
ತುಪ್ಪದ ಕಾಫಿ ಪ್ರಿಯೆ
‘ತಿಂದಿದ್ದೆಲ್ಲ ಜೀರ್ಣಆಗೋ ಹಾಗಿದ್ರೆಏನೆಲ್ಲ ತಿಂತಿದ್ದೆ!’ ಅಂತ ನಿಟ್ಟುಸಿರು ಬಿಡ್ತಾಳೆ ರಾಕುಲ್. ಒಂದೊಂದು ಸಲ ಡಯೆಟ್ ಚೀಟ್ ಮಾಡಿ ಜಂಕ್‌ಫುಡ್, ಸ್ವೀಟ್ ತಿಂದರೆ ತೂಕ ಏರಿಬಿಡುತ್ತೆ. ಮತ್ತೆ ಇಳಿಸಲಿಕ್ಕೆ ಇನ್ನಿಲ್ಲದ ಪಾಡು ಪಡಬೇಕು. ಬೆಳಗ್ಗೆದ್ದು 2 ಗ್ಲಾಸ್ ಬಿಸಿನೀರು, ಆಮೇಲೆ ತುಪ್ಪದ ಕಾಫಿ ಕುಡೀತಾರೆ. ಬ್ಲಾಕ್ ಕಾಫಿಗೆ 3 ಗ್ರಾಮ್ ತುಪ್ಪ ಹಾಕಿ ಕುಡಿಯೋದು. ಇದು ಶಕ್ತಿಗೆ, ಜೀರ್ಣಕ್ರಿಯೆಗೆ ಹಾಗೂ ಮೈಂಡ್‌ಗೆ ಬಹಳ ಒಳ್ಳೇದಂತೆ. ಮೊಟ್ಟೆ, ಜೋಳದ ರೊಟ್ಟಿ ಉಪಹಾರ, ಮಧ್ಯಾಹ್ನಕ್ಕೆ ಬ್ರೌನ್ ರೈಸ್, ಚಿಕನ್ ಇತ್ಯಾದಿ. ಸಂಜೆ 5 ಗಂಟೆ ಮೇಲೆ ಯಾವ ಕಾರಣಕ್ಕೂ ಕಾರ್ಬೊಹೈಡ್ರೇಟ್ ತಿನಿಸು ತಿನ್ನಲ್ಲ.
ಎತ್ತರ: 5'8
ತೂಕ: 57
ಸುತ್ತಳತೆ: 34-26-34
ಜಿಮ್ ಹುಲಿ!
ಇನ್‌ಸ್ಟಾಗ್ರಾಮ್‌ನಲ್ಲಿ ಈಕೆ ಪೋಸ್ಟ್ ಮಾಡಿರೋ ವೀಡಿಯೋ ನೋಡಿದರೆ, ಈ ಪೋರಿ ಎಷ್ಟೆಲ್ಲ ಕಷ್ಟ ಪಡ್ತಿದ್ದಾಳಪ್ಪ ಅನಿಸದೇ ಇರದು. ಈಕೆಯ ಜಿಮ್ ನೋಡಿದ್ರೆ ಗ್ಯಾರೇಜ್ ನೆನಪಾಗುತ್ತೆ. ಅಲ್ಲಲ್ಲಿ ಬಿದ್ದುಕೊಂಡಿರುವ, ಮೇಲಿಂದ ಮೇಲೆ ಪೇರಿಸಿಟ್ಟ ಟಯರ್‌ಗಳು, ಈ ಚೂಟಿ ಹುಡುಗಿ ಅದರ ಸುತ್ತ ಓಡಾಡ್ತಾ ವರ್ಕೌಟ್ ಮಾಡೋದು ನೋಡೋಕೆ ಭಲೇ ಮಜಾ. ಈಕೆ ಪಿಲಾಟೆಸ್ ಮಾಡ್ತಾಳೆ, ಜಿಮ್‌ನಲ್ಲಿ ಏನೇನೋ ವರ್ಕೌಟ್ ಮಾಡ್ತಾಳೆ. ಗಾಲ್ಫ್ ಆಟದಲ್ಲೂ ನಿಪುಣೆ, ಡ್ಯಾನ್ಸ್ ಅಂದ್ರೆ ಸಖತ್ ಇಷ್ಟ. ‘ಇಷ್ಟೆಲ್ಲ ಕಷ್ಟಪಡೋ ಕಾರಣ ಹೀಗಿದ್ದೀನಿ’ ಅಂತ ಕಣ್ಣರಳಿಸಿ ನಗೋ ರಾಕುಲ್‌ನ ನೋಡಿ ಕಲಿಯೋದು ಎಷ್ಟೊಂದಿದೆ!
ಅಯ್ಯಯ್ಯೋ... ಪ್ಯಾಂಟ್ ಜಿಪ್ ಹಾಕೋದನ್ನೇ ಮರೆತ್ರಾ ಈ ನಟಿ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.