New Study : ನಿಮ್ಮನೆ ನಾಯಿಗೆ ಈ ಬಣ್ಣ ಗೊತ್ತೇ ಆಗಲ್ವಂತೆ!

By Suvarna News  |  First Published Jun 28, 2023, 3:06 PM IST

ಎಲ್ಲರ ಮನೆಯ ಮುದ್ದಿನ ಪ್ರಾಣಿ ನಾಯಿ. ನಾಯಿ ಆಡಿಸೋಕೆ ನೀವೂ ಬಣ್ಣ ಬಣ್ಣದ ಚೆಂಡು, ಆಟಿಕೆ ಬಳಸಬಹುದು. ಆದ್ರೆ ನಿಮ್ಮನೆ ನಾಯಿಗೆ ನೀವು ಯಾವ ಬಣ್ಣದ ಬಾಲ್ ನೀಡಿದ್ದೀರಿ ಅನ್ನೋದೇ ತಿಳಿದಿರೋದಿಲ್ಲ. ಹೊಸ ಅಧ್ಯಯನವೊಂದು ಆಸಕ್ತಿಕರ ವಿಷ್ಯ ಹೇಳಿದೆ.
 


ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಶ್ವಾನಪ್ರಿಯರಿಗಂತೂ ಅವರ ಮನೆಯಲ್ಲಿರುವ ನಾಯಿ ಮನೆಯ ಸದಸ್ಯರಲ್ಲಿ ಒಬ್ಬರಂತಾಗಿರುತ್ತದೆ. ನಾಯಿ ಕೂಡ ತನ್ನ ಯಜಮಾನನಿಗೆ ಅಷ್ಟೇ ನಿಷ್ಠೆ ತೋರಿಸುತ್ತ. ಮನೆಯ ರಕ್ಷಣೆ ಹೊಣೆ ನಾಯಿದ್ದಾಗಿರುತ್ತೆ.  ಅಂತಹ ನಿಷ್ಠಾವಂತ ಪ್ರಾಣಿಗೆ ಬಣ್ಣಗಳು ಕಾಣಿಸೋದಿಲ್ಲ ಎಂಬ ಸತ್ಯ ನಿಮಗೆ ಗೊತ್ತಾ? 

ಶ್ವಾನ (Dog) ಗಳಲ್ಲಿ ಅನೇಕ ತಳಿಗಳನ್ನು ನಾವು ಕಾಣಬಹುದು. ನಾಯಿ ಸಾಕಿ ಬೆಳೆಸುವುದು ಕೂಡ ಈಗ ಒಂದು ಉದ್ಯೋಗ (Employment) ವಾಗಿದೆ. ನಾಯಿಗಳಿಗಾಗಿಯೇ ಅನೇಕ ಶೋಗಳು, ತರಬೇತಿಗಳು, ಆಟಗಳು ಇರುತ್ತವೆ. ವಾಸನೆಯನ್ನು ಬಹಳ ಬೇಗ ಗ್ರಹಿಸುವ ನಾಯಿಗಳು ಪೋಲೀಸ್ ಅಧಿಕಾರಿಗಳ ಬಲಗೈ ಎಂದರೆ ತಪ್ಪಾಗದು. ಏಕೆಂದರೆ ಅನೇಕ ಅಪರಾಧಗಳು ಶ್ವಾನದಿಂದಲೇ ಬಯಲಿಗೆ ಬಂದಿರುವುದನ್ನು ನಾವು ನೋಡಿದ್ದೇವೆ.

Latest Videos

undefined

Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು

ಮನೆಯಲ್ಲಿ ಒಂದು ನಾಯಿಯಿದ್ದರೆ ಮಕ್ಕಳಿಗೂ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಅದರ ಜೊತೆ ಆಟವಾಡುವುದು, ಅದಕ್ಕೆ ತಿಂಡಿ, ತಿನಿಸುಗಳನ್ನು ಹಾಕುವುದರಲ್ಲಿಯೇ ಅವರ ಸಮಯ ಕಳೆಯುತ್ತದೆ. ಇನ್ನು ಒಂಟಿಯಾಗಿರುವವರಿಗೆ ಇದು ಒಳ್ಳೆಯ ಸಂಗಾತಿ. ನಾಯಿಯನ್ನು ಸಾಕುವುದು ಕೂಡ ಈಗ ಒಂದು ಪ್ಯಾಶನ್ ಆಗಿಬಿಟ್ಟಿದೆ. ನಗರಗಳಲ್ಲಿ ನಾಯಿಯನ್ನು ಕಾರು, ಬೈಕ್ ಮೇಲೆ ಕೂರಿಸಿಕೊಂಡು ಸುತ್ತಾಡುವುದನ್ನು ನಾವು ಅನೇಕ ಕಡೆ ನೋಡಿದ್ದೇವೆ. ಶ್ವಾನಪ್ರಿಯರು ಅದಕ್ಕೆ ಶಿಸ್ತು ಹಾಗೂ ಅದರ ಆರೋಗ್ಯದ ಕಡೆಗೂ ಲಕ್ಷ್ಯ ಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ಅವರಿಗೆ ಆಹಾರ, ಲಸಿಕೆಗಳನ್ನು ಕೊಡಿಸುವುದು ಕೂಡ ಮುಖ್ಯವಾಗುತ್ತದೆ.

