಟ್!
ಗಾಸಿಪ್ ಮಾಡುವುದು
ಗಾಸಿಪ್‌ನಿಂದ ಶರೀರದಲ್ಲಿ ಫೀಲ್ ಗುಡ್ ಹಾರ್ಮೋನ್ ರಿಲೀಸ್ ಆಗುತ್ತದೆ. ಇದರಿಂದ ಸ್ಟ್ರೆಸ್ ಮತ್ತು ಖಿನ್ನತೆ ದೂರವಾಗಿ, ಮನಸ್ಸೂ ನಿರಾಳವಾಗುತ್ತದೆ.
ಹೆಚ್ಚು ನಿದ್ರೆ ಮಾಡುವುದು
ಆಲಸಿ ಎಂದರೂ ಪರ್ವಾಗಿಲ್ಲ. ದೇಹಕ್ಕೆ ಅಗತ್ಯವಿರುವಷ್ಟು ನಿದ್ರಿಸಿದವರ ಪಚನ ಕ್ರಿಯೆ ಸುಸೂತ್ರವಾಗುತ್ತದೆ. ತೂಕವೂ ಹೆಚ್ಚುವುದಿಲ್ಲ.
ಗೊರಕೆ ಹೊಡೀತೀರಾ? ಇಲ್ಲಿದೆ ಮನೆ ಮದ್ದು..
ಚಾಕಲೇಟ್ ತಿನ್ನುವುದು
ಚಾಕಲೇಟ್ ಹಲ್ಲು ಹಾಗೂ ಹೊಟ್ಟೆಗೆ ಕೆಟ್ಟದೆಂಬುವುದು ಗೊತ್ತು. ಆದರೆ, ಹೃದಯ ಸಮಸ್ಯೆಗೆ ಇದೊಳ್ಳೇ ಪರಿಹಾರ. ಅದ್ರಲ್ಲೂ ಡಾರ್ಕ್ ಚಾಕಲೇಟ್ ಸೇವಿಸಿದರೆ ಬ್ಲಡ್ ಪ್ರೆಷರ್ ನಿಯಂತ್ರಣದಲ್ಲಿ ಇಡಬಹುದು.
ಕೋಪ ಮಾಡುವುದು
ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!
ಕೋಪ ಮನುಷ್ಯನನ್ನು ಹಾಳು ಮಾಡುತ್ತೆ. ಆದರೆ, ಒಳಗಿನ ತಾಪವನ್ನು ಕಡಿಮೆ ಮಾಡುತ್ತೆ ಇದೇ ಕೋಪ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತತ್ದೆ. ಕ್ಯಾನ್ಸರ್ ಅನ್ನೂ ತಡೀಬಹುದು ಈ ದುರಾಭ್ಯಾಸ.