
ಪ್ರತಿಯೊಂದು ಸಮಾಜ, ಸಮುದಾಯ ಹಾಗೂ ಧರ್ಮಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಭಿನ್ನತೆಗಳನ್ನು ನಾವು ಕಾಣಬಹುದು. ಕೆಲವರು ತಮ್ಮ ಸ್ಥಳೀಯ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಅನೇಕ ಸಾಂಸ್ಕೃತಿಕ ವಿಭಿನ್ನತೆಗೆ ಅನುಗುಣವಾಗಿ ಮದುವೆ ಮಾಡಿಕೊಳ್ಳುತ್ತಾರೆ. ಆದರೆ, ಪ್ರಪಂಚದ ಯಾವುದೇ ಭಾಗದಲ್ಲಿ ಮದುವೆ ನಡೆದರೂ ಮದುವೆ ಮನೆಯಲ್ಲಿ ಉಚಿತವಾಗಿ ಭರ್ಜರಿ ಬೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಇಲ್ಲಿ ನಡೆದ ಮದುವೆಯ ಮನೆಗೆ ಹೋಗಿ ಊಟ ಮಾಡಿದ ಅತಿಥಿಗಳೇ ಬರೋಬ್ಬರಿ 3,800 ರೂ. ಹಣವನ್ನು ಪಾವತಿಸಿ ಬಂದಿರುವುದನ್ನು ನೆಟ್ಟಿಗನೊಬ್ಬ ಹಂಚಿಕೊಂಡಿದ್ದಾನೆ.
ವಿಶೇಷವಾಗಿ ಮದುವೆ, ನಾಮಕರಣ ಹಾಗೂ ತಿಥಿಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಊಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ಮದುವೆಗೆ ಬಂದ ಅತಿಥಿಗಳು ಆಹಾರಕ್ಕಾಗಿ ಹಣ ಪಾವತಿಸುವಂತೆ ಕೇಳುವ ಶಿಷ್ಟಾಚಾರ ಏನು ಎಂದು ಕೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 'ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಹೋಗುವಾಗ ಅತಿಥಿಗಳು ಸ್ವಾಗತ ಭೋಜನಕ್ಕೆ ಹಣ ಪಾವತಿಸಬೇಕೇ?' ರೆಡ್ಡಿಟ್‌ನಲ್ಲಿ ಈ ಪ್ರಶ್ನೆಯನ್ನು ಕೇಳುವ ಪೋಸ್ಟ್ ವೈರಲ್ ಆಗಿದೆ.
ವಿವಾಹ ಆಚರಣೆಗಳಿಗೆ ಆಯ್ಕೆಯಾದ ಸ್ಥಳ ಇಟಲಿಯ ಫ್ಲಾರೆನ್ಸ್. ಹೆಚ್ಚಿನ ಅತಿಥಿಗಳು ಕೆನಡಾದ ವ್ಯಾಂಕೋವರ್‌ನಿಂದ ಬಂದಿದ್ದರು. ಅನೇಕ ಜನರು ವಾರಗಳು ಅಥವಾ ದಿನಗಳ ಮುಂಚಿತವಾಗಿ ಸಾವಿರಾರು ರೂಪಾಯಿಗಳ ವಿಮಾನ ಟಿಕೆಟ್‌ಗಳನ್ನು ಖರೀದಿಸಿದ್ದರು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ. ಅದು ದೀರ್ಘ ಮತ್ತು ದುಬಾರಿ ಪ್ರಯಾಣವಾಗಿತ್ತು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ. ಆದರೆ ಆ ಟಿಪ್ಪಣಿ ಬರೆದ ವ್ಯಕ್ತಿಗೆ ಅಚ್ಚರಿ ಮೂಡಿಸಿದ್ದು, ವಿಮಾನದಲ್ಲಿ ಇಷ್ಟು ದೂರ ಬಂದಿದ್ದ ಅತಿಥಿಗಳು, ಮದುವೆಯ ಹಿಂದಿನ ದಿನ ನೀಡಲಾದ ವಿವಾಹ ಆರತಕ್ಷತೆ ಭೋಜನಕ್ಕೆ 40 ಯೂರೋಗಳನ್ನು ಪಾವತಿಸಲು ಕೇಳಲಾಗಿತ್ತು.
ಇದನ್ನೂ ಓದಿ: ದೇವರಿಗೆ ಬಿಸಿ ಆಹಾರ ನೈವೇದ್ಯ ಮಾಡುವುದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟ ಗುರೂಜಿ
ಮದುವೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ಅತಿಥಿಗಳಿಂದ ಊಟಕ್ಕೆ ಹಣ ಕೇಳಿದಾಗ ತನಗೆ ಆಘಾತವಾಯಿತು ಎಂದು ಅವರು ಹೇಳಿದ್ದಾರೆ. ಇದು ಸಾಮಾನ್ಯ ಸೌಜನ್ಯವೋ ಅಥವಾ ಕೆಟ್ಟ ವಿಷಯವೋ ಎಂದು ಅವರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೇಳಿದ್ದಾರೆ. ನಾನು ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ನವವಿವಾಹಿತರಿಗೆ ಏನಾದರೂ ಉಡುಗೊರೆ ನೀಡಬೇಕೆಂದು ಬಯಸಿದ್ದೆ, ಆದರೆ ಅವರು ಊಟಕ್ಕೆ ಹಣ ಕೇಳಿದ್ದರಿಂದ ಆ ಯೋಜನೆಯನ್ನು ಕೈಬಿಟ್ಟೆ ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮದುವೆಯ ಊಟಕ್ಕಾಗಿ ಹಣ ಪಾವತಸಿದ ರೆಡ್ಡಿಟ್‌ನಲ್ಲಿನ ಪೋಸ್ಟ್ ಬೇಗನೆ ವೈರಲ್ ಆಯಿತು. ಆ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಸ್ವಾಗತ ಊಟದ ವೆಚ್ಚವನ್ನು ಅತಿಥಿಗಳಲ್ಲ, ಆತಿಥೇಯರು ಪಾವತಿಸಬೇಕೆಂದು ಅನೇಕರು ಬರೆದಿದ್ದಾರೆ. ಕೆಲವರು ಇದು ತುಂಬಾ ವಿಚಿತ್ರವಾದ ಪದ್ಧತಿ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ನಡುವೆ ಕೆಲವರು ತಾವು ಭಾಗವಹಿಸಿದ ಮದುವೆಯಲ್ಲಿ ಆಹಾರಕ್ಕಾಗಿ $250 ಪಾವತಿಸಲು ಒತ್ತಾಯಿಸಲ್ಪಟ್ಟ ಕಥೆಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಮದುವೆಗೆ ಹಾಜರಾಗುವವರನ್ನು ಆಹಾರಕ್ಕಾಗಿ ಹಣ ಪಾವತಿಸಲು ಕೇಳುವುದು ಸಂಪ್ರದಾಯವಾಗುವ ಸಾಧ್ಯತೆಯಿದೆ ಎಂದು ಕೆಲವರು ಬರೆದಿದ್ದಾರೆ.
ಇದನ್ನೂ ಓದಿ: ನಾವು ಸಂಪಾದಿಸಿದ ಆಸ್ತಿ ಸತ್ತ ನಂತರ ಯಾರಿಗೆ ಸೇರಬೇಕು? ವಿಲ್ ರಿಜಿಸ್ಟರ್ ಮಾಡಿಸೋದು ಹೇಗೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.