ಅನೇಕ ಪ್ರಾಣಿಗಳು ರಾತ್ರಿ ಹೊತ್ತಿನಲ್ಲಿ ಸುಲಭವಾಗಿ ಓಡಾಡಿಕೊಂಡು ತಮ್ಮ ಭೇಟೆಯನ್ನು ಹುಡುಕುತ್ತವೆ. ಅವರ ದೃಷ್ಟಿ ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿ ಬಲವಾಗಿರುತ್ತದೆ. ಅದೇ ಕೆಲವು ಪ್ರಾಣಿಗಳು ಬಣ್ಣವನ್ನು ಗುರುತಿಸುವುದಿಲ್ಲ. ಅಂತಹ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು. ಹಾಗೆ ನೋಡಿದರೆ ಮನುಷ್ಯರಲ್ಲೂ ಕೆಲವರಿಗೆ ವರ್ಣಾಂಧತೆ ಇರುವುದನ್ನು ನಾವು ನೋಡುತ್ತೇವೆ. ಕೆಲ ಮನುಷ್ಯರಿಗೆ ಕೆಲವು ಬಣ್ಣಗಳನ್ನು ಗುರುತಿಸುವುದು ಅಸಾಧ್ಯವಾಗುತ್ತದೆ. ಕೆಲವರಿಗೆ ಕೆಂಪು, ಕೆಲವರಿಗೆ ಹಸಿರು, ಇನ್ಕೆಲವರಿಗೆ ನೀಲಿ, ಹಳದಿ ಮುಂತಾದ ಬಣ್ಣಗಳು ಕಾಣಿಸುವುದಿಲ್ಲ. ಇನ್ನು ಕೆಲವರು ಬಣ್ಣ ತಿಳಿದ್ರೂ ಅದನ್ನು ಸರಿಯಾಗಿ ಹೆಸರಿಸೋದಿಲ್ಲ. 

ನಾಯಿಗಳು ಕೆಂಪು, ಹಸಿರು ಬಣ್ಣ (Color) ವನ್ನು ಗುರುತಿಸೊಲ್ಲ :  ಇಟಲಿಯ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ನಾಯಿಗಳಿಗೆ ಕಲರ್ ಬ್ಲೈಂಡ್ ನೆಸ್ ಇರುವುದು ತಿಳಿದುಬಂದಿದೆ. ನಾಯಿಗಳು ಹಸಿರು ಮತ್ತು ಕೆಂಪು ಬಣ್ಣವನ್ನು ಗುರುತಿಸುವುದಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ನಾಯಿಗಳಿಗೆ ಕಡಿಮೆ ದೃಷ್ಟಿ ಇರುತ್ತದೆ. ಮನುಷ್ಯರ ಕಣ್ಣುಗಳಿಗೆ ಹೋಲಿಸಿದರೆ ನಾಯಿಗಳ ಕಣ್ಣಿನ ದೃಷ್ಟಿ ಎಂಟು ಪಟ್ಟು ಕಡಿಮೆ ಇದೆ. ಮನುಷ್ಯರಲ್ಲಿ ಬಣ್ಣ ಗುರುಡುತನ ಆನುವಂಶಿಕವಾಗಿ ಅಥವಾ ಕೆಲವು ದೃಷ್ಟಿದೋಷದಿಂದ ಉಂಟಾಗಬಹುದು.

ನಾಯಿಗಳಿಗೆ ಕಲರ್ ಬ್ಲೈಂಡ್ ನೆಸ್ ಇರುವ ಕಾರಣ ಡಾಗ್ ಟ್ರೇನರ್ಸ್ ಗಳಿಗೆ ಹುಲ್ಲಿನಲ್ಲಿ ತರಬೇತಿ ನೀಡುವಾಗ ಕೆಂಪು ಬಟ್ಟೆಗಳನ್ನು ಧರಿಸಬೇಡಿ ಎಂದು ಸಲಹೆ ನೀಡಲಾಗುತ್ತದೆ. ಈ ತರಹದ ಬಣ್ಣಗಳು ನಾಯಿಗಳಿಗೆ ತೊಂದರೆ ನೀಡುತ್ತವೆ. ಹಾಗೆಯೇ ಮನೆಯ ಮಂದಿ ಕೂಡ ನಾಯಿಯೊಂದಿಗೆ ಆಡುವಾಗ ಹಸಿರು ಮತ್ತು ಕೆಂಪು ಬಣ್ಣದ ಆಟಿಕೆಗಳನ್ನು ಬಳಸಬಾರದು. 

Interesting News : ಯಪ್ಪಾ..! ಕಣ್ಣು, ಹೃದಯ ತಿನ್ನೋ ಕೈದಿಗಳಿಲ್ಲಿದ್ದಾರೆ…

ಗೂಳಿ ಕೆಂಪು ಬಣ್ಣವನ್ನು ನೋಡಿದರೆ ಅಟ್ಟಿಸಿಕೊಂಡುಬರುವ ದೃಶ್ಯಗಳನ್ನು ನಾವು ಸಿನೆಮಾ, ಧಾರಾವಾಹಿಗಳಲ್ಲಿ ನೋಡಿದ್ದೇವೆ. ಕೆಲವು ಅಧ್ಯಯನಗಳು ಹೇಳುವಂತೆ ಗೂಳಿಗೂ ಕೂಡ ಬಣ್ಣ ಗುರುಡುತನವಿದೆ. ಅದು ಕೆಂಪು ಬಣ್ಣವನ್ನು ಗುರುತಿಸುವುದಿಲ್ಲ. ಅಧ್ಯಯನ ನಡೆಸುವ ಸಮಯದಲ್ಲಿ ಕೆಂಪು ಬಣ್ಣದ ಹೊರತಾಗಿ ಬೇರೆ ಬಣ್ಣದ ಬಟ್ಟೆಗಳನ್ನು ಇಟ್ಟರೂ ಗೂಳಿ ಅದರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳು ಇದೆ ಎಂದು ಅಧ್ಯಯನಕಾರರು ಹೇಳುತ್ತಾರೆ.  

click me